Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2026: ಕತಾರ್ ವಿರುದ್ಧ 6-0 ಭರ್ಜರಿ ಗೆಲುವು ಸಾಧಿಸಿ ಇತಿಹಾಸ ಬರೆದ ಕೆನಡಾ

ವ್ಯಾಂಕೋವರ್: ಫಿಫಾ ವಿಶ್ವಕಪ್ ಆಯೋಜಿಸುತ್ತಿರುವ ಹಕ್ಕು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಕೆನಡಾ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಭರ್ಜರಿ ಪ್ರದರ್ಶನ ನೀಡಿ ಇತಿಹಾಸ ನಿರ್ಮಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಕೆನಡಾ 6-0 ಗೋಲುಗಳಿಂದ ಕತಾರ್‌ ತಂಡವನ್ನು ಮಣಿಸಿ ಇತಿಹಾಸ ನಿರ್ಮಿಸಿದೆ.

ಗುರುವಾರ ಬಿಸಿ ಪ್ಲೇಸ್ ವ್ಯಾಂಕೋವರ್ ನಡೆದ ಪಂದ್ಯದಲ್ಲಿ ಕೆನಡಾ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದೆ. ಕೆನಡಾದ ಸ್ಟಾರ್ ಆಟಗಾರ ಜೊನಾಥನ್ ಡೇವಿಡ್ ಮೂರು ಅದ್ಭುತ ಗೋಲುಗಳನ್ನು ಬಾರಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಕೆನಡಿಯನ್ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. 1986 ಮತ್ತು 2022ರ ವಿಶ್ವಕಪ್‌ಗಳಲ್ಲಿ ಕೆನಡಾ ಒಂದೂ ಪಂದ್ಯ ಗೆದ್ದಿರಲಿಲ್ಲ. ಆದರೆ ಈ ಬಾರಿ ತನ್ನದೇ ದೇಶದ ನೆಲದಲ್ಲಿ ಮೊದಲ ಗೆಲುವು ದಾಖಲಿಸಿರುವುದು ಅಲ್ಲಿನ ಫುಟ್‌ಬಾಲ್ ಅಭಿಮಾನಿಗಳಿಗೆ ಖುಷಿ ನೀಡಿದೆ.

FIFA World Cup 2026

ಕೆನಡಾ ಪಂದ್ಯದ ಮೊದಲ ಅರ್ಧದಿಂದಲೂ ಚೆಂಡಿನ ಮೇಲೆ ಹಿಡಿತ ಸಾಧಿಸಿ ಅಬ್ಬರಿಸಿತು. ಈ ಅವಧಿಯಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಕತಾರ್ ಗೋಲ್‌ ಕೀಪರ್‌ ವಂಚಿಸುವಲ್ಲಿ ಸಫಲವಾಯಿತು. ಈ ಅವಧಿಯ 16ನೇ ನಿಮಿಷದಲ್ಲಿ ಕೈಲ್ ಲಾರಿನ್ ಗೋಲು ದಾಖಲಿಸಿದರು. ಇದೇ ಅವಧಿಯಲ್ಲ ಜೊನಾಥನ್ ಡೇವಿಡ್ 29, 45ನೇ ನಿಮಿಷದಲ್ಲಿ ಗೋಲು ದಾಖಲಿಸಿ ಅಂತರವನ್ನು ಹಿಗ್ಗಿಸಿದರು. ಪರಿಣಾಮ ಈ ಅವಧಿಯಲ್ಲಿ ಕೆನಡಾ 3-0 ಮುನ್ನಡೆ ಸಾಧಿಸಿತು.

FIFA World Cup 2026: ತಾಯಿಗಾಗಿ ಕಣ್ಣೀರಿಟ್ಟ ಮಗ, ಸ್ಪಂದಿಸಿದ ಅಮೆರಿಕ ಸರ್ಕಾರ; ತುರ್ತು ವೀಸಾ ಭಾಗ್ಯ

FIFA World Cup 2026: ತಾಯಿಗಾಗಿ ಕಣ್ಣೀರಿಟ್ಟ ಮಗ, ಸ್ಪಂದಿಸಿದ ಅಮೆರಿಕ ಸರ್ಕಾರ; ತುರ್ತು ವೀಸಾ ಭಾಗ್ಯ

ಎರಡನೇ ಅವಧಿಯಲ್ಲಿ ನಾಥನ್ ಸಾಲಿಬಾ ಸಹ ಕೆನಡಾ ತಂಡದ ಪರ ಮತ್ತೊಂದು ಗೋಲು ದಾಖಲಿಸಿದರು. ಇದೇ ಅವಧಿಯಲ್ಲಿ ಕತಾರ್ ಆಟಗಾರ ಮೊಹಮ್ಮದ್ ಮನೈ ಸಹ ಒಂದು ಉಡುಗೊರೆ ಗೋಲ್‌ನ್ನು ಕೆನಡಾ ತಂಡಕ್ಕೆ ನೀಡಿದರು. ಹೆಚ್ಚುವರಿ ಸಮಯದಲ್ಲಿ ಕೆನಡಾ ತಂಡದ ಜೊನಾಥನ್ ಡೇವಿಡ್ ಹ್ಯಾಟ್ರಿಕ್‌ ಗೋಲಿನ ನಗೆ ಬೀರಿದರು. ಕೆನಡಾ 6-0 ಗೋಲುಗಳ ಅಂತರದಿಂದ ಜಯ ಸಾಧಿಸಿದೆ.

ರೆಡ್ ಕಾರ್ಡ್‌ ಶಿಕ್ಷೆ

ಪಂದ್ಯದ ವೇಳೆ ಖತಾರ್ ತಂಡದ ಹೊಮಾಮ್ ಅಹ್ಮದ್ ಮತ್ತು ಅಸಿಮ್ ಮಡಿಬೊ ರೆಡ್ ಕಾರ್ಡ್ ಪಡೆದು ಮೈದಾನದಿಂದ ಹೊರನಡೆದಿದ್ದರಿಂದ, ಕತಾರ್ ಕೇವಲ 9 ಆಟಗಾರರೊಂದಿಗೆ ಆಡಬೇಕಾಯಿತು. ಇದರ ಪೂರ್ಣ ಲಾಭವನ್ನು ಕೆನಡಾ ಪಡೆಯಿತು.

ಆಸಿಡ್ ದಾಳಿಗೊಳಗಾಗಿದ್ದ ಯೋನೆ ವಿಸ್ಸಾ ಇಂದು ಫುಟ್‌ಬಾಲ್ ಹೀರೋ: ಪೋರ್ಚುಗಲ್‌ಗೆ‌ ಶಾಕ್‌ ನೀಡಿದ ಆಟಗಾರ ಯಾರು?

ಆಸಿಡ್ ದಾಳಿಗೊಳಗಾಗಿದ್ದ ಯೋನೆ ವಿಸ್ಸಾ ಇಂದು ಫುಟ್‌ಬಾಲ್ ಹೀರೋ: ಪೋರ್ಚುಗಲ್‌ಗೆ‌ ಶಾಕ್‌ ನೀಡಿದ ಆಟಗಾರ ಯಾರು?

ಸ್ವಿಟ್ಜರ್‌ಲ್ಯಾಂಡ್‌ಗೆ ಭರ್ಜರಿ ಜಯ

ಕ್ಯಾಲಿಫೋರ್ನಿಯಾದ ಲಾಸ್ ಆಂಜೆಲಸ್ ಸ್ಟೇಡಿಯಂನಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಸ್ವಿಟ್ಜರ್‌ಲ್ಯಾಂಡ್ ತಂಡವು ಬೋಸ್ನಿಯಾ ಮತ್ತು ಹರ್ಜೆಗೋವಿನಾ ವಿರುದ್ಧ 4-1 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಜೋಹಾನ್ ಮಂಜಾಂಬಿ (74ನೇ ಮತ್ತು 90ನೇ ನಿಮಿಷ) ಎರಡು ಗೋಲು ಬಾರಿಸಿ ತಂಡದ ಗೆಲುವಿನ ರೂವಾರಿಯಾದರು. ಉಳಿದಂತೆ ರುಬೆನ್ ವರ್ಗಾಸ್ (84ನೇ ನಿಮಿಷ) ಮತ್ತು ನಾಯಕ ಗ್ರಾನಿಟ್ ಷಾಕಾ (90+7ನೇ ನಿಮಿಷ, ಪೆನಾಲ್ಟಿ) ತಲಾ ಒಂದು ಗೋಲು ಗಳಿಸಿದರು. ಬೋಸ್ನಿಯಾ ಪರ ಎರ್ಮಿನ್ ಮಹ್ಮಿಚ್ (90+2ನೇ ನಿಮಿಷ) ಒಂದು ಗೋಲು ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಈ ಭರ್ಜರಿ ಗೆಲುವಿನೊಂದಿಗೆ ಸ್ವಿಟ್ಜರ್‌ಲ್ಯಾಂಡ್ ತಂಡವು ಒಟ್ಟು 4 ಅಂಕಗಳನ್ನು ಪಡೆದು ಬಿ ಗುಂಪಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

FIFA World Cup 2026

ಮೆಕ್ಸಿಕೊಗೆ ಗೆಲುವು

ಮೆಕ್ಸಿಕೊ ತಂಡ ತವರಿನಲ್ಲಿ ಅರ್ಭಟಿಸಿದೆ. ಗುರುವಾರ ಗ್ವಾಡಲಜರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೆಕ್ಸಿಕೊ ತಂಡವು ದಕ್ಷಿಣ ಕೊರಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೆಕ್ಸಿಕೋ ತಂಡವು ಅಂಕ ಪಟ್ಟಿಯಲ್ಲಿಎ ಗುಂಪಿನಲ್ಲಿ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಮುಂದಿನ ಹಂತಕ್ಕೆ ಅಧಿಕೃತವಾಗಿ ಅರ್ಹತೆ ಪಡೆದಿದೆ.

Story first published: Friday, June 19, 2026, 10:04 [IST]
Other articles published on Jun 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+