For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2026: ಮೂರು ದೇಶಗಳಿಗೆ ಆತಿಥ್ಯ: ನ್ಯೂ ಜೆರ್ಸಿಯಲ್ಲಿ ಫೈನಲ್‌

ಫಿಫಾ ವಿಶ್ವಕಪ್ 2026 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯವು ಜುಲೈ 19, 2026 ರಂದು ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಫುಟ್ಬಾಲ್ ಅಭಿಮಾನಿಗಳಿಗೆ ಫಿಫಾ ವಿಶ್ವಕಪ್ ಕ್ರೇಜ್ ಪದಗಳಲ್ಲಿ ವ್ಯಕ್ತಪಡಿಸಲು ಆಗದು. ಈ ಮೆಗಾ ಇವೆಂಟ್‌ಗಾಗಿಯೇ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಅಭಿಮಾನಿಗಳು ಈಗಿನಿಂದಲೇ ಈ ಮಹಾ ಈವೆಂಟ್‌ಗೆ ಲೆಕ್ಕಾಚಾರ ಆರಂಭಿಸಿದ್ದಾರೆ. ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿ ಫಿಫಾ ಈವೆಂಟ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ.

FIFA World Cup 2026: MetLife Stadium in New York City Secures the Grand Finale for the

ಫಿಫಾ ವಿಶ್ವಕಪ್ 11 ಜೂನ್ 2026 ರಂದು ಪ್ರಾರಂಭವಾಗುತ್ತದೆ. ಉದ್ಘಾಟನಾ ಸಮಾರಂಭವು ಮೆಕ್ಸಿಕೋ ನಗರದ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದೇ ಅಂಗಳದಲ್ಲಿ ಮೊದಲ ಪಂದ್ಯವೂ ಸಹ ನಡೆಯಲಿದೆ. ಆದರೆ, ಜುಲೈ 19 ರಂದು ನ್ಯೂಯಾರ್ಕ್ ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. 16 ಆತಿಥೇಯ ನಗರಗಳಿಂದ 48 ತಂಡಗಳು ಈ ಪಂದ್ಯಾವಳಿಯ ಭಾಗವಾಗಿವೆ. 16 ಅತ್ಯಾಧುನಿಕ ಕ್ರೀಡಾಂಗಣಗಳಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ. ಇದನ್ನು ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ಎಂಬ ಮೂರು ದೇಶಗಳು ಆಯೋಜಿಸಲಾಗುತ್ತಿದೆ.

ಮೆಟ್‌ಲೈಫ್ ಸ್ಟೇಡಿಯಂ 2010 ರಲ್ಲಿ ಪೂರ್ಣಗೊಂಡಿತು. 82,500 ಆಸನಗಳ ಈ ಕ್ರೀಡಾಂಗಣದಲ್ಲಿ 2016 ರ ಕೋಪಾ ಅಮೇರಿಕಾ ಫೈನಲ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಪಂದ್ಯದ ವೇಳಾಪಟ್ಟಿಯ ಪ್ರಕಾರ, ಪಂದ್ಯಾವಳಿಯ 104 ಪಂದ್ಯಗಳ ಆಯೋಜನೆಗೆ ಕಾಲಾವಕಾಶ ಸಹ ಸಿಗುತ್ತದೆ. ಒಂದು ಪಂದ್ಯದ ಬಳಿಕ ಇನ್ನೊಂದು ಪಂದ್ಯ ಆಡಲು ಒಂದು ತಂಡಕ್ಕೆ ಕನಿಷ್ಠ ಮೂರು ದಿನಗಳ ಬಿಡುವ ನೀಡಲಾಗುತ್ತದೆ. ತಂಡಗಳು ಮತ್ತು ಅಭಿಮಾನಿಗಳಿಗೆ ಪ್ರಯಾಣವನ್ನು ಕಡಿಮೆ ಮಾಡಲು ಹೆಚ್ಚಿನ ಪಂದ್ಯಗಳನ್ನು ಮೂರು ವಲಯಗಳಲ್ಲಿ (ಪೂರ್ವ, ಮಧ್ಯ ಮತ್ತು ಪಶ್ಚಿಮ) ಆಡಲಾಗುತ್ತದೆ.

ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೊ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆನಡಾ, ಮೆಕ್ಸಿಕೊ ಮತ್ತು ಯುನೈಟೆಡ್ ಸ್ಟೇಟ್ಸ್‌ನ 16 ಅತ್ಯಾಧುನಿಕ ಸ್ಟೇಡಿಯಂಗಳಲ್ಲಿ 104 ಪಂದ್ಯಗಳಲ್ಲಿ ನಡೆಯಲಿವೆ. ಈ ದೇಶಗಳು ಉತ್ತಮವಾಗಿ ಫಿಫಾ ವಿಶ್ವಕಪ್‌ ಆಯೋಜಿಸಲಿವೆ. FIFA ವಿಶ್ವಕಪ್ ಅನ್ನು ಪ್ರದರ್ಶಿಸಲು ನಮ್ಮ ಮೂರು ಆತಿಥೇಯ ದೇಶಗಳು ಮತ್ತು 16 ಆತಿಥೇಯ ನಗರಗಳಲ್ಲಿ ಭರದ ಸಿದ್ಧತೆ ಆರಂಭಿಸಿವೆ. ಇದು ಹೊಸ ದಾಖಲೆಗಳನ್ನು ಸ್ಥಾಪಿಸುವುದಲ್ಲದೆ ಸ್ಮರಣೀಯ ಪರಂಪರೆಯನ್ನು ಸಹ ಅಭಿಮಾನಿಗಳಿಗೆ ನೀಡಲಿದೆ.

FIFA World Cup 2026: MetLife Stadium in New York City Secures the Grand Finale for the

FIFA ವಿಶ್ವಕಪ್ 26 ರ ಅಂತಿಮ ಡ್ರಾ ನಂತರ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಕಿಕ್-ಆಫ್ ಸಮಯವನ್ನು ದೃಢೀಕರಿಸಲಾಗುತ್ತದೆ. ಇದು 2025 ರ ಕೊನೆಯಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

Story first published: Tuesday, February 6, 2024, 10:21 [IST]
Other articles published on Feb 6, 2024
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+