FIFA World Cup 2026: ಟರ್ಕಿ ವಿರುದ್ಧ ಅಮೆರಿಕ ಸೋಲಿಗೆ ಕಾರಣ ಏನು?
ಫಿಫಾ ವಿಶ್ವಕಪ್ 2026 ಮಹತ್ವದ ಘಟ್ಟದತ್ತ ಮುಖ ಮಾಡಿದೆ. ಗುರುವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಟರ್ಕಿ 3-2 ರಿಂದ ಯುಎಸ್‌ಎ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಪಂದ್ಯದಲ್ಲಿ ಸೋಲು ಕಂಡರೂ ಯುಎಸ್‌ಎ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದೆ. ಆಡಿದ 3 ಪಂದ್ಯಗಳಲ್ಲಿ ಅಮೆರಿಕ 2 ಗೆಲುವು, 1 ಸೋಲು ಕಂಡಿದ್ದು, 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಪಂದ್ಯದ 3ನೇ ನಿಮಿಷದಲ್ಲೇ ಅಮೆರಿಕದ ಆಸ್ಟನ್ ಟ್ರಸ್ಟಿ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಆದರೆ ಈ ಮುನ್ನಡೆ ಹೆಚ್ಚು ಹೊತ್ತು ಉಳಿಯಲಿಲ್ಲ. ಮೊದಲಾವಧಿಯ 10ನೇ ನಿಮಿಷದಲ್ಲಿ ತುರ್ಕಿಯೆಯ ಅರ್ಡಾ ಗುಲರ್ ಗೋಲು ಬಾರಿಸಿ ಸಮಬಲ ಸಾಧಿಸಿದರು. ಅಮೆರಿಕದ ಗೋಲ್‌ಕೀಪರ್ ಮ್ಯಾಟ್ ಟರ್ನರ್ ಚೆಂಡನ್ನು ನಿಯಂತ್ರಿಸಲು ಮುಂದೆ ಬರಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾಗ, ಟರ್ಕಿಯ ಅರ್ಡಾ ಗುಲರ್ ಈ ತಪ್ಪು ನಿರ್ಧಾರದ ಸಂಪೂರ್ಣ ಲಾಭ ಪಡೆದು ಅಬ್ಬರಿಸಿದರು.

ಪ್ರಥಮಾರ್ಧದ ಆಟದಲ್ಲಿ ಟರ್ಕಿ 2-1 ರಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದ ಆಟದಲ್ಲಿ ಎಚ್ಚರಿಕೆಯ ಹಾಗೂ ಸಮಯೋಚಿತ ಆಟದ ಪ್ರದರ್ಶನ ನೀಡಿದ ಅಮೆರಿಕ 49ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸಮಬಲ ಸಾಧಿಸಿತು. ಆದರೆ ಪಂದ್ಯದ ಕೊನೆಯ ಕ್ಷಣದಲ್ಲಿ ಅಮೆರಿಕದ ಗೋಲು ಕೀಪರ್ ಮಾಡಿದ ಆ ಒಂದು ಎಡವಟ್ಟಿನಿಂದ ಪಂದ್ಯವನ್ನು ಕೈ ಚೆಲ್ಲುವಂತೆ ಆಯಿತು.
ಅಮೆರಿಕ ಸೋಲಿಗೆ ಕಾರಣ ಏನು?
ಅಮೆರಿಕದ ಅನುಭವಿ ಗೋಲ್‌ಕೀಪರ್ ಮ್ಯಾಟ್ ಟರ್ನರ್ ಪಂದ್ಯದಲ್ಲಿ ತಮ್ಮ ನೈಜ ಆಟವನ್ನು ಪ್ರದರ್ಶಿಸುವಲ್ಲಿ ವಿಫಲರಾದರು. ಟರ್ಕಿಯೆ ಬಾರಿಸಿದ ಮೊದಲ ಗೋಲಿನ ವೇಳೆ ಅವರು ಚೆಂಡನ್ನು ತಡೆಯಲು ಸರಿಯಾದ ಸಮಯದಲ್ಲಿ ಮುಂದೆ ಬರದೆ ಗೊಂದಲಕ್ಕೊಳಗಾದರು. ಈ ಹಿಂಜರಿಕೆಯಿಂದಾಗಿ ಎದುರಾಳಿ ಆಟಗಾರ ಸುಲಭವಾಗಿ ಗೋಲು ಬಾರಿಸಿದರು. ಪಂದ್ಯದುದ್ದಕ್ಕೂ ಗೋಲ್‌ಕೀಪರ್ ಅವರ ರಕ್ಷಣಾತ್ಮಕ ನಿರ್ಧಾರಗಳು ಕಳಪೆಯಾಗಿದ್ದರಿಂದ ಟೀಕೆಗೆ ಒಳಗಾದರು.
ಅಮೆರಿಕದ ಕೇವಲ ಗೋಲ್‌ಕೀಪರ್ ಮಾತ್ರವಲ್ಲದೆ, ಅಮೆರಿಕದ ಉಳಿದ ಆಟಗಾರರಾದ ಮಾರ್ಕ್ ಮೆಕೆಂಜಿ ಮತ್ತು ಮೈಲ್ಸ್ ರಾಬಿನ್ಸನ್ ಅವರ ರಕ್ಷಣಾತ್ಮಕ ಆಟವನ್ನು ಪ್ರದರ್ಶಿಸುವಲ್ಲಿ ಎಡವಿದರು. ಟರ್ಕಿಯೆ ಬಾರಿಸಿದ ಮೂರೂ ಗೋಲುಗಳು ಸಿಕ್ಸ್-ಯಾರ್ಡ್ ಬಾಕ್ಸ್ ಒಳಗಿನಿಂದಲೇ ಬಂದಿದ್ದವು. ಹೀಗಾಗಿ ಟರ್ನರ್ ಅವರಿಗೆ ತಮ್ಮ ಡಿಫೆಂಡರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ ಎಂಬ ಅಭಿಪ್ರಾಯವೂ ಈಗ ಕೇಳಿ ಬರುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications