Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫಿಫಾ ವಿಶ್ವಕಪ್: ಫೆನಾಲ್ಟಿ ಶೂಟೌಟ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಮೆಸ್ಸಿ ಪಡೆ

FIFA World cup: Argentina won the match against Netherlands by penalty shootout enter semifinal

ಫಿಫಾ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನ ಎರಡನೇ ಪಂದ್ಯದಲ್ಲಿ ಅರ್ಜೆಂಟಿನಾ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಅತ್ಯಂತ ರೋಚಕವಾಗಿ ನಡೆದ ಈ ಹಣಾಹಣಿಯಲ್ಲಿ ಹೆಚ್ಚುವರು ಅವಧಿಯ ಬಳಿಕವೂ ಎರಡು ತಂಡಗಳು 2-2 ಅಂತರದಿಂದ ಸಮಬಲ ಸಾಧಿಸಿದ್ದವು. ಹೀಗಾಗಿ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಲಾಗಿದ್ದು ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ನೆದರ್ಲೆಂಡ್ಸ್ ವಿರುದ್ಧ ಗೆದ್ದು ಬೀಗಿದೆ.

ಈ ಪಂದ್ಯದಲ್ಲಿ ನೆದರ್ಲೆಂಡ್ಸ ವಿರುದ್ಧ ಅರ್ಜೆಂಟಿನಾ ಸುಲಭ ಗೆಲುವು ಸಾಧಿಸಲಿದೆ ಎಂಬ ಸ್ಥಿತಿಯಿತ್ತು. ಮೊದಲ ಎರಡು ಗೋಲುಗಳು ಅರ್ಜೆಂಟಿನಾ ಪರವಾಗಿಯೇ ದಾಖಲಾಗಿತ್ತು. ಸ್ವತಃ ಲಿಯೋನೆಲ್ ಮೆಸ್ಸಿ ಈ ಮುನ್ನಡೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಆದರೆ ಅಂತಿಮ ಹಂತದಲ್ಲಿ ನೆದರ್ಲೆಂಡ್ಸ್ ತಂಡ ಕೂಡ ಅದ್ಭುತ ರೀತಿಯಲ್ಲಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ಪಂದ್ಯದಲ್ಲಿ ಸಮಬಲ ಸಾಧಿಸುವಂತೆ ಮಾಡಿತು.

ಪಂದ್ಯದ 35ನೇ ನಿಮಿಷದಲ್ಲಿ ಡಚ್ಚರ ರಕ್ಷಣಾ ವಿಭಾಗಕ್ಕೆ ಮಣ್ಣೆರಚಿ ನ್ಯಾಹುಯೆಲ್ ಮೊಲಿನಾಗೆ ಪಾಸ್ ನೀಡಿದರು. ತಕ್ಷಣವೇ ಈ ಚೆಂಡನ್ನು ಗೋಲ್ ಪೋಸ್ಟ್‌ ಒಳಕ್ಕೆ ಸೇರಿಸುವಲ್ಲಿ ಮೊಲಿನಾ ಯಶಸ್ವಿಯಾದರು. ಇದರಿಂದಾಗಿ ಅರ್ಜೆಂಟಿನಾ ಪಂದ್ಯದಲ್ಲಿ ಆರಂಭಿಕ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಅದಾದ ಬಳಿಕ ದ್ವಿತಿಯಾರ್ಧದಲ್ಲಿ ಪಂದ್ಯದ 71ನೇ ನಿಮಿಷದಲ್ಲಿ ಫ್ರಿಕಿಕ್ ಅವಕಾಶ ಪಡೆದುಕೊಂಡ ಅರ್ಜೆಂಟಿನಾ ಮತ್ತೊಂದು ಗೋಲು ಗಳಿಸಿತು. ನಾಯಕ ಮಸ್ಸಿ ಎರಡನೇ ಯಶಸ್ಸಿಗೆ ಕಾರಣವಾದರು. ಈ ಮೂಲಕ ಪಂದ್ಯದಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿ ಸುಲಭ ಗೆಲುವು ಸಾಧಿಸುವ ವಿಶ್ವಾಸ ಮೂಡಿಸಿತು.

ಆದರೆ ಅಂತಿಮ ಹಂತದಲ್ಲಿ ಡಚ್ ಪಡೆ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇದರ ಪರಿಣಾಮವಾಗಿ 83ನೇ ನಿಮಿಷದಲ್ಲಿ ನೆದರ್ಲೆಂಡ್ಸ್ ಪರ ಮೊದಲ ಗೋಲು ದಾಖಲಾಯಿತು. ವೆಗೋಸ್ಟ್ ಹೆಡರ್ ಮೂಲಕ ಗೋಲು ಗಳಿಸಿ ತಂಡದ ಅಂತರವನ್ನು 1-2ಕ್ಕೆ ಕುಗ್ಗಿಸಿದರು. ಅದಾದ ಬಳಿಕ ಕೊನೆಯ ಅವಧಿಯಲ್ಲಿ ನೆದರ್ಲೆಂಡ್ಸ್ ಮತ್ತೊಂದು ಗೋಲು ದಾಖಲಿಸಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಪಂದ್ಯದಲ್ಲಿ ಎರಡು ತಂಡಗಳು ಕೂಡ ಸಮಬಲ ಸಾಧಿಸಿದವು. ಹೆಚ್ಚುವರಿ ಅವಧಿಯಲ್ಲಿಯೂ ಸಮಬಲದಲ್ಲಿಯೇ ಮುಂದುವರಿದ ಕಾರಣ ಫೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ಕಂಡುಕೊಳ್ಳಲಾಯಿತು

ಪೆನಾಲ್ಟಿ ಶೂಟೌಟ್‌ಬಲ್ಲಿ ಗೆದ್ದ ಮೆಸ್ಸಿ ಪಡೆ: ಇನ್ನು ಫೆನಾಲ್ಟಿ ಶೂಟೌಟ್‌ನಲ್ಲಿ ಕೂಡ ರೋಚಕ ಸೆಣೆಸಾಟ ನಡೆಯಿತು. ಅಂತಿಮ ಶೂಟೌಟ್‌ನಲ್ಲಿ ಈ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಗೆಲುವು ಸಾಧಿಸಿದ್ದು ಸೆಮಿಓಫೈನಲ್‌ಗೆ ಲಗ್ಗೆಯಿಟ್ಟಿದೆ. ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ನೆದರ್ಲೆಂಡ್ಸ್ ತಂಡ 2022ರ ವಿಶ್ವಕಪ್‌ ಅಭಿಯಾನವನ್ನು ಕ್ವಾರ್ಟರ್‌ಫೈನಲ್‌ಗೆ ಅಂತ್ಯಗೊಳಿಸಿದೆ.

Story first published: Saturday, December 10, 2022, 9:06 [IST]
Other articles published on Dec 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+