Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2026: ಜರ್ಮನಿಗೆ ಭರ್ಜರಿ ಜಯ, ಸ್ವೀಡನ್ ಗೆಲುವಿನ ಆರಂಭ

ಫಿಫಾ ವಿಶ್ವಕಪ್‌ ಆರಂಭವಾಗಿದೆ. ಈ ಮೆಗಾ ಈವೆಂಟ್‌ನಲ್ಲಿ ಜರ್ಮನಿ ಭರ್ಜರಿ ಶುಭಾರಂಭ ಮಾಡಿದೆ. ಫುಟ್ಬಾಲ್‌ ವಿಶ್ವಕಪ್‌ನ 'ಇ' ಗುಂಪಿನ ಪಂದ್ಯದಲ್ಲಿ ಜರ್ಮನಿ 7-1 ರಿಂದ ಕ್ಯುರಸಾವೊ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಭರ್ಜರಿ ಆರಂಭವನ್ನು ಮಾಡಿದೆ.

ಜರ್ಮನಿ ತಂಡದ ಪರ ಕೈ ಹ್ಯಾವರ್ಟ್ಜ್, ಡೆನಿಸ್ ಉಂದಾವ್, ನಥಾನಿಯಲ್ ಬ್ರೌನ್, ಜಮಾಲ್ ಮುಸಿಯಾಲಾ, ನಿಕೋ ಶ್ಲೋಟರ್ಬೆಕ್, ಫೆಲಿಕ್ಸ್ ನ್ಮೆಚಾ ಗೋಲು ಬಾರಿಸಿ ಮಿಂಚಿದರು. ಪರಾಜಿತ ತಂಡ ಕ್ಯುರಸಾವೊ ಪರ ಲಿವಾನೊ ಕೊಮೆನೆನ್ಸಿಯಾ ಗೋಲು ದಾಖಲಿಸಿದರು.

FIFA World Cup 2026

ಪಂದ್ಯದ ಆರಂಭದಲ್ಲೇ ಜರ್ಮನಿ ತಂಡವು ಕ್ಯುರಸಾವೊ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲುಗಳ ಖಾತೆ ತೆರೆಯಿತು. ಜರ್ಮನಿಯ ಮುಂಚೂಣಿ ಆಟಗಾರರು ಕ್ಯುರಸಾವೊ ಗೋಲ್‌ಕೀಪರ್ ಎಲೋಯ್ ರೂಮ್ ಅವರ ಸವಾಲನ್ನು ಮೀರಿ ಸಾಲು ಸಾಲು ಗೋಲುಗಳನ್ನು ಬಾರಿಸುವ ಮೂಲಕ ಪಂದ್ಯದ ಮೇಲಿನ ಹಿಡಿತವನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡರು.

ಪಂದ್ಯದ ಆರಂಭದ 6ನೇ ನಿಮಿಷದಲ್ಲೇ ಜರ್ಮನಿಯ ಮಿಡ್‌ಫೀಲ್ಡರ್‌ಗಳ ಅತ್ಯುತ್ತಮ ಹೊಂದಾಣಿಕೆಯ ಆಟದಿಂದ ಫೆಲಿಕ್ಸ್ ನ್ಮೆಚಾ ಅವರಿಗೆ ಅದ್ಭುತ ಅವಕಾಶ ಸೃಷ್ಟಿಯಾಯಿತು. ಚೆಂಡನ್ನು ನಿಯಂತ್ರಣಕ್ಕೆ ಪಡೆದ ನ್ಮೆಚಾ, ಬಾಕ್ಸ್‌ನ ಹೊರಗಿನಿಂದಲೇ ಕ್ಯುರಸಾವೊ ಗೋಲ್‌ಕೀಪರ್‌ಗೆ ಯಾವುದೇ ಅವಕಾಶ ನೀಡದಂತೆ ನಿಖರ ಹಾಗೂ ಬಲಿಷ್ಠವಾದ ಶಾಟ್ ಹೊಡೆಯುವ ಮೂಲಕ ಪಂದ್ಯದ ಮೊದಲ ಗೋಲು ಗಳಿಸಿದರು. ಇದೇ ಅವಧಿಯಲ್ಲಿ 38ನೇ ನಿಮಿಷದಲ್ಲಿ ನಿಕೋ ಶ್ಲೋಟರ್ಬೆಕ್ ಭರ್ಜರಿ ಗೋಲು ಬಾರಿಸಿ ಮಿಂಚಿದರು. ಇನ್ನು ಈ ಅವಧಿಯಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಕೈ ಹ್ಯಾವರ್ಟ್ಜ್ ಬಳಸಿಕೊಂಡು ತಂಡಕ್ಕೆ ಮುನ್ನಡೆ ನೀಡುವಲ್ಲಿ ಸಫಲರಾದರು. ಜರ್ಮನಿ ಮೊದಲ ಅವಧಿಯಲ್ಲಿ 3-0 ಯಿಂದ ಮುನ್ನಡೆ ಸಾಧಿಸಿದರು.

ಎರಡನೇ ಅವಧಿಯ ಆರಂಭದ ಎರಡನೇ ನಿಮಿಷದಲ್ಲಿ ಜಮಾಲ್ ಮುಸಿಯಾಲಾ, 68ನೇ ನಿಮಿಷದಲ್ಲಿ ನಥಾನಿಯಲ್ ಬ್ರೌನ್ ಗೋಲು ಬಾರಿಸಿದರು. ಇನ್ನು 78ನೇ ನಿಮಿಷದಲ್ಲಿ ಡೆನಿಸ್ ಉಂದಾವ್ ಸಹ ಗೋಲು ಬಾರಿಸಿದರು. ಹಾವರ್ಟ್ಜ್ ನೀಡಿದ ಈ ನಿಖರವಾದ ಕ್ರಾಸ್ ಪಾಸ್ ಕ್ಯುರಸಾವೊ ತಂಡದ ಡಿಫೆಂಡರ್‌ಗಳನ್ನು ದಾಟಿ ನೇರವಾಗಿ ಡಿ-ಬಾಕ್ಸ್ ಮಧ್ಯದಲ್ಲಿದ್ದ ಡೆನಿಸ್ ಉಂದಾವ್ ಅವರತ್ತ ಬಂದಿತು. ಈ ಅವಕಾಶವನ್ನು ಬಳಸಿಕೊಂಡ ಡೆನಿಸ್ ಉಂದಾವ್ ಪಂದ್ಯದ 78ನೇ ನಿಮಿಷದಲ್ಲಿ ಗೋಲು ಬಾರಿಸಿದ್ದಾರೆ. ಕೈ ಹ್ಯಾವರ್ಟ್ಜ್ ಇದೇ ಅವಧಿಯಲ್ಲಿ ಮಿಂಚಿದರು. ಪರಿಣಾಮ ಜರ್ಮನಿ ದೊಡ್ಡ ಗೆಲುವು ದಾಖಲಿಸುವಲ್ಲಿ ಶ್ರಮಿಸಿದರು.

ಅಂಕ ಹಂಚಿಕೊಂಡ ನೆದರ್‌ಲ್ಯಾಂಡ್

ಗ್ರೂಪ್ 'ಎಫ್‌' ನ ಈ ರೋಮಾಂಚಕ ಪಂದ್ಯದಲ್ಲಿ ನೆದರ್‌ಲ್ಯಾಂಡ್‌ ಮತ್ತು ಜಪಾನ್ ತಂಡಗಳು ಭರ್ಜರಿ ಪೈಪೋಟಿ ನಡೆಸಿದವು. ಉಭಯ ತಂಡಗಳು ತಲಾ 2 ಗೋಲುಗಳನ್ನು ಬಾರಿಸುವ ಮೂಲಕ ಪಂದ್ಯವು 2-2 ರಿಂದ ಸಮಬಲದಲ್ಲಿ ಕೊನೆಗೊಂಡಿತು. ಪರಿಣಮವಾಗಿ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಳ್ಳುವಲ್ಲಿ ಯಶಸ್ವಿಯಾದವು.

FIFA World Cup 2026

ಇದೇ ಗುಂಪಿನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಟುನೀಶಿಯಾ ವಿರುದ್ಧ ಸ್ವೀಡನ್ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಪರಿಣಾಮ 5-1 ಭರ್ಜರಿ ಜಯ ಸಾಧಿಸಿ ಮಿಂಚಿತು. ಸ್ವೀಡನ್ ಪರ ಯಾಸಿನ್ ಆಯಾರಿ (ಎರಡು ಗೋಲು), ಅಲೆಕ್ಸಾಂಡರ್ ಇಸಾಕ್, ವಿಕ್ಟರ್ ಗ್ಯೋಕೆರೆಸ್ ಮತ್ತು ಮಟಿಯಾಸ್ ಸ್ವಾನ್‌ಬರ್ಗ್ ತಲಾ ಒಂದು ಗೋಲು ಬಾರಿಸಿದರು.

ಕೊನೆಯ ಕ್ಷಣದಲ್ಲಿ ಮಿಂಚಿದ ಐವರಿ ಕೋಸ್ಟ್

ಇ ಗುಂಪಿನಲ್ಲಿ ಐವರಿ ಕೋಸ್ಟ್ ಗೆಲುವಿನ ಆರಂಭವನ್ನು ಮಾಡಿದೆ. ಮೊದಲ ಪಂದ್ಯದಲ್ಲಿ ಐವರಿ ಕೋಸ್ಟ್ 1-0 ಗೋಲುಗಳಿಂದ ಈಕ್ವೆಡಾರ್ ವಿರುದ್ಧ ಜಯ ಸಾಧಿಸಿತು. ಪಂದ್ಯದ ಕೊನೆಯ ಹಂತದವರೆಗೂ ಉಭಯ ತಂಡಗಳು ಗೋಲು ಗಳಿಸಲು ಹೆಣಗಾಡಿದವು, ಆದರೆ ಪಂದ್ಯದ ಕೊನೆಯ ನಿಮಿಷದಲ್ಲಿ ಐವರಿ ಕೋಸ್ಟ್‌ನ ಅಹ್ಮದ್ ಡಿಯಾಲೊ ಬಾರಿಸಿದ ಏಕೈಕ ಗೋಲು ತಂಡದ ಗೆಲುವನ್ನು ನಿರ್ಧರಿಸಿತು.

Story first published: Monday, June 15, 2026, 9:53 [IST]
Other articles published on Jun 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+