FIFA World Cup 2026: ಫ್ರಾನ್ಸ್ ವಿರುದ್ಧ ಅಬ್ಬರಿಸಿದ ಸ್ಪೇನ್ 16 ವರ್ಷಗಳ ಬಳಿಕ ಫೈನಲ್‌ಗೆ
ಸ್ಪೇನ್ ತಂಡದ ರಕ್ಷಣಾ ಆಟದ ಮುಂದೆ ಫ್ರಾನ್ಸ್ ಮಂಡಿಯೂರಿದೆ. ಮಂಗಳವಾರ ತಡರಾತ್ರಿ ನಡೆದ ಫಿಫಾ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದ ಸ್ಪೇನ್ 2-0 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿ, 16 ವರ್ಷಗಳ ಬಳಿಕ ಮೆಗಾ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸ್ಪೇನ್ 2010ರಲ್ಲಿ ಕೊನೆಯ ಬಾರಿಗೆ ಫೈನಲ್ ತಲುಪಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.
ಪಂದ್ಯ ಆರಂಭವಾಗುತ್ತಿದ್ದಂತೆ ಎರಡೂ ತಂಡಗಳು ಜಿದ್ದಿನ ಆಟ ಪ್ರದರ್ಶಿಸಿದವು. ಮೊದಲ ಅರ್ಧದ ಆಟದಲ್ಲಿ ಸ್ಪೇನ್ ತನ್ನ ಸ್ಥಿರ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಸ್ಪೇನ್ ಚೆಂಡಿನ ಮೇಲೆ ಹೆಚ್ಚಿನ ಸಮಯ ಹಿಡಿತ ಸಾಧಿಸಿತು. ಸ್ಪೇನ್ ಮೊದಲ ಅರ್ಧದಲ್ಲಿ ಬ್ಯಾಕ್ ಟು ಬ್ಯಾಕ್ ಗೋಲು ಬಾರಿಸುವ ಪ್ರಯತ್ನವನ್ನು ಮಾಡಿತು. ಆದರೆ ಫಲ ಲಭಿಸಲಿಲ್ಲ.

ಫ್ರಾನ್ಸ್ ಮಾಡಿದ ತಪ್ಪಿನ ಲಾಭ ಪಡೆದ ಸ್ಪೇನ್
ಮೊದಲ ಅರ್ಧದ 22ನೇ ನಿಮಿಷದಲ್ಲಿ ಫ್ರಾನ್ಸ್ ರಕ್ಷಣಾ ಆಟಗಾರ ಲ್ಯೂಕಸ್ ಡಿಗ್ನೆ ಮಾಡಿದ ಆ ಒಂದು ತಪ್ಪು, ಸ್ಪೇನ್‌ಗೆ ವರದಾನವಾಯಿತು. ಸ್ಪೇನ್ ತಂಡಕ್ಕೆ ಈ ಅವಧಿಯಲ್ಲಿ ಫ್ರೀ ಕಿಕ್ ಅವಕಶಾ ಲಭಿಸಿತು. ಈ ಅವಕಾಶವನ್ನು 29 ವರ್ಷದ ಸ್ಪೇನ್ ಆಟಗಾರ ಮೈಕೆಲ್ ಒಯರ್ಜಬಲ್ ಮಿಸ್ ಮಾಡಲಿಲ್ಲ. ಮೈಕೆಲ್ ಒಯರ್ಜಬಲ್ ಒದ್ದ ಚೆಂಡನ್ನು ತಡೆಯುವಲ್ಲಿ ಮೈಕ್ ಮೇಗ್ನಾನ್ ವಿಫಲರಾದರು. ಪರಿಣಾಮ ಸ್ಪೇನ್ ಮೊದಲ ಗೋಲಿನ ನಗೆ ಬೀರಿತು. ಈ ಅವಧಿಯಲ್ಲಿ ಸ್ಪೇನ್ ತಂಡದ ರಕ್ಷಣಾ ಆಟಗಾರರು ಕೆಚ್ಚೆದೆಯ ಆಟವಾಡಿದ ಪರಿಣಾಮ, ಫ್ರಾನ್ಸ್ ಯಾವುದೇ ಗೋಲು ದಾಖಲಿಸಲಿಲ್ಲ. ಸ್ಪೇನ್ ಮೊದಲ ಅರ್ಧದಲ್ಲಿ 1-0 ಮುನ್ನಡೆ ಸಾಧಿಸಿತು.
ಎರಡನೇ ಅರ್ಧದ ಆಟದಲ್ಲಿ ಸ್ಪೇನ್ ತನ್ನ ಆಕ್ರಮಣಾಕಾರಿ ಆಟವನ್ನು ಮುಂದುವರೆಸಿತು. ಸತತ ಗೋಲ್ ಪೋಸ್ಟ್ ಕಡೆಗೆ ಚೆಂಡನ್ನು ಒಯ್ದು ಫ್ರಾನ್ಸ್ ತಂಡದ ಮೇಲೆ ಒತ್ತಡವನ್ನು ಹೇರಿತು. ಅಲ್ಲದೆ 58ನೇ ನಿಮಿಷದಲ್ಲಿ ಯಶ ಸಹ ಕಂಡಿತು. ಪೆಡ್ರೊ ಪೊರೊ ಈ ಹಂತದಲ್ಲಿ ಅಮೋಘ ಕಾಲ್ಚಳಕದ ಪ್ರದರ್ಶನ ನೀಡಿ ಫ್ರಾನ್ಸ್ ಗೋಲಿಯನ್ನು ವಂಚಿಸಿದರು. ಸ್ಪೇನ್ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಎರಡನೇ ಅರ್ಧದಲ್ಲಿ ಸ್ಪೇನ್ ಯುವ ಆಟಗಾರ ಲ್ಯಾಮಿನ್ ಯಮಲ್ ಮತ್ತೊಂದು ಗೋಲು ಬಾರಿಸಿದರು. ಆದರೆ ಫೌಲ್ ಆಯಿತು.
ಹ್ಯಾಟ್ರಿಕ್ ಫೈನಲ್ ಆಡುವ ಕನಸಿಗೆ ಬ್ರೇಕ್
ಸತತವಾಗಿ ಚೆಂಡಿನ ಮೇಲೆ ಹಿಡಿತ ಸಾಧಿಸಿ ಗೋಲು ಪೆಟ್ಟಿಗೆಯ ಹತ್ತಿರ ಫ್ರಾನ್ಸ್ ಹಲವು ಬಾರಿ ಚೆಂಡನ್ನು ತಂದರೂ ಸಹ ಯಶಸ್ಸು ಲಭಿಸಲಿಲ್ಲ. ಸ್ಟಾರ್ ಆಟಗಾರ ಕೈಲಿಯನ್ ಎಂಬಪ್ಪೆ ಗೋಲು ಬಾರಿಸುವ ಅವಕಾಶವನ್ನು ಕೈ ಚೆಲ್ಲಿದರು. ಪರಿಣಾಮ ಫ್ರಾನ್ಸ್ ಸೆಮಿಫೈನಲ್ ಪಂದ್ಯದಲ್ಲಿ ಗೋಲು ಖಾತೆ ತೆರೆಯದೆ ಸೋಲು ಅನುಭವಿಸಿತು.
ಸತತ ಮೂರನೇ ಫಿಫಾ ವಿಶ್ವಕಪ್ ಫೈನಲ್ ಆಡುವ ಕನಸು ಕಂಡಿದ್ದ ಫ್ರಾನ್ಸ್ ತಂಡದ ಆಸೆಗೆ ಪೆಟ್ಟು ಬಿದ್ದಿತು. ಈ ಮೂಲಕ ಫ್ರಾನ್ಸ್ ಸೆಮಿಫೈನಲ್‌ನಿಂದ ಹೊರ ನಡೆಯಿತು. ಬುಧವಾರ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್, ಅರ್ಜೆಂಟೀನಾ ತಂಡಗಳು ಕಾದಾಟ ನಡೆಸಲಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡದ ವಿರುದ್ಧ ಸ್ಪೇನ್ ಪ್ರಶಸ್ತಿಗಾಗಿ ಫೈಟ್ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

