FIFA World Cup 2026: ಸ್ಕಾಟ್ಲೆಂಡ್‌ಗೆ ಜಯ: ಬ್ರೆಜಿಲ್-ಮೊರಾಕೊ ಪಂದ್ಯ ಡ್ರಾ
ಬೆಂಗಳೂರು: ಫಿಫಾ ವಿಶ್ವಕಪ್ನಲ್ಲಿ ಬಲಿಷ್ಠ ತಂಡಗಳು ಈಗ ಮೈದಾನ ಪ್ರವೇಶಿಸುತ್ತಿವೆ. ಈ ವೇಳೆ ಹೈಟಿ ಹಾಗೂ ಸ್ಕಾಟ್ಲೆಂಡ್ ತಂಡಗಳು ಕಾದಾಟ ನಡೆಸಿದವು. ಸಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. ಇನ್ನು ಮಾಜಿ ಚಾಂಪಿಯನ್ ಬ್ರೆಜಿಲ್ ಹಾಗೂ ಮೊರಾಕೊ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ.
ಬೋಸ್ಟನ್ ಕ್ರೀಡಾಂಗಣದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ಅಮೋಘ ಪ್ರದರ್ಶನ ನೀಡಿತು. ಅಲ್ಲದೆ ಮೊದಲಾವಧಿಯಲ್ಲಿ ಗೋಲು ಬಾರಿಸುವಲ್ಲಿ ಯಶಸ್ವಿಯಾಯಿತು. ಈ ಅವಧಿಯಲ್ಲಿ ಹೈಟಿ ಗೋಲು ಸಂಖ್ಯೆಯ ಖಾತೆ ತೆರೆಯುವಲ್ಲಿ ಎಡವಿತು.

ಪಂದ್ಯ ಆರಂಭದಿಂದಲೂ ರೋಚಕತೆಯಿಂದ ಕೂಡಿತ್ತು. ಪಂದ್ಯದ 28ನೇ ನಿಮಿಷದಲ್ಲಿ ಸ್ಕಾಟ್ಲೆಂಡ್ ಅಟಗಾರ ಗೋಲು ಪೆಟ್ಟಿಗೆಯ ಎಡ ಭಾಗದಿಂದ ಪಾಸ್‌ನ ನೀಡಿದರು. ಇದರ ಲಾಭ ಪಡೆಯುವಲ್ಲಿ ಗೋಲು ಪೆಟ್ಟಿಗೆಯ ಬಳಿ ಇದ್ದ ಆಟಗಾರರು ವಿಫಲರಾದರು. ಪರಿಣಾಮ ಚೆಂಡು ಹೈಟಿ ಗೋಲಿ ಕೈ ತಾಗಿತು. ಆದರೆ ಇದರ ಸಂಪೂರ್ಣ ಲಾಭವನ್ನು ಪಡೆಯಲು ಸೂಪರ್ ಸ್ಟಾರ್ ಆಟಗಾರ ಜಾನ್ ಮೆಕ್‌ಗಿನ್ ಗೋಲು ಪೆಟ್ಟಗೆಯ ಮುಂಭಾಗದಲ್ಲಿ ನಿಂತುಕೊಂಡಿದ್ದರು. ಚೆಂಡು ಗೋಲ್ ಕೀಪರ್ ಕೈ ತಾಗಿ ತಮ್ಮತ್ತ ಬರುತ್ತಿರುವದನ್ನು ಗಮನಸಿದ ಜಾನ್ ಮೆಕ್‌ಗಿನ್ ಅಮೋಘ ಕಾಲ್ಚಳಕ ಪ್ರದರ್ಶಿಸಿ ತಂಡಕ್ಕೆ ಮೊದಲ ಗೋಲಿನ ಮಾಲೆ ತೊಡಿಸಿದರು. ಸ್ಕಾಟ್ಲೆಂಡ್ ಮೊದಲಾವಧಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಎರಡನೇ ಅವಧಿಯ ಆಟದಲ್ಲೂ ಉಭಯ ತಂಡಗಳು ಹಲವು ಬಾರಿ ಗೋಲು ಬಾರಿಸುವ ಯತ್ನವನ್ನು ಮಾಡಿದವು. ಆದರೆ ಫಲ ಸಿಗಲಿಲ್ಲ. ಹೈಟಿ ಹಲವು ಬಾರಿ ಗೋಲು ಪೆಟ್ಟಿಗೆ ಹತ್ತಿರ ಚೆಂಡನ್ನು ಕೊಂಡೊಯ್ದುರು ಅದನ್ನು ಗೋಲು ಪೆಟ್ಟಿಗೆಯಲ್ಲಿ ನೂಕುವಲ್ಲಿ ವಿಫಲವಾದವು. ಪರಿಣಾಮ ಸ್ಕಾಟ್ಲೆಂಡ್ 1990ರ ಬಳಿಕ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಮೊದಲ ಪಂದ್ಯದಲ್ಲಿ ಜಯ ಸಾಧಿಸಿತು.
ಬ್ರೆಜಿಲ್-ಮೊರಾಕೊ ಪಂದ್ಯ ಡ್ರಾ
ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಪಂದ್ಯದಲ್ಲಿ ಬ್ರೆಜಿಲ್-ಮೊರಾಕೊ ಡ್ರಾ ಸಾಧಿಸಿದವು.

ಪಂದ್ಯದ 21ನೇ ನಿಮಿಷದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಇಸ್ಮಾಯಿಲ್ ಸೈಬಾರಿ ಬ್ರೆಜಿಲ್ ತಂಡದ ಇಬ್ಬರು ಆಟಗಾರರನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಯ ಹತ್ತಿರಕ್ಕೆ ಒಯ್ದರು. ಆಗ ಡಿ ಕ್ಷೇತ್ರದ ಬಳಿ ಬಂದು ಬ್ರೆಜಿಲ್ ಗೋಲಿ ಚೆಂಡನ್ನು ತಡೆಯಲು ಮುಂದಾದರು. ಆದರೆ ಮೊರಾಕೊದ ಇಸ್ಮಾಯಿಲ್ ಸೈಬಾರಿ ಗೋಲು ಬಾರಿಸುವಲ್ಲಿ ಸಫಲರಾದರು. ಮೊರಾಕೊ ಪಾಳಯದಲ್ಲಿ ಸಂತಸ ಮನೆ ಮಾಡಿತ್ತು.
ಆದರೆ ಮೊರಾಕ ತಂಡದ ಮುನ್ನಡೆಯ ಕನಸಿಗೆ ಬ್ರೆಜಿಲ್ 32ನೇ ನಿಮಿಷದಲ್ಲಿ ಪೆಟ್ಟು ನೀಡಿತು. ಗೋಲು ಪೆಟ್ಟಿಗೆಯ ಬಲ ಭಾಗದಿಂದ ಬ್ರೆಜಿಲ್‌ನ 25 ವರ್ಷದ ಆಟಗಾರ ವಿನಿಷಿಯಸ್ ಜೂನಿಯರ್ ಅಮೋಘ ಕಾಲ್ಚಳಕದ ಪ್ರದರ್ಶಿಸಿದರು. ಇವರು ಎದುರಾಳಿ ತಂಡದ ಇಬ್ಬರು ಆಟಗಾರರು ಹಾಗೂ ಗೋಲಿಯನ್ನು ವಂಚಿಸಿ ಗೋಲು ಬಾರಿಸಿದರು. ಪರಿಣಾಮ ಬ್ರೆಜಿಲ್ ಪಂದ್ಯದಲ್ಲಿ ಸಮಬಲ ಸಾಧಿಸಿತು. ಮೊದಲಾವಧಿಯ ಅಂತ್ಯಕ್ಕೆ ಸ್ಕೋರ್‌ನಲ್ಲಿ ವ್ಯತ್ಯಾಸ ಏನು ಆಗಲಿಲ್ಲ.
ಎರಡನೇ ಅವಧಿಯಲ್ಲಿ ಗೋಲು ಬಾರಿಸುವ ಬ್ರೆಜಿಲ್ ಆಸೆ ಫಲಿಸಲಿಲ್ಲ. ಮೊರಾಕ ಸಹ ಈ ಅವಧಿಯಲ್ಲಿ ಕೆಲವು ಅವಕಾಶ ಕೈ ಚೆಲ್ಲಿತು. ಪರಿಣಾಮ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.
ಕತಾರ್‌ಗೆ ಡ್ರಾ ಉಡುಗೊರೆ
ಬಿ ಗುಂಪಿನ ಪಂದ್ಯದಲ್ಲಿ ಕತಾರ್ ಹಾಗೂ ಸ್ವಿಟ್ಜರ್‌ಲ್ಯಾಂಡ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಸ್ವಿಟ್ಜರ್‌ಲ್ಯಾಂಡ್ ಪರ 17ನೇ ನಿಮಿಷದಲ್ಲಿ ಬ್ರೀಲ್ ಎಂಬೊಲೊ ಪೆನಾಲ್ಟಿ ಕಿಕ್ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದರು. ಪಂದ್ಯದ ಕೊನೆಯ ಕ್ಷಣದ ವರೆಗೂ ಸ್ವಿಟ್ಜರ್‌ಲ್ಯಾಂಡ್ ಮೆಲುಗೈ ಸಾಧಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮಿರೊ ಮುಹೈಮ್ ಬಾರಿಸಿದ ಗೋಲು ಉಡುಗೊರೆ ಗೋಲು ಸ್ವಿಟ್ಜರ್‌ಲ್ಯಾಂಡ್ ತಂಡಕ್ಕೆ ದುಬಾರಿ ಆಯಿತು. ಕತಾರ್ ಪಂದ್ಯದಲ್ಲಿ ಡ್ರಾ ಸಾಧಿಸಿ, ಅಂಕ ಹಂಚಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications