ಚಿನ್ನದ ಬೆಲೆ ಏರಿಕೆ ಎಫೆಕ್ಟ್: ಫಿಫಾ ವಿಶ್ವಕಪ್ ಟ್ರೋಫಿಯ ಮೌಲ್ಯ ದುಪ್ಪಟ್ಟು; 7.13 ಲಕ್ಷ ಡಾಲರ್‌ಗೆ ಜಂಪ್!
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ವಿಶ್ವದಾದ್ಯಂತ ಚಿನ್ನದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದು ಕೇವಲ ಆಭರಣ ಪ್ರಿಯರ ಜೇಬಿಗೆ ಮಾತ್ರವಲ್ಲ, ಕ್ರೀಡಾಲೋಕದ ಅತ್ಯಂತ ಪ್ರತಿಷ್ಠಿತ ಟ್ರೋಫಿಗೂ ಹೊಸ 'ಚಿನ್ನದ ಕಳೆ' ತಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ದರ ಸಾರ್ವಕಾಲಿಕ ದಾಖಲೆ ಬರೆಯುತ್ತಿರುವ ಬೆನ್ನಲ್ಲೇ, ಮುಂಬರುವ ಫಿಫಾ ವಿಶ್ವಕಪ್ 2026ರ ಟ್ರೋಫಿಯ ಮೌಲ್ಯವು ದುಪ್ಪಟ್ಟಾಗಿದೆ.
ಕ್ರೀಡಾಲೋಕದ ಅತ್ಯಂತ ಪ್ರತಿಷ್ಠಿತ 'ಫಿಫಾ ವಿಶ್ವಕಪ್ 2026'ರ ಟ್ರೋಫಿ ಮೌಲ್ಯದಲ್ಲೂ ದಾಖಲೆಯ ಏರಿಕೆ ಕಂಡುಬಂದಿದೆ. ಫೀಫಾ ವಿಶ್ವಕಪ್ ಟ್ರೋಫಿಯ ತೂಕ 6.175 ಕಿಲೋಗ್ರಾಂ ತೂಕವಿದೆ. ಈ ಟ್ರೋಫಿಗೆ ಶುದ್ಧ ಚಿನ್ನವನ್ನು 4.93 ಕಿಲೋಗ್ರಾಂನಷ್ಟು ಬಳಸಲಾಗಿದೆ. ಇದರ ಒಟ್ಟು ಮೌಲ್ಯ ಈಗ ಬರೋಬ್ಬರಿ 7.13 ಲಕ್ಷ ಡಾಲರ್ (ಸುಮಾರು 6.73 ಕೋಟಿ ರೂಪಾಯಿ) ದಾಟಿದೆ.

2022ರಲ್ಲಿ ಅರ್ಜೆಂಟೀನಾ ತಂಡ ಕತಾರ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್ ಮೌಲ್ಯಕ್ಕೆ ಹೋಲಿಸಿದರೆ, ಈ ಬಾರಿಯ ವಿಶ್ವಕಪ್‌ನ ಬೆಲೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ವ್ಯಾಪಾರ ಅನಿಶ್ಚಿತತೆ ಮತ್ತು ನಿಧಾನಗತಿಯ ಆರ್ಥಿಕ ಬೆಳವಣಿಗೆಯು ಚಿನ್ನದ ಬೆಲೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ, ಇದು ಟ್ರೋಫಿಯ ಮೌಲ್ಯದ ಮೇಲೂ ಪರಿಣಾಮ ಬೀರಿದೆ.
ದುಬಾರಿ ಟ್ರೋಫಿ
ವಿಶ್ವದ ಪ್ರಮುಖ ಕ್ರೀಡಾ ಟೂರ್ನಿಗಳ ಟ್ರೋಫಿಗಳಿಗೆ ಹೋಲಿಸಿದರೆ ಫಿಫಾ ವಿಶ್ವಕಪ್ ಟ್ರೋಫಿ ಮಾತ್ರ ಸಂಪೂರ್ಣ ಚಿನ್ನದಿಂದ ಮಾಡಲ್ಪಟ್ಟಿದೆ. ಇದಕ್ಕೆ ಹೋಲಿಸಿದರೆ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಮತ್ತು ಯುರೋಪಾ ಲೀಗ್ ಟ್ರೋಫಿಗಳನ್ನು ಬೆಳ್ಳಿಯಿಂದ ತಯಾರಿಸಲಾಗುತ್ತದೆ.
ಎಲ್‌ಎಸ್‌ಜಿಇ ಮೆಟಲ್ಸ್ ರಿಸರ್ಚ್‌ನ ಪ್ರಧಾನ ವಿಶ್ಲೇಷಕ ದೇಬಾಜಿತ್ ಸಹಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಗಳು ತಮ್ಮ ಗರಿಷ್ಠ ಮಟ್ಟದಿಂದ ಸ್ವಲ್ಪ ಕಡಿಮೆಯಾಗಿದ್ದರೂ, ಹೆಚ್ಚಳ ಗಮನಾರ್ಹವಾಗಿದೆ. ಫಿಫಾ ವಿಶ್ವಕಪ್ ಟ್ರೋಫಿ ಫುಟ್ಬಾಲ್ ಆಟಗಾರರಿಗೆ ಅಮೂಲ್ಯವಾಗಿದ್ದಾಗಿದೆ. ಚಿನ್ನದ ಪ್ರಸ್ತುತ ಬೆಲೆ ವರ್ಷಗಳಲ್ಲಿ ಚಿನ್ನದ ಮೌಲ್ಯ ಎಷ್ಟು ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಬಾರಿಯ ಫಿಫಾ ವಿಶ್ವಕಪ್ ನಡೆಯುತ್ತಿರುವುದು ಎಲ್ಲಿ?
23ನೇ ಆವೃತ್ತಿಯ ಫಿಫಾ ವಿಶ್ವಕಪ್ ಫುಟ್ಬಾಲ್ ಕ್ರೀಡಾಕೂಟವನ್ನು ಅಮೆರಿಕ, ಮೆಕ್ಸಿಕೊ, ಕೆನಡಾ ದೇಶಗಳು ಆಯೋಜಿಸುತ್ತಿವೆ.
ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಎಷ್ಟು ದೇಶಗಳು ಭಾಗವಹಿಸುತ್ತಿವೆ?
ಒಟ್ಟು 48 ದೇಶಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು, 4 ತಂಡಗಳನ್ನು 12 ಗುಂಪುಗಳಲ್ಲಿ ವಿಂಗಡಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications