FIFA World Cup 2026: ಪೋರ್ಚುಗಲ್‌ಗೆ ಸೋಲು, ಸ್ಪೇನ್ ಹಾಗೂ ಬೆಲ್ಜಿಯಂ ಕ್ವಾರ್ಟರ್ ಫೈನಲ್‌ಗೆ
ಫಿಫಾ ವಿಶ್ವಕಪ್ ರೋಚಕ ಘಟ್ಟದತ್ತ ಮುಖ ಮಾಡಿದೆ. ಮಂಗಳವಾರವೂ ಫುಟ್ಬಾಲ್ ವಿಶ್ವಕಪ್‌ನಲ್ಲಿ ಹಲವು ಮಹತ್ವದ ಪಂದ್ಯ ನಡೆಯಿತು. ರೌಂಡ್ 16 ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮುಂದಾಳತ್ವದ ಪೋರ್ಚುಗಲ್, ಸ್ಪೇನ್ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಪೋರ್ಚುಗಲ್ ತಂಡದ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಮತ್ತೊಮ್ಮೆ ಮಣ್ಣುಪಾಲಾಗಿದೆ. ಸ್ಪೇನ್ ಅಮೋಘ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದೆ.
ಮೊದಲಾರ್ಧದಲ್ಲಿ ಸ್ಪೇನ್‌ನ ಮೈಕೆಲ್ ಒಯರ್ಜಾಬಲ್ ತಮ್ಮ ತಂಡಕ್ಕೆ ಮುನ್ನಡೆ ದೊರಕಿಸಿಕೊಡುವ ಅವಕಾಶವನ್ನು ಹೊಂದಿದ್ದರು. ಆದರೆ ಇವರು ಬಾರಿಸಿದ ಚೆಂಡು ಗೋಲು ಕಂಬದ ಪಕ್ಕದಲ್ಲಿ ಸಾಗಿತು. ಪೋರ್ಚುಗಲ್‌ನ ಗೋಲ್‌ಕೀಪರ್ ಡಿಯೋಗೊ ಕೋಸ್ಟಾ ಅಲೆಕ್ಸ್ ಬೇನಾ ಈ ಹಂತದಲ್ಲಿ ತಂಡಕ್ಕೆ ಆಧಾರವಾದರು. ಇದೇ ಅವಧಿಯಲ್ಲಿ ಪೋರ್ಚುಗಲ್ ಕೂಡ ಸ್ಪ್ಯಾನಿಷ್ ಡಿಫೆಂಡರ್‌ಗಳ ಮೇಲೆ ನಿರಂತರ ಒತ್ತಡ ಹೇರಿತು.

ಉಭಯ ತಂಡಗಳು ಮೊದಲ ಅರ್ಧದಲ್ಲಿ ಗೋಲು ಬಾರಿಸಲು ವಿಫಲವಾದವು. ಪರಿಣಾಮ ಪಂದ್ಯದ ರೋಚಕತೆ ಎರಡನೇ ಅವಧಿಗೆ ಶಿಫ್ಟ್ ಆಯಿತು. ಇನ್ನು ಎರಡನೇ ಅರ್ಧದಲ್ಲಿ ಪೋರ್ಚುಗಲ್ ಹಾಗೂ ಸ್ಪೇನ್ ತಂಡಗಳು ಈ ಅವಧಿಯಲ್ಲೂ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಪಂದ್ಯ ಡ್ರಾದತ್ತ ಮುಖ ಮಾಡುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಸ್ಪೇನ್ ಇಬ್ಬರು ಆಟಗಾರರನ್ನು ಬದಲಿ ಆಟಗಾರರನ್ನಾಗಿ ಕಣಕ್ಕೆ ಇಳಿಸಿತು. ಫೆರಾನ್ ಟೊರೆಸ್ ಅದ್ಭುತ ಪಾಸ್ ನೀಡಿದರು, ಅದನ್ನು ಮೈಕೆಲ್ ಮೆರಿನೊ ಗೋಲಾಗಿ ಪರಿವರ್ತಿಸಿ ಸ್ಪೇನ್‌ಗೆ 1-0 ಮುನ್ನಡೆ ಒದಗಿಸಿದರು. ಈ ಗೋಲು ಅಂತಿಮವಾಗಿ ಸ್ಪೇನ್‌ನ ಗೆಲುವಿಗೆ ಕಾರಣವಾಯಿತು.

ಕೊನೆಯ ಕ್ಷಣದವರೆಗೂ ಪೋರ್ಚುಗಲ್ ಗೋಲು ಬಾರಿಸಿ ಪಂದ್ಯವನ್ನು ಡ್ರಾದತ್ತ ಕೊಂಡೊಯ್ಯುವ ಪ್ರಯತ್ನವನ್ನು ಮಾಡಿತು. ಆದರೆ ಇದಕ್ಕೆ ಫಲ ಲಭಿಸಲಿಲ್ಲ. ಪರಿಣಾಮ ರೊನಾಲ್ಡೊ ಅವರ ಪೋರ್ಚುಗಲ್ ತಂಡ ರೌಂಡ್ 16ನಲ್ಲೇ ಟೂರ್ನಿಗೆ ಗುಡ್ ಬೈ ಹೇಳಿದೆ.
ಆತಿಥೇಯರಿಗೆ ಸೋಲು
ಗೋಲು ಬಾಕ್ಸನ್ ಬಲಭಾಗದಲ್ಲಿ ಬೆಲ್ಜಿಯಂ ಆಟಗಾರು ಅಮೋಘ ಆಟ ಪ್ರದರ್ಶಿಸಿದರು. ಯುಎಸ್‌ಎ ತಂಡದ ಇಬ್ಬರು ರಕ್ಷಣಾ ಆಟಗಾರರನ್ನು ವಂಚಿಸಿದ ಬೆಲ್ಜಿಯಂ ಆಟಗಾರ ಉತ್ತಮ ಪಾಸ್‌ನ್ನು ಚಾರ್ಲ್ಸ್ ಡಿ ಕೆಟೆಲೇರೆ 9ನೇ ನಿಮಿಷದಲ್ಲಿ ಅಮೋಘ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಪಂದ್ಯದ 31ನೇ ನಿಮಿಷದಲ್ಲಿ ಮಲಿಕ್ ಟಿಲ್ಮನ್ ಸಿಕ್ಕ ಅವಕಾಶವನ್ನು ಅಮೋಘ ಪ್ರದರ್ಶನ ನೀಡಿ ಗೋಲು ಬಾರಿಸಿದರು. ಪರಿಣಾಮ ಉಭಯ ತಂಡಗಳ ಗೋಲುಗಳ ಸಂಖ್ಯೆ 1-1 ರಿಂದ ಸಮಬಲ ಸಾಧಿಸಿದವು. ಇನ್ನು ಇದೇ ಅವಧಿಯಲ್ಲಿ ಚಾರ್ಲ್ಸ್ ಡಿ ಕೆಟೆಲೇರೆ 33ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಮೊದಲ ಅರ್ಧದಲ್ಲಿ ಬೆಲ್ಜಿಯಂನ 2-1ರಿಂದ ಮುನ್ನಡೆ ಸಾಧಿಸಿತು.
ಎರಡನೇ ಅವಧಿಯ ಆಟದಲ್ಲಿ ರೊಮೆಲು ಲುಕಾಕು ಹಾಗೂ ಹ್ಯಾನ್ಸ್ ವನಾಕೆನ್ ತಲಾ ಒಂದು ಗೋಲು ಬಾರಿಸಿ ಗೋಲಿನ ಅಂತರವನ್ನು ಹಿಗ್ಗಿಸಿದರು. ಯುಎಸ್‌ಎ ಕೊನೆಯ ಕ್ಷಣದ ವರೆಗೂ ಗೋಲು ಬಾರಿಸುವ ಆಸೆ ಫಲಿಸಲಿಲ್ಲ. ಪರಿಣಾಮ ಬೆಲ್ಜಿಯಂ 4-1ರಿಂದ ಯುಎಸ್‌ಎ ತಂಡವನ್ನು ಮಣಿಸಿತು. ಪರಿಣಾಮ ಯುಎಸ್‌ಎ ತಂಡದ ಪ್ರಯಾಣ ಅಂತ್ಯವಾಗಿದೆ.
ಬೆಲ್ಜಿಯಂ ಹಾಗೂ ಸ್ಪೇನ್ ಕಾದಾಟ
ರೌಂಡ್ ಆಫ್ 16ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಸ್ಪೇನ್ ಹಾಗೂ ಬೆಲ್ಜಿಯಂ ತಂಡಗಳು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಲಾಸ್ ಏಂಜಿಲೀಸ್ ಮೈದಾನ ಸಾಕ್ಷಿಯಾಗಲಿದ್ದು, ಪಂದ್ಯ ಜುಲೈ 11 ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications