Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2026: ಜರ್ಮನಿ ವಿರುದ್ಧ ಪರಾಗ್ವೆಗೆ ಪೆನಾಲ್ಟಿ ಶೂಟೌಟ್‌ನಲ್ಲಿ ಜಯ: ದೇಶದಲ್ಲಿ ರಜೆ ಘೋಷಣೆ

12 ವರ್ಷಗಳಿಂದ ಫಿಫಾ ವಿಶ್ವಕಪ್ ಗೆಲ್ಲದ ಜರ್ಮನಿ ಈ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಬೇಕು ಎಂಬ ಕನಸಿನೊಂದೊಗೆ ಕಣಕ್ಕೆ ಇಳಿದಿತ್ತು. ಆದರೆ ಮಾಜಿ ಚಾಂಪಿಯನ್ ಜರ್ಮನಿಯ ಆಸೆ 32ರ ಹಂತದ ಪಂದ್ಯದಲ್ಲಿ ಮುಕ್ತಾಯವಾಗಿದೆ. 2026ರ ಫಿಫಾ ವಿಶ್ವಕಪ್‌ನ ಅಚ್ಚರಿಯ ಫಲಿತಾಂಶ ಮಂಗಳವಾರ ಬೆಳಗಿನ ಜಾವ ಹೊರ ಬಿದ್ದಿದೆ. ಫಿಫಾ ಶ್ರೇಯಾಂಕದಲ್ಲಿ 34ನೇ ಸ್ಥಾನದಲ್ಲಿರುವ ಪರಾಗ್ವೆ, ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಜರ್ಮನಿಗೆ ಮಣ್ಣು ಮುಕ್ಕಿಸಿದೆ.

ಬೋಸ್ಟನ್ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಪರಾಗ್ವೆ ಭರ್ಜರಿ ಪ್ರದರ್ಶನ ನೀಡಿ ಜರ್ಮನಿಗೆ ಮನೆಯ ಹಾದಿ ತೋರಿಸಿದೆ. ನಿಗದಿತ ಸಮಯದಲ್ಲಿ ಉಭಯ ತಂಡಗಳು 1-1 ಗೋಲು ಬಾರಿಸಿದ್ದರಿಂದ ಹೆಚ್ಚುವರಿ ಸಮಯವನ್ನು ನೀಡಲಾಯಿತು. ಈ ಸಮಯದಲ್ಲಿ ಗೋಲುಗಳು ದಾಖಲಾಗದೇ ಇದ್ದಾಗ, ಪಂದ್ಯದ ಫಲಿತಾಂಶವನ್ನು ಅರಿಯಲು ಪೆನಾಲ್ಟಿ ಶೂಟೌಟ್‌ನಲ್ಲಿ ಪರಾಗ್ವೆ 4-3 ಗೋಲುಗಳಿಂದ ಸೋಲಿಸಿತು. ಈ ಮೂಲಕ ಫಿಫಾ ವಿಶ್ವಕಪ್‌ನಲ್ಲಿ ಪರಾಗ್ವೆ ಇತಿಹಾಸ ನಿರ್ಮಿಸಿತು.

FIFA World Cup 2026

ಸುಮಾರು 24 ವರ್ಷಗಳ ಹಿಂದೆ, 2002 ರ ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿ ಪರಾಗ್ವೆಯನ್ನು 1-0 ಗೋಲುಗಳಿಂದ ಸೋಲಿಸಿತು. ಈ ಬಾರಿ, ಪರಾಗ್ವೆ ಆ ಸೋಲಿಗೆ ಸೇಡು ತೀರಿಸಿಕೊಂಡಿತು. ಪರಾಗ್ವೆ ಈಗ ರೌಂಡ್ 16 ರಲ್ಲಿ ಫ್ರಾನ್ಸ್ ಮತ್ತು ಸ್ವೀಡನ್ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದೆ. ಅವರು ತಮ್ಮ ಮುಂದಿನ ಪಂದ್ಯವನ್ನೂ ಗೆದ್ದರೆ, ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯುತ್ತಾರೆ.

ಮೊದಲಾರ್ಧದ 42 ನೇ ನಿಮಿಷದಲ್ಲಿ ಪರಾಗ್ವೆ ಮುನ್ನಡೆ ಸಾಧಿಸಿತು. ಮಿಗುಯೆಲ್ ಅಲ್ಮಿರಾನ್ ಚೆಂಡನ್ನು ಮಟಿಯಾಸ್ ಗಲಾರ್ಜಾಗೆ ಪಾಸ್ ಮಾಡಿದರು, ಅವರು ಅದ್ಭುತ ಕ್ರಾಸ್ ನೀಡಿದ ಚೆಂಡನ್ನು ಜೂಲಿಯೊ ಎನ್ಸಿಸೊ ಹೆಡರ್ ಮೂಲಕ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆ ಒದಗಿಸಿದರು. ಜರ್ಮನಿ ಒತ್ತಡಕ್ಕೆ ಸಿಲುಕಿತು.

ಎರಡನೇ ಅರ್ಧದ ಆರಂಭದಲ್ಲಿ ಜರ್ಮನಿ ಆಕ್ರಮಣಕಾರಿ ಆಟವನ್ನು ಆಡಿತು. ಈ ಅವಧಿಯಲ್ಲಿ ಸೊಗಸಾದ ಪ್ರದರ್ಶನ ನೀಡಿದ ಜರ್ಮನಿ 52ನೇ ನಿಮಿಷದಲ್ಲಿ ಗೋಲು ದಾಖಲಿಸಿ ಗೋಲಿನ ಅಂತರವನ್ನು ಸಮನಾಗಿಸಿತು. ಆ ನಂತರ ಎರಡೂ ತಂಡಗಳಿಗೆ ಹಲವಾರು ಅವಕಾಶಗಳು ಸಿಕ್ಕವು, ಆದರೆ ನಿರ್ಣಾಯಕ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಂತರ ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ನಿರ್ಧರಿಸಲಾಯಿತು. ಎರಡೂ ತಂಡಗಳು ಕೊನೆಯವರೆಗೂ ಸಮಬಲ ಸಾಧಿಸಿದವು, ಆದರೆ ಸಡನ್ ಡೆತ್‌ನಲ್ಲಿ, ಜೋಸ್ ಕೆನಾಲೆ ಪರಾಗ್ವೆಗೆ ಮುನ್ನಡೆ ತಂದುಕೊಟ್ಟರು. ಪರಾಗ್ವೆ ತಂಡದ ಗೋಲಿಯ ಅಮೋಘ ಆಟದ ಪಂದ್ಯದಲ್ಲಿ ಮಿಂಚಿತು.

ಸರ್ಕಾರಿ ರಜೆ

2026ರ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಜರ್ಮನಿ ವಿರುದ್ಧ ಪರಾಗ್ವೆ ತಂಡವು ಐತಿಹಾಸಿಕ ಜಯಗಳಿಸಿದ ಹಿನ್ನೆಲೆಯಲ್ಲಿ, ಪರಾಗ್ವೆ ದೇಶದ ಅಧ್ಯಕ್ಷರಾದ ಸ್ಯಾಂಟಿಯಾಗೊ ಪೆನಾ ಅವರು ದೇಶಾದ್ಯಂತ ಮಂಗಳವಾರದಂದು ರಾಷ್ಟ್ರೀಯ ರಜೆಯನ್ನು ಘೋಷಿಸಿದ್ದಾರೆ. ಈ ಗೆಲುವನ್ನು ಇಡೀ ದೇಶದ ಜನತೆ ಒಟ್ಟಾಗಿ ಸಂಭ್ರಮಿಸಲು ಮತ್ತು ಈ ಐತಿಹಾಸಿಕ ದಿನದ ಆಚರಣೆಯಲ್ಲಿ ಭಾಗಿಯಾಗಲು ಸರ್ಕಾರವು ಈ ರಜೆಯನ್ನು ಸುಗಮಗೊಳಿಸಿದೆ.

FIFA World Cup 2026

ಬ್ರೆಜಿಲ್‌ಗೆ ಮುನ್ನಡೆ

ಇನ್ನು ರೌಂಡ 32 ಪಂದ್ಯದಲ್ಲಿ ಬ್ರೆಜಿಲ್‌ 2-1 ರಿಂದ ಜಪಾನ್‌ ತಂಡವನ್ನು ಮಣಿಸಿತು. ಬ್ರೆಜಿಲ್ ತಂಡ ಕ್ಯಾಸೆಮಿರೊ ಹಾಗೂ ಗೇಬ್ರಿಯಲ್ ಮಾರ್ಟಿನೆಲ್ಲಿ ಗೋಲು ಬಾರಿಸಿ ಮಿಂಚಿದರು. ಜಪಾನ್‌ ಪರ ಕೈಶು ಸಾನೋ 29ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ನಿಗದಿತ ಸಮಯದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಆದರೆ ಹೆಚ್ಚುವರಿ ಸಮಯದಲ್ಲಿ ಬ್ರೆಜಿಲ್ ತಂಡದ ಗೇಬ್ರಿಯಲ್ ಮಾರ್ಟಿನೆಲ್ಲಿ ಅಮೋಘ ಕಾಲ್ಚಳಕ ಪ್ರದರ್ಶನ ನೀಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

Story first published: Tuesday, June 30, 2026, 9:50 [IST]
Other articles published on Jun 30, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+