FIFA World Cup 2026: ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿಅಬ್ಬರಿಸಿದ ಮೆಕ್ಸಿಕೊ ಶುಭಾರಂಭ
ಮೆಕ್ಸಿಕೊ ಸಿಟಿ: ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಮೆಕ್ಸಿಕೊ ಅಮೋಘ ಪ್ರದರ್ಶನ ನೀಡಿದ್ದು ಪ್ರಸಕ್ತ ಸಾಲಿನ ಫುಟ್ಬಾಲ್ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ 2-0 ಗೋಲುಗಳಿಂದ ದಕ್ಷಿ ಆಫ್ರಿಕಾ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮೆಕ್ಸಿಕೊ ತಂಡದ ಸ್ಟ್ರೈಕರ್ ರೌಲ್ ಜಿಮೆನೆಜ್ ಹಾಗೂ ಭರವಸೆಯ ಆಟಗಾರ ಜೂಲಿಯನ್ ಕ್ವಿನೋನ್ಸ್ ಬಾರಿಸಿದ ಭರ್ಜರಿ ಗೋಲುಗಳ ಸಹಾಯದಿಂದ ಮೆಕ್ಸಿಕೊ ಪೂರ್ಣ ಮೂರು ಅಂಕ ಗಳಿಸುವಲ್ಲಿ ಸಫಲವಾಗಿದೆ.
ಆರಂಭದಿಂದಲೂ ಮೆಕ್ಸಿಕೊ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಿತು. ಪರಿಣಾಮ ಪಂದ್ಯದ ಮೊದಲಾವಧಿಯ ಆರಂಭದ ನಿಮಿಷದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಸಫಲವಾಯಿತು. ಭರವಸೆಯ ಆಟಗಾರ ಜೂಲಿಯನ್ ಕ್ವಿನೋನ್ಸ್ ಅವರ ಸಮಯೋಚಿತ ಆಟದಿಂದ ಗೋಲು ದಾಖಲಾಯಿತು.

ಮೆಕ್ಸಿಕೊ ತಂಡದ ಸ್ಟಾರ್ ಆಟಗಾರ ಜೂಲಿಯನ್ ಕ್ವಿನೋನ್ಸ್ 9ನೇ ನಿಮಿಷದಲ್ಲಿ ಭರ್ಜರಿ ಕಾಲ್ಚಳಕ ಪ್ರದರ್ಶನ ನೀಡಿದರು. ದಕ್ಷಿಣ ಆಫ್ರಿಕಾದ ಗೋಲ್ ಕೀಪರ್ ನೀಡಿದ ಪಾಸ್‌ನ್ನು ದಕ್ಷಿಣ ಆಫ್ರಿಕಾ ರಕ್ಷಣಾ ಆಟಗಾರ ಪಡೆಯುವಲ್ಲಿ ವಿಫಲರಾದರು. ಇದರ ಸಂಪೂರ್ಣ ಲಾಭ ಪಡೆದ ಮೆಕ್ಸಿಕೊ ತಂಡದ ಆಟಗಾರ ಜೂಲಿಯನ್ ಕ್ವಿನೋನ್ಸ್ ತನ್ನ ಬಲಗಾಲಿನಿಂದ ಚೆಂಡನ್ನು ಗೋಲ್ ಪೋಸ್ಟ್‌ಗೆ ತಳ್ಳುವಲ್ಲಿ ಸಫಲರಾದರು. ಈ ಮೂಲಕ ಇವರು ಫಿಫಾ ವಿಶ್ವಕಪ್ 2026ರ ಮೊದಲ ಗೋಲು ಬಾರಿಸಿದರು. ಆಗ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳ ಸಂಭ್ರಮ ಮನೆ ಮಾಡಿತ್ತು.
ಮೊದಲಾವಧಿಯಲ್ಲಿ ಮೆಕ್ಸಿಕೊ ತಂಡಕ್ಕೆ ಗೋಲುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶವು ಲಭಿಸಿತು. ಆದರೆ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಆಟಗಾರರು ವಿಫಲರಾದರು. ಅದರಂತೆ ದಕ್ಷಿಣ ಆಫ್ರಿಕಾ ತಂಡ ಸಹ ಅವಕಾಶಗಳನ್ನು ಕೈ ಚೆಲ್ಲಿತು.
ಎರಡನೇ ಅವಧಿಯ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಫ್ರಿ ಕಿಕ್ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಯಿತು. ಪರಿಣಾಮ ಗೋಲು ಬಾರಿಸುವ ಪ್ರವಾಸಿ ದಕ್ಷಿಣ ಆಫ್ರಿಕಾದ ಕನಸು ನುಚ್ಚುನೂರಾಯಿತು.
ಮೆಕ್ಸಿಕೊ ಶುಭಾರಂಭ
ಎರಡನೇ ಅವಧಿಯಲ್ಲಿ ಮೆಕ್ಸಿಕೊ ಗೋಲಿನ ನಗೆ ಬೀರಿತು. ಪಂದ್ಯದ 67ನೇ ನಿಮಿಷದಲ್ಲಿ ಸ್ಟ್ರೈಕರ್ ರೌಲ್ ಜಿಮೆನೆಜ್ ಗೋಲು ಬಾರಿಸಿದರು. ಗೋಲು ಪೆಟ್ಟಿಗೆಯ ಎಡಭಾಗದಿಂದ ಬಂದ ಪಾಸ್‌ಗೆ ಮೆಕ್ಸಿಕೊ ಭರವಸೆಯ ಆಟಗಾರ ಸ್ಟ್ರೈಕರ್ ರೌಲ್ ಜಿಮೆನೆಜ್ ಭರ್ಜರಿ ಹೆಡ್ ಮೂಲಕ ಪಾಸ್ ನೀಡಿ ಚೆಂಡಿಗೆ ಗೋಲು ಪೆಟ್ಟಿಗೆಯ ದರ್ಶನ ಮಾಡಿಸಿದರು. ಪರಿಣಾಮ ಮೆಕ್ಸಿಕೊ ಪಂದ್ಯದಲ್ಲಿ ಭರ್ಜರಿ 2-0 ಮುನ್ನಡೆ ಸಾಧಿಸಿತು. ಕೊನೆಯ ಕ್ಷಣ ಹಾಗೂ ಹೆಚ್ಚುವರಿ ಸಮಯದಲ್ಲೂ ಗೋಲು ಬಾರಿಸುವ ದಕ್ಷಿಣ ಆಫ್ರಿಕಾದ ಆಸೆ ಫಲಿಸಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications