Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup: ಮೆಸ್ಸಿ, ರೊನಾಲ್ಡೊ ಸೇರಿದಂತೆ 5 ಸ್ಟಾರ್ ಆಟಗಾರರಿಗೆ ಇದು ಕೊನೆಯ ಚಾನ್ಸ್‌

ವಿಶ್ವದ ದೊಡ್ಡ ಫುಟ್ಬಾಲ್‌ ಟೂರ್ನಿ ಫಿಫಾ ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಈ ಮೆಗಾ ಟೂರ್ನಿಗೆ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಮಧುವಣಗಿತ್ತಿಯಂತೆ ಶೃಂಗಾರಗೊಂಡಿವೆ. 48 ದೇಶಗಳು ಚಾಂಪಿಯನ್‌ ಪಟ್ಟದ ಮೇಲೆ ಕಣ್ಣು ನೆಟ್ಟಿವೆ. 39 ದಿನಗಳ ಕಾಲ ಫುಟ್ಬಾಲ್ ವಿಶ್ವಕಪ್ ನಡೆಯಲಿದೆ. ಈ ಬಾರಿಯ ಫುಟ್ಬಾಲ್ ವಿಶ್ವಕಪ್‌ನಲ್ಲಿ ಅನೇಕ ಫುಟ್ಬಾಲ್ ಆಟಗಾರರು ತಮ್ಮ ತಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಇದರಲ್ಲಿ ಹಲವು ದಿಗ್ಗಜ ಆಟಗಾರರ ಸಹ ಸೇರಿದ್ದಾರೆ.

ಈ ಬಾರಿಯ ಫಿಫಾ ವಿಶ್ವಕಪ್‌ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ವೇಳೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಸೇರಿದಂತೆ ಕೆಲವು ದಂತಕಥೆಯ ಫುಟ್ಬಾಲ್ ಆಟಗಾರರಿಗೆ ಇದು ಕೊನೆಯ ವಿಶ್ವಕಪ್ ಆಗಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಹಾಗಿದ್ದರೆ ಯಾವೆಲ್ಲಾ ಆಟಗಾರರಿಗೆ ಈ ಬಾರಿಯ ವಿಶ್ವಕಪ್‌ ಕೊನೆಯದ್ದಾಗಬಹುದು ಎಂಬ ಮಾಹಿತಿ ಇಲ್ಲಿದೆ.

FIFA World Cup

ಲಿಯೋನೆಲ್ ಮೆಸ್ಸಿ

ಅರ್ಜೆಂಟೀನಾ ತಂಡದ ಸೂಪರ್ ಸ್ಟಾರ್ ಆಟಗಾರ ಲಿಯೋನೆಲ್, ಈ ಬಾರಿ ಮತ್ತೊಮ್ಮೆ ತಂಡವನ್ನು ಮುನ್ನಡೆಸುತ್ತಿದ್ದಾರೆ. 39ನೇ ವರ್ಷದ ಮೆಸ್ಸಿ ತಮ್ಮ ವೃತ್ತಿ ಜೀವನದ 6ನೇ ವಿಶ್ವಕಪ್ ಆಡಲು ಸಜ್ಜಾಗುತ್ತಿದ್ದಾರೆ. ಈ ವಿಶ್ವಕಪ್‌ ಅವರ ಫುಟ್ಬಾಲ್‌ ಜೀವನದ ಕೊನೆಯ ವಿಶ್ವಕಪ್ ಆಗಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ವಿಶ್ವಕಪ್ ವೇಳೆಗೆ ಅವರಿಗೆ 43 ವರ್ಷ ವಯಸ್ಸಾಗಿರುತ್ತದೆ, ಆದ್ದರಿಂದ ಅವರು ಮತ್ತೆ ಈ ಪಂದ್ಯಾವಳಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಮೆಸ್ಸಿ ಇಲ್ಲಿಯವರೆಗೆ 26 ವಿಶ್ವಕಪ್ ಪಂದ್ಯಗಳಲ್ಲಿ 13 ಗೋಲುಗಳನ್ನು ಸಿಡಿಸಿದ್ದಾರೆ.

FIFA World Cup: ಮೆಸ್ಸಿ ಕಣ್ಣು ನೆಟ್ಟಿರುವ ಟಾಪ್‌ 5 ದಾಖಲೆಗಳು

FIFA World Cup: ಮೆಸ್ಸಿ ಕಣ್ಣು ನೆಟ್ಟಿರುವ ಟಾಪ್‌ 5 ದಾಖಲೆಗಳು

ಕ್ರಿಸ್ಟಿಯಾನೊ ರೊನಾಲ್ಡೊ

ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೂ ಈ ವಿಶ್ವಕಪ್‌ ಕೊನೆಯದ್ದಾಗಬಹುದು. ಇವರಿಗೆ ಈಗ 41 ವರ್ಷದ ಕ್ರಿಸ್ಟಿಯಾನೋ ರೊನಾಲ್ಡೋ ಅವರು 6ನೇ ಬಾರಿ ಪ್ರತಿಷ್ಠಿತ ವಿಶ್ವಕಪ್‌ನಲ್ಲಿ ದೇಶದ ಪರ ಕಣಕ್ಕೆ ಇಳಿಯಲಿದ್ದಾರೆ. ಮುಂದಿನ ಆವೃತ್ತಿಯ ವಿಶ್ವಕಪ್‌ ವೇಳೆಗೆ ಇವರಿಗೆ 45 ವರ್ಷ ವಯಸ್ಸಾಗಲಿದೆ. ಹೀಗಾಗಿ ಆ ವಿಶ್ವಕಪ್‌ನಲ್ಲಿ ಅವರು ಆಡುವ ಸಾಧ್ಯತೆ ತೀರಾ ಕಡಿಮೆ. ರೊನಾಲ್ಡೊ ಇಲ್ಲಿಯವರೆಗೆ 22 ವಿಶ್ವಕಪ್ ಪಂದ್ಯಗಳಲ್ಲಿ ಎಂಟು ಗೋಲುಗಳನ್ನು ಗಳಿಸಿದ್ದಾರೆ.

FIFA World Cup

ನೇಮರ್ ಜೂನಿಯರ್

ಬ್ರೆಜಿಲ್‌ನ ಸ್ಟಾರ್ ಆಟಗಾರ ನೇಮರ್ ಜೂನಿಯರ್‌ಗೂ ಈ ವಿಶ್ವಕಪ್ ವಿಶೇಷವಾಗಬಹುದಾಗಿದೆ. ಗಾಯ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ 34 ವರ್ಷದ ನೇಮರ್‌, ಮುಂದಿನ ಆವೃತ್ತಿಯ ವಿಶ್ವಕಪ್‌ನಲ್ಲಿ ಆಡುವುದು ಡೌಟ್ ಎಂದು ಹೇಳಲಾಗುತ್ತಿದೆ. ಈ ಇವರ ಕೊನೆಯ ವಿಶ್ವಕಪ್ ಎಂದು ಪರಿಗಣಿಸಲಾಗುತ್ತದೆ. ನೇಮರ್ ಇಲ್ಲಿಯವರೆಗೆ 13 ವಿಶ್ವಕಪ್ ಪಂದ್ಯಗಳಲ್ಲಿ ಎಂಟು ಗೋಲುಗಳನ್ನು ಬಾರಿಸಿದ್ದಾರೆ.

FIFA World Cup: ಆರಂಭಕ್ಕೂ ಮುನ್ನವೇ ವಿವಾದದ ಕಿಡಿ; ಸೋಫಿ ಸ್ಟೇಡಿಯಂನ 2,000 ಕಾರ್ಮಿಕರಿಂದ ಮುಷ್ಕರದ ಎಚ್ಚರಿಕೆ!

FIFA World Cup: ಆರಂಭಕ್ಕೂ ಮುನ್ನವೇ ವಿವಾದದ ಕಿಡಿ; ಸೋಫಿ ಸ್ಟೇಡಿಯಂನ 2,000 ಕಾರ್ಮಿಕರಿಂದ ಮುಷ್ಕರದ ಎಚ್ಚರಿಕೆ!

ಗಿಲ್ಲೆರ್ಮೊ ಒಚೋವಾ

ಮೆಕ್ಸಿಕನ್ ಅನುಭವಿ ಗೋಲ್‌ಕೀಪರ್ ಗಿಲ್ಲೆರ್ಮೊ ಒಚೋವಾ ಕೂಡ ಸ್ಟಾರ್ ಆಟಗಾರ. 40 ವರ್ಷದ ಇವರು ತಮ್ಮ ವೃತ್ತಿ ಜೀವನದ 6ನೇ ವಿಶ್ವಕಪ್‌ ಆಡಲು ಸಜ್ಜಾಗಿದ್ದಾರೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಮೋಘ ಪ್ರದರ್ಶನ ನೀಡುವ ಆಸೆ ಇವರದ್ದಾಗಿದೆ.

ಮ್ಯಾನುಯೆಲ್ ನ್ಯೂಯರ್

ಜರ್ಮನಿಯ ದಿಗ್ಗಜ ಗೋಲ್‌ಕೀಪರ್ ಮ್ಯಾನುಯೆಲ್ ನ್ಯೂಯರ್ 2026 ರ ಫಿಫಾ ವಿಶ್ವಕಪ್‌ಗಾಗಿ ತಮ್ಮ ನಿವೃತ್ತಿಯಿಂದ ಯುಟರ್ನ್‌ ಹೊಡೆದಿದ್ದಾರೆ. 40 ವರ್ಷದ ನ್ಯೂಯರ್ 2010 ರಿಂದ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದು, ಇದು ಅವರ ಐದನೇ ವಿಶ್ವಕಪ್ ಆಗಿದೆ. ಗೋಲು ಪೆಟ್ಟಿಗೆಯಲ್ಲಿ ಎದುರಾಳಿ ಆಟಗಾರರು ಚೆಂಡನ್ನು ನೂಕದಂತೆ ತಡೆಯುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಇವರಿಗೂ ಇದು ಕೊನೆಯ ವಿಶ್ವಕಪ್‌ ಆಗಬಹುದಾಗಿದೆ.

Story first published: Monday, June 8, 2026, 8:00 [IST]
Other articles published on Jun 8, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+