Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup: ಮೊದಲ ಜಯದ ನಗೆ ಬೀರಿದ ಬ್ರೆಜಿಲ್‌: ಅಮೆರಿಕ ಮುನ್ನಡೆ

ಬೆಂಗಳೂರು: ಭರವಸೆಯ ಆಟಗಾರ ಮ್ಯಾಥ್ಯೂಸ್ ಕುನ್ಹಾ ಹಾಗೂ ವಿನಿಷಿಯಸ್ ಜೂನಿಯರ್ ಅವರು ಬಾರಿಸಿದ ಭರ್ಜರಿ ಗೋಲುಗಳ ಸಹಾಯದಿಂದ ಬ್ರೆಜಿಲ್ ತಂಡ ಫಿಫಾ ವಿಶ್ವಕಪ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಿಂದ ಹೈಟಿ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಇದಕ್ಕೂ ಮೊದಲು ಲೀಗ್‌ ಹಂತದ ಪಂದ್ಯದಲ್ಲಿ ಮೊರಾಕೊ ವಿರುದ್ಧ ಬ್ರೆಜಿಲ್‌ ಡ್ರಾ ಸಾಧಿಸಿತ್ತು.

ಪಂದ್ಯದ ಆರಂಭದಿಂದಲೂ ಬ್ರೆಜಿಲ್‌ ಚೆಂಡಿನ ಮೇಲೆ ಹಿಡಿತ ಸಾಧಿಸಿ ಹೈಟಿ ತಂಡದ ಮೇಲೆ ಒತ್ತಡ ಹೇರುವ ತಂತ್ರವನ್ನು ಪ್ರಯೋಗಿಸಿತು. ಮೊದಲಾವಧಿಯ ಆರಂಭದಲ್ಲಿ ಬ್ರೆಜಿಲ್‌ ಒಂದು ಗೋಲು ಬಾರಿಸಿತು. ಆದರೆ ಅದನ್ನು ಫೌಲ್‌ ಎಂದು ಘೋಷಿಸಲಾಯಿತು.

FIFA World Cup

ಈ ಅವಧಿಯಲ್ಲಿ ವಿನಿಷಿಯಸ್ ಜೂನಿಯರ್ ಹೈಟಿ ತಂಡದ ಮೂವರು ರಕ್ಷಣಾ ಆಟಗಾರರನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಗೆ ನೂಕುವಲ್ಲಿ ಸಫಲರಾದರು. ಆದರೆ ಹೈಟಿ ಗೋಲಿ ಅದನ್ನು ತಡೆದರು. ಆದರೆ ಅಲ್ಲಿಯೇ ಹೊಂಚು ಹಾಕಿಕೊಂಡು ಕುಳಿತುಕೊಂಡಿದ್ದ ಮ್ಯಾಥ್ಯೂಸ್ ಕುನ್ಹಾ 23ನೇ ನಿಮಿಷದಲ್ಲಿ ತಂಡದ ಪರ ಮೊದಲ ಗೋಲು ದಾಖಲಿಸಿದರು. ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಸಂತಸಕ್ಕೆ ಪಾರವೇ ಇರಲಿಲ್ಲ.

FIFA World Cup 2026: ತಾಯಿಗಾಗಿ ಕಣ್ಣೀರಿಟ್ಟ ಮಗ, ಸ್ಪಂದಿಸಿದ ಅಮೆರಿಕ ಸರ್ಕಾರ; ತುರ್ತು ವೀಸಾ ಭಾಗ್ಯ

FIFA World Cup 2026: ತಾಯಿಗಾಗಿ ಕಣ್ಣೀರಿಟ್ಟ ಮಗ, ಸ್ಪಂದಿಸಿದ ಅಮೆರಿಕ ಸರ್ಕಾರ; ತುರ್ತು ವೀಸಾ ಭಾಗ್ಯ

ಇದೇ ಅವಧಿಯ 36ನೇ ನಿಮಿಷದಲ್ಲಿ ವಿನಿಷಿಯಸ್ ಜೂನಿಯರ್ ಚೆಂಡಿನ ಮೇಲೆ ಹಿಡಿತ ಸಾಧಿಸಿ, ಇಬ್ಬರು ಹೈಟಿ ರಕ್ಷಣಾ ಆಟಗಾರರನ್ನು ವಂಚಿಸಿ ಚೆಂಡನ್ನು ಮ್ಯಾಥ್ಯೂಸ್ ಕುನ್ಹಾ ಅವರಿಗೆ ನೀಡುವಲ್ಲಿ ಸಫಲರಾದರು. ಈ ಅವಕಾಶವನ್ನು ಬಳಸಿಕೊಂಡ ಮ್ಯಾಥ್ಯೂಸ್ ಕುನ್ಹಾ ಅಮೋಘ ಗೋಲು ಬಾರಿಸಿ ತಂಡದ ಪರ ಮಿಂಚಿದರು.

ಮೊದಲಾವಧಿಯ ಹೆಚ್ಚುವರಿ ಸಮಯದಲ್ಲಿ ವಿನಿಷಿಯಸ್ ಜೂನಿಯರ್ ಅಮೋಘ ಕಾಲ್ಚಳಕದ ಪ್ರದರ್ಶನ ನೀಡಿ ಬ್ರೆಜಿಲ್ ತಂಡದ ಅಂತರವನ್ನು ಹೆಚ್ಚಿಸಿದರು. ಪರಿಣಾಮ ಮೊದಲಾವಧಿಯಲ್ಲಿ ಬ್ರೆಜಿಲ್ 3-0 ಗೋಲುಗಳಿಂದ ಮುನ್ನಡೆ ಸಾಧಿಸಿತು.

ಆಸಿಡ್ ದಾಳಿಗೊಳಗಾಗಿದ್ದ ಯೋನೆ ವಿಸ್ಸಾ ಇಂದು ಫುಟ್‌ಬಾಲ್ ಹೀರೋ: ಪೋರ್ಚುಗಲ್‌ಗೆ‌ ಶಾಕ್‌ ನೀಡಿದ ಆಟಗಾರ ಯಾರು?

ಆಸಿಡ್ ದಾಳಿಗೊಳಗಾಗಿದ್ದ ಯೋನೆ ವಿಸ್ಸಾ ಇಂದು ಫುಟ್‌ಬಾಲ್ ಹೀರೋ: ಪೋರ್ಚುಗಲ್‌ಗೆ‌ ಶಾಕ್‌ ನೀಡಿದ ಆಟಗಾರ ಯಾರು?

ಎರಡನೇ ಅವಧಿಯ ಆಟದಲ್ಲಿ ಉಭಯ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದವು. ಈ ಅವಧಿಯಲ್ಲಿ ಹೈಟಿ ತಂಡ ಸಹ ಗೋಲು ಬಾರಿಸಲು ಪ್ರಯತ್ನ ಪಟ್ಟಿತು. ಆದರೆ ಫಲ ಲಭಿಸಲಿಲ್ಲ. ಬ್ರೆಜಿಲ್‌ ಸಹ ಈ ಅವಧಿಯಲ್ಲಿ ಗೋಲುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ವಿಫಲವಾಯಿತು. ಸಿ ಗುಂಪಿನ ಪಂದ್ಯದಲ್ಲಿ ಬ್ರೆಜಿಲ್‌ ಆಡಿದ 2 ಪಂದ್ಯಗಳಲ್ಲಿ 1 ಜಯ, 1 ಡ್ರಾ ಸಾಧಿಸಿದ್ದು, 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

FIFA World Cup


ಮುಂದಿನ ಹಂತಕ್ಕೆ ಅಮೆರಿಕ ಪ್ರವೇಶ

ಡಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಯುಎಸ್ಎ ತನ್ನ ಅದ್ಭುತ ಪ್ರದರ್ಶನ ಮುಂದುವರಿಸಿತು. ಮಹತ್ವದ ಪಂದ್ಯದಲ್ಲಿ ಅಮೆರಿಕ 2-0 ಗೋಲುಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ಈ ಅದ್ಭುತ ಗೆಲುವಿನೊಂದಿಗೆ, ಯುಎಸ್ ತಂಡವು ಪಂದ್ಯಾವಳಿಯ ಮುಂದಿನ ಸುತ್ತಿನಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಸಿಯಾಟಲ್ ಕ್ರೀಡಾಂಗಣದಲ್ಲಿ ನಡೆದ ಈ ರೋಮಾಂಚಕ ಪಂದ್ಯದಲ್ಲಿ, ಅಮೆರಿಕದ ಆಟಗಾರರು ಆರಂಭದಿಂದಲೂ ಆಕ್ರಮಣಕಾರಿ ಆಡಿ ಎದುರಾಳಿಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಮೊದಲಾವಧಿಯ 11ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಅಮೆರಿಕಕ್ಕೆ ಉಡುಗೊರೆಯ ಗೋಲು ನೀಡಿದರೆ, 43ನೇ ನಿಮಿಷದಲ್ಲಿ ಅಲೆಕ್ಸ್ ಫ್ರೀಮನ್ ಗೋಲು ದಾಖಲಿಸಿ ಅಂತರವನ್ನು ಹಿಗ್ಗಿಸಿದರು.

ಇಸ್ಮಾಯಿಲ್ ಸೈಬಾರಿ ಕಮಾಲ್‌

ಅಮೆರಿಕದ ಬೋಸ್ಟನ್ ಕ್ರೀಡಾಂಗಣದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಮೊರಾಕೊ 1-0 ಗೋಲುಗಳಿಂದ ಸ್ಕಾಟ್ಲೆಂಡ್ ತಂಡವನ್ನು ಮಣಿಸಿತು. ಈ ಮೂಲಕ ಮೊರಾಕೊ ಆಡಿದ 2 ಪಂದ್ಯಗಳಲ್ಲಿ 1 ಡ್ರಾ, 1 ಜಯ ಸಾಧಿಸಿದ್ದು 4 ಅಂಕಗಳನ್ನು ಕಲೆ ಹಾಕಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

Story first published: Saturday, June 20, 2026, 9:23 [IST]
Other articles published on Jun 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+