FIFA World Cup: ಉದ್ಘಾಟನೆಗೆ ಕ್ಷಣಗಣನೆ, ಉಚಿತವಾಗಿ ಹೇಗೆ ನೋಡುವುದು? ಇಲ್ಲಿದೆ ವಿಶ್ವಕಪ್‌ನ ಸಂಪೂರ್ಣ ಮಾಹಿತಿ
ಫಿಫಾ ವಿಶ್ವಕಪ್ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. 23ನೇ ಆವೃತ್ತಿಯ ಫುಟ್ಬಾಲ್ ವಿಶ್ವಕಪ್‌ನಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ. ಫುಟ್‌ಬಾಲ್ ಸಾಮ್ರಾಜ್ಯದ ಅಧಿಪತಿಯಾಗಲು ಜಗತ್ತಿನ ದಿಗ್ಗಜ ತಂಡಗಳು ಸಜ್ಜಾಗಿವೆ. ಮೈದಾನದಲ್ಲಿ ಚೆಂಡಿನೊಂದಿಗೆ ಮಾಂತ್ರಿಕ ಆಟ ಪ್ರದರ್ಶಿಸುವ ಆಟಗಾರರು ಒಂದೆಡೆಯಾದರೆ, ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ಇನ್ನೊಂದಿಡೆ. ಈ ಬಾರಿಯ ಚಾಂಪಿಯನ್ ಯಾರಾಗಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ.
ಮೈದಾನದಲ್ಲಿ ಪ್ರತಿ ಸೆಕೆಂಡ್‌ನಲ್ಲೂ ಬದಲಾಗುವ ರೋಮಾಂಚನ, ಸೋಲು-ಗೆಲುವಿನ ನಡುವಿನ ಕಣ್ಣೀರು ಮತ್ತು ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಯುವಕರು ಕಮಾಲ್ ಮಾಡಲು ಸಿದ್ಧರಾಗಿದ್ದರೆ, ಅನುಭವಿಗಳು ಅಬ್ಬರಿಸಲು ರೆಡಿಯಾಗಿದ್ದಾರೆ. ಈ ಬಾರಿಯ ಫಿಫಾ ವಿಶ್ವಕಪ್‌ನ ಕಂಪ್ಲೀಟ್ ವರದಿ ಇಲ್ಲಿದೆ.

ಈ ಬಾರಿಯ ಫಿಫಾ ವಿಶ್ವಕಪ್ ಎಷ್ಟು ದೇಶಗಳಲ್ಲಿ ಆಯೋಜಿಸಲಾಗುತ್ತಿದೆ?
23ನೇ ಆವೃತ್ತಿಯ ಫಿಫಾ ವಿಶ್ವಕಪ್‌ನ್ನು ಅಮೆರಿಕ, ಕೆನಡಾ, ಮೆಕ್ಸಿಕೊ ದೇಶಗಳು ಜಂಟಿಯಾಗಿ ಆಯೋಜಿಸುತ್ತಿವೆ.
ಈ ಬಾರಿ ಫುಟ್ಬಾಲ್ ವಿಶ್ವಕಪ್ ಎಷ್ಟು ಕ್ರೀಡಾಂಗಣದಲ್ಲಿ ನಡೆಯಲಿದೆ?
ಅಮೆರಿಕದ ಮೈದಾನಗಳು: ಮೆಟ್‌ಲೈಫ್ ಸ್ಟೇಡಿಯಂ (ನ್ಯೂಯಾರ್ಕ್), ಸೋಫಿ ಸ್ಟೇಡಿಯಂ (ಲಾಸ್ ಏಂಜಲೀಸ್), ಮರ್ಸಿಡಿಸ್-ಬೆಂಜ್ ಸ್ಟೇಡಿಯಂ (ಅಟ್ಲಾಂಟಾ), ಎಟಿ&ಟಿ ಸ್ಟೇಡಿಯಂ (ಡಲ್ಲಾಸ್), ಹಾರ್ಡ್ ರಾಕ್ ಸ್ಟೇಡಿಯಂ (ಮಿಯಾಮಿ), ಆರೋಹೆಡ್ ಸ್ಟೇಡಿಯಂ (ಕನ್ಸಾಸ್ ಸಿಟಿ), ಗಿಲೆಟ್ ಸ್ಟೇಡಿಯಂ (ಬಾಸ್ಟನ್), ಎನ್‌ಆರ್‌ಜಿ ಸ್ಟೇಡಿಯಂ (ಹೂಸ್ಟನ್), ಲಿಂಕನ್ ಫೈನಾನ್ಷಿಯಲ್ ಫೀಲ್ಡ್ (ಫಿಲಡೆಲ್ಫಿಯಾ), ಲುಮೆನ್ ಫೀಲ್ಡ್ (ಸಿಯಾಟಲ್) ಮತ್ತು ಲೆವಿಸ್ ಸ್ಟೇಡಿಯಂ (ಸ್ಯಾನ್ ಫ್ರಾನ್ಸಿಸ್ಕೋ).
ಮೆಕ್ಸಿಕೊದ ಮೈದಾನಗಳು: ಎಸ್ಟಾಡಿಯೋ ಅಜ್ಟೆಕಾ (ಮೆಕ್ಸಿಕೊ ಸಿಟಿ), ಎಸ್ಟಾಡಿಯೋ ಬಿಬಿವಿಎ (ಮೊಂಟೆರಿ) ಮತ್ತು ಎಸ್ಟಾಡಿಯೋ ಅಕ್ರಾನ್ (ಗವಾಡಲಜಾರಾ).
ಕೆನಡಾದ ಮೈದಾನಗಳು: ಬಿಸಿ ಪ್ಲೇಸ್ (ವ್ಯಾಂಕೋವರ್) ಮತ್ತು ಬಿಎಂಒ ಫೀಲ್ಡ್ (ಟೊರೊಂಟೊ).
23ನೇ ಆವೃತ್ತಿಯ ವಿಶ್ವಕಪ್‌ನಲ್ಲಿ ಎಷ್ಟು ತಂಡಗಳು ಭಾಗವಹಿಸುತ್ತಿವೆ?
ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ 48 ತಂಡಗಳು ಭಾಗವಹಿಸುತ್ತಿವೆ. 4 ತಂಡಗಳನ್ನು ಒಟ್ಟು 12 ಗುಂಪುಗಳಲ್ಲಿ ವಿಂಗಡಿಸಲಾಗಿದೆ.
ಹಾಲಿ ಚಾಂಪಿಯನ್ ಪಟ್ಟ ಹೊಂದಿರುವ ತಂಡ ಯಾವುದು?
ಅರ್ಜೆಂಟೀನಾ ತಂಡ ಹಾಲಿ ವಿಶ್ವ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ.
ಎಷ್ಟು ದಿನಗಳ ಕಾಲ ಫಿಫಾ ವಿಶ್ವಕಪ್ ನಡೆಯಲಿದೆ?
ಈ ಬಾರಿಯ ಫಿಫಾ ವಿಶ್ವಕಪ್ ಜೂನ್ 11 (ಅಮೆರಿಕ) ರಿಂದ ಜುಲೈ 19 (ಅಮೆರಿಕ) ವರೆಗೆ ಒಟ್ಟು 39 ದಿನಗಳ ಕಾಲ ನಡೆಯಲಿದೆ.
ಫಿಫಾ ವಿಶ್ವಕಪ್‌ನಲ್ಲಿ ನಡೆಯಲಿರುವ ಪಂದ್ಯಗಳ ಸಂಖ್ಯೆ ಎಷ್ಟು?
104 ಪಂದ್ಯಗಳು ಈ ಬಾರಿಯ ಫುಟ್ಬಾಲ್ ವಿಶ್ವಕಪ್‌ನಲ್ಲಿ ನಡೆಯಲಿದೆ.
ಫಿಫಾ ವಿಶ್ವಕಪ್ ವಿಜೇತ ತಂಡಕ್ಕೆ ಲಭಿಸುವ ಬಹುಮಾನ ಮೊತ್ತ ಎಷ್ಟು?
ವಿಶ್ವಕಪ್ ಮುಡಿಗೇರಿಸಿಕೊಳ್ಳುವ ವಿಜೇತ ತಂಡಕ್ಕೆ ಬರೋಬ್ಬರಿ 50 ಮಿಲಿಯನ್ ಡಾಲರ್ ಬಹುಮಾನ ಸಿಗಲಿದೆ. ಇದನ್ನು ಭಾರತೀಯ ರೂಪಾಯಿಗಳಲ್ಲಿ ಲೆಕ್ಕ ಹಾಕಿದರೆ ಸುಮಾರು 450 ರಿಂದ 475 ಕೋಟಿ ರೂಪಾಯಿ.
ಭಾರತದಲ್ಲಿ ಫಿಫಾ ವಿಶ್ವಕಪ್ ಉಚಿತವಾಗಿ ನೋಡುವುದು ಹೇಗೆ?
ಡಿಡಿ ಸ್ಪೋರ್ಟ್ಸ್ (DD Sports) ವಾಹಿನಿಯಲ್ಲೂ ಫಿಫಾ ವಿಶ್ವಕಪ್ ಆಯ್ದ ಪಂದ್ಯಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ. ಇನ್ನು ನಿಮ್ಮ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್ ಟಿವಿಗಳಲ್ಲಿ ಜಿ5 ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ವಿಶ್ವಕಪ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು. ಟಿವಿಯಲ್ಲಿ ಪಂದ್ಯಗಳನ್ನು ನೋಡಲು ಝೀ ಸಂಸ್ಥೆಯು ಹೊಸದಾಗಿ ಆರಂಭಿಸಿರುವ 'ಯುನೈಟೆಡ್8 ಸ್ಪೋರ್ಟ್ಸ್' ಚಾನೆಲ್‌ಗಳಲ್ಲಿ ನೇರ ಪ್ರಸಾರ ಲಭ್ಯವಿರಲಿದೆ.
ಭಾರತದಲ್ಲಿ ಫುಟ್ಬಾಲ್ ವಿಶ್ವಕಪ್‌ನ ನೇರ ಪ್ರಸಾರದ ಸಮಯ ಯಾವಾಗ?
ರಾತ್ರಿ 10:30, ಮಧ್ಯರಾತ್ರಿ 12:30 ಮತ್ತು ರಾತ್ರಿ 1:30 ಕ್ಕೆ ಆರಂಭವಾಗುತ್ತವೆ. ಇನ್ನು ಕೆಲವು ಪಂದ್ಯಗಳು ಮುಂಜಾನೆ 3:30, ಬೆಳಗ್ಗೆ 4:30, 6:30, 7:30 ಹಾಗೂ ಬೆಳಗ್ಗೆ 9:30 ಕ್ಕೆ ಪಂದ್ಯಗಳು ನೇರ ಪ್ರಸಾರವಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

