Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೇವಲ 5 ಲಕ್ಷ ಜನಸಂಖ್ಯೆ ಹೊಂದಿರುವ ಪುಟ್ಟ ದೇಶ ಕಾಬೊ ವರ್ಡೆ ಫಿಫಾಗೆ ಅರ್ಹತೆ ಪಡೆದಿದ್ದು ಹೇಗೆ?

ಫುಟ್ಬಾಲ್ ಕ್ರೀಡೆಯಲ್ಲಿ ದೊಡ್ಡ ಬ್ರಾಂಡ್ ಮೌಲ್ಯ ಅಥವಾ ಕೋಟ್ಯಂತರ ಹಣವಷ್ಟೇ ಯಶಸ್ಸು ತರಲಾರದು ಎಂಬುದನ್ನು ಸಣ್ಣ ರಾಷ್ಟ್ರಗಳು ಸಾಬೀತುಪಡಿಸುತ್ತಲೇ ಇರುತ್ತವೆ. ಪ್ರಸ್ತುತ ನಡೆಯುತ್ತಿರುವ ಫಿಫಾ ವಿಶ್ವಕಪ್ ನಲ್ಲಿ ಎಲ್ಲರ ಚಿತ್ತ ಕದ್ದ ರಾಷ್ಟ್ರ ಕಾಬೊ ವರ್ಡೆ. ಸ್ಪೇನ್ ವಿರುದ್ಧ ತನ್ನ ಚೊಚ್ಚಲ ಪಂದ್ಯದ ಮೊದಲಾರ್ಧದಲ್ಲಿ ಗೋಲುರಹಿತ ಸಮಬಲ ಕಾಯ್ದುಕೊಳ್ಳುವ ಮೂಲಕ ಎಲ್ಲರ ಚಿತ್ತ ಕದ್ದ ದೇಶ. ಯಾರೂ ಊಹಿಸದ ಹೋರಾಟ ಈಗ ಕ್ರೀಡಾಲೋಕದಲ್ಲಿ ತಲ್ಲಣ ಸೃಷ್ಟಿಸಿದೆ.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಜರ್ಮನಿಯಂತಹ ದೈತ್ಯ ರಾಷ್ಟ್ರದ ಎದುರು ಮತ್ತೊಂದು ಪುಟ್ಟ ದೇಶವಾದ ಕುರಾಕೊ 1-7 ರ ಅಂತರದಿಂದ ಹೀನಾಯವಾಗಿ ಸೋತಿತ್ತು. ಆದರೆ ಅದೇ ಹಾದಿಯಲ್ಲಿ ಹೋಗದ ಕಾಬೊ ವರ್ಡೆ ತಂಡವು ಜಾಗತಿಕ ಸೂಪರ್ ಸ್ಟಾರ್ ಆಟಗಾರರನ್ನು ಹೊಂದಿರುವ ಸ್ಪೇನ್ ವಿರುದ್ಧ ಬಲವಾದ ರಕ್ಷಣಾತ್ಮಕ ಗೋಡೆ ಕಟ್ಟಿ ಮೆಚ್ಚುಗೆ ಗಳಿಸಿದೆ. ಕೇವಲ ಸೋಲನ್ನು ತಪ್ಪಿಸುವುದಷ್ಟೇ ಅಲ್ಲದೆ ಎದುರಾಳಿಗಳಿಗೆ ಮೈದಾನದಲ್ಲಿಯೇ ತಕ್ಕ ತಿರುಗೇಟು ನೀಡಿದ ತಂಡದ ಯಶಸ್ಸಿನ ರಹಸ್ಯ ನಿಜಕ್ಕೂ ಅದ್ಭುತವಾಗಿದೆ.

FIFA World Cup 2026

ಪಶ್ಚಿಮ ಆಫ್ರಿಕಾದ ಕರಾವಳಿ ತೀರದಿಂದ ಸರಿಸುಮಾರು 570 ಕಿಲೋಮೀಟರ್ ದೂರದಲ್ಲಿ ಅಟ್ಲಾಂಟಿಕ್ ಸಾಗರದ ತಪ್ಪಿನಲ್ಲಿ ನೆಲೆಸಿರುವ ರಾಷ್ಟ್ರ ಕಾಬೊ ವರ್ಡೆ ದೇಶ. ಇಡೀ ದೇಶದ ಒಟ್ಟು ಜನಸಂಖ್ಯೆ ಕೇವಲ ಐದು ಲಕ್ಷ. ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅರ್ಹತೆ ಪಡೆದ ಅತ್ಯಂತ ಕಿರಿಯ ಮತ್ತು ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಕಾಬೊ ವರ್ಡೆ ಕೂಡ ಒಂದಾಗಿದೆ.

ಕಠಿಣ ಸವಾಲು ಮೆಟ್ಟಿನಿಂತ ಕಾಬೊ ವರ್ಡೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಬ್ಲೂ ಶಾರ್ಕ್ಸ್' ಎಂದು ಕರೆಯಲ್ಪಡುವ ಕಾಬೊ ವರ್ಡೆ ತಂಡದ ಅರ್ಹತಾ ಸುತ್ತಿನ ಪ್ರಯಾಣವು ಕಠಿಣವಾಗಿತ್ತು. ಆಫ್ರಿಕನ್ ವಲಯದ ಪ್ರಬಲ ಫುಟ್ಬಾಲ್ ರಾಷ್ಟ್ರಗಳಲ್ಲಿ ಒಂದಾದ ಕ್ಯಾಮರೂನ್ ಗುಂಪಿನಲ್ಲಿ ಸ್ಥಾನ ಪಡೆದ ಕಾಬೊ ವರ್ಡೆ ಮುಂದಿನ ಹಂತಕ್ಕೆ ಪ್ರವೇಶಿಸುತ್ತದೇ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಕ್ಯಾಮರೂನ್‌ ವಿರುದ್ಧದ ಮೊದಲ ಪಂದ್ಯದಲ್ಲಿ 1-4 ಗೋಲುಗಳ ಅಂತರದಲ್ಲಿ ಸೋಲನುಭವಿಸಿದಾಗ ಈ ತಂಡದ ವಿಶ್ವಕಪ್ ಅರ್ಹತೆಯ ಕನಸು ಮುಗಿಯಿತು ಎಂದು ಲೆಕ್ಕಾಚಾರ ಹಾಕಲಾಗಿತ್ತು.

ಆದರೆ ತವರು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕ್ಯಾಮರೂನ್ ತಂಡವನ್ನು 1-0 ಗೋಲಿನಿಂದ ಮಣ್ಣುಮುಕ್ಕಿಸುವ ಮೂಲಕ ಇಡೀ ಆಫ್ರಿಕಾ ಖಂಡವೇ ಇವರ ಕಡೆಗೆ ತಿರುಗಿ ನೋಡುವಂತೆ ಮಾಡಿತು. ನಂತರ ಗುಂಪಿನ ಇತರ ಎದುರಾಳಿಗಳ ವಿರುದ್ಧ ನಿರಂತರ ಜಯ ಸಾಧಿಸಿತು. ಆಡಿದ 10 ಕಠಿಣ ಅರ್ಹತಾ ಪಂದ್ಯಗಳ ಪೈಕಿ 7 ಜಯ ಸಾಧಿಸಿದ್ದು, 23 ಅಂಕಗಳನ್ನು ಕಲೆಹಾಕಿ ಐತಿಹಾಸಿಕವಾಗಿ ವಿಶ್ವಕಪ್ ಟಿಕೆಟ್ ಪಡೆದುಕೊಂಡರು.ಕೇವಲ ಸೋಲನ್ನು ತಪ್ಪಿಸುವುದಕ್ಕಾಗಿಯೇ ಹೋರಾಡದೇ ಗೆಲುವಿಗಾಗಿ ಆಡುವ ಇವರ ಕೆಚ್ಚೆದೆಯ ಮನೋಭಾವ ಇಡೀ ಫುಟ್ಬಾಲ್ ಲೋಕಕ್ಕೆ ಮಾದರಿಯಾಗಿದೆ.

ಕೋಚ್ ಬುಬಿಸ್ಟಾ ಶಕ್ತಿ

ಕಾಬೊ ವರ್ಡೆ ಈ ಮಟ್ಟಕ್ಕೆ ಬೆಳೆಯಲು ಅವರ ತಂಡದ ಮುಖ್ಯ ತರಬೇತುದಾರ ಬುಬಿಸ್ಟಾ ಅವರ ನೇತೃತ್ವದಲ್ಲಿ ಹೆಣೆದ ಚಾಣಾಕ್ಷ ತಂತ್ರಗಾರಿಕೆಯೇ ಮುಖ್ಯ ಕಾರಣ. ಪೋರ್ಚುಗಲ್, ಫ್ರಾನ್ಸ್ ಮತ್ತು ನೆದರ್ಲ್ಯಾಂಡ್ಸ್ ನಂತಹ ಯುರೋಪ್‌ನ ಸಾರ್ವಭೌಮ ದೇಶಗಳಲ್ಲಿ ನೆಲೆಸಿದ್ದ ಕಾಬೊ ವರ್ಡೆ ಮೂಲದ ಪ್ರತಿಭಾವಂತ ವಲಸಿಗ ಆಟಗಾರರನ್ನು ಶೋಧಿಸಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಜೋಡಿಸುವ ಅದ್ಭುತ ಕಾರ್ಯವನ್ನು ಬುಬಿಸ್ಟಾ ಯಶಸ್ವಿಯಾಗಿ ಮಾಡಿದರು.

ತಂಡದಲ್ಲಿ ದಶಕಗಳ ಅನುಭವವಿರುವ ಗೋಲ್‌ಕೀಪರ್ ವೋಸಿನ್ಹಾ ಮತ್ತು ಮುಂಚೂಣಿ ಆಟಗಾರ ರಯಾನ್ ಮೆಂಡೆಸ್ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವ ಅನುಭವಿ ಆಟಗಾರರಾಗಿದ್ದಾರೆ. ಇವರ ಜೊತೆಗೆ ಲಾ ಲಿಗಾದ ಭರವಸೆಯ ರಕ್ಷಣಾತ್ಮಕ ಆಟಗಾರ ಕೊಸ್ಟಾ ಮತ್ತು ಮಿಡ್‌ಫೀಲ್ಡ್‌ನ ಜೋವಾನೆ ಕಬ್ರಾಲ್ ತಂಡದ ಪ್ರಮುಖ ಬಲವಾಗಿದ್ದಾರೆ. ಸಣ್ಣ ದ್ವೀಪ ರಾಷ್ಟ್ರಗಳು ಸಾಮಾನ್ಯವಾಗಿ ಬಳಸುವ ಅತಿಯಾದ ರಕ್ಷಣಾತ್ಮಕ ಶೈಲಿಯನ್ನು ಬದಿಗಿಟ್ಟು, ಈ ತಂಡವು ಆಧುನಿಕ ಮತ್ತು ಭಯವಿಲ್ಲದ ಆಕ್ರಮಣಕಾರಿ ಶೈಲಿಯನ್ನು ಅಳವಡಿಸಿಕೊಂಡಿದೆ. ವಿಶಿಷ್ಠ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿರುವ ಚಿಕ್ಕ ರಾಷ್ಟ್ರ ಫಟ್ಬಾಲ್ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿದೆ.

FAQs
MyKhel Sports

Story first published: Monday, June 15, 2026, 23:52 [IST]
Other articles published on Jun 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+