Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫಿಫಾ ವಿಶ್ವಕಪ್: 25 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟಿಸಿದ ಹಾಲಿ ಚಾಂಪಿಯನ್ ಫ್ರಾನ್ಸ್

FIFA World Cup: Champion France announced 25-man squad for World Cup 2022

ಫಿಫಾ ವಿಶ್ವಕಪ್‌ನ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸುವ ಬಹುತೇಕ ತಂಡಗಳು ಈಗಾಗಲೇ ತಮ್ಮ ಆಟಗಾರರ ಬಳಗವನ್ನು ಘೋಷಣೆ ಮಾಡಿದೆ. ಇದೀಗ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಕೂಡ ಈ ವಿಶ್ವಕಪ್‌ನಲ್ಲಿ ಭಾಗವಹಿಸುವ ಆಟಗಾರರ ಬಳಗವನ್ನು ಘೋಷಣೆ ಮಾಡಿದೆ. ಸ್ಟಾರ್ ಆಟಗಾರರನ್ನು ಒಳಗೊಂಡಿರುವ 25 ಆಟಗಾರರ ಬಲಿಷ್ಠ ತಂಡದೊಂದಿಗೆ ಈ ಬಾರಿಯ ಫಿಫಾ ವಿಶ್ವಕಪ್‌ಗೆ ಫ್ರಾನ್ಸ್ ಸಜ್ಜಾಗಿದೆ.

ಫ್ರಾನ್ಸ್ ತಂಡದಲ್ಲಿ ಈ ಬಾರಿ ಕರಿಮಾ ಬೆನ್ಜೆಮಾ 8 ವರ್ಷಗಳ ಬಳಿಕ ವಿಶ್ವಕಪ್ ವೇದಿಕೆಯಲ್ಲಿ ಆಡಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 2018ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಬೆನ್ಜೆಮಾ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರು. ಈ ವರ್ಷ ಅಕ್ಟೋಬರ್‌ನಲ್ಲಿ ಬ್ಯಾಲೋನ್ ಡೋರ್ ಪ್ರಶಸ್ತಿ ಪಡೆದುಕೊಂಡಿದ್ದ ಬೆನ್ಜೆಮಾ ಅರ್ಹವಾಗಿಯೇ ರಾಷ್ಟ್ರೀಯ ತಂಡದ ಕರೆ ಸ್ವೀಕರಿಸಿದ್ದಾರೆ.

ಫ್ರಾನ್ಸ್ ತನ್ನ ವಿಶ್ವಕಪ್ ತಂಡದಲ್ಲಿ ವಿಲಿಯಂ ಸಾಲಿಬಾ, ಇಬ್ರಾಹಿಮಾ ಕೊನಾಟೆ ಮತ್ತು ಒಲಿವಿಯರ್ ಗಿರೌಡ್ ಮತ್ತು ಡಿಡಿಯರ್ ಡೆಶಾಂಪ್ಸ್ ಅವರಂತಾ ಸ್ಟಾರ್ ಆಟಗಾರರನ್ನು ಹೊಂದಿದ್ದು ಈ ಮಹತ್ವದ ಟೂರ್ನಿಗೆ 25 ಆಟಗಾರರನ್ನು ಆಯ್ಕೆ ಮಾಡಿದೆ. ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುವ ಡಿಫೆಂಡರ್ ರಾಫೆಲ್ ವರಾನೆ ಇತ್ತೀಚೆಗೆ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು ಕೂಡ ಹಾಲಿ ವಿಶ್ವಕಪ್ ಚಾಂಪಿಯನ್ಸ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶ್ವಕಪ್‌ಗೆ ಆಯ್ಕೆಯಾದ ಫ್ರಾನ್ಸ್ ವಿಶ್ವಕಪ್ ತಂಡ ಹೀಗಿದೆ

ಗೋಲ್‌ಕೀಪರ್ಸ್: ಅಲ್ಫೋನ್ಸ್ ಅರೆಯೋಲಾ, ಹ್ಯೂಗೋ ಲೋರಿಸ್, ಸ್ಟೀವ್ ಮಂದಂಡ
ಡಿಫೆಂಡರ್‌ಗಳು: ಲ್ಯೂಕಾಸ್ ಹೆರ್ನಾಂಡೆಜ್, ಥಿಯೋ ಹೆರ್ನಾಂಡೆಜ್, ಪ್ರೆಸ್ನೆಲ್ ಕಿಂಪೆಂಬೆ, ಇಬ್ರಾಹಿಮಾ ಕೊನಾಟೆ, ಜೂಲ್ಸ್ ಕೌಂಡೆ, ಬೆಂಜಮಿನ್ ಪವಾರ್ಡ್, ವಿಲಿಯಂ ಸಾಲಿಬಾ, ದಯೋಟ್ ಉಪಮೆಂಕಾನೊ, ರಾಫೆಲ್ ವರಾನೆ
ಮಿಡ್‌ಫೀಲ್ಡರ್‌ಗಳು: ಎಡ್ವರ್ಡೊ ಕ್ಯಾಮವಿಂಗಾ, ಯೂಸೌಫ್ ಫೋಫಾನಾ, ಮ್ಯಾಟಿಯೊ ಗುಂಡೌಜಿ, ಆಡ್ರಿಯನ್ ರಾಬಿಯೊಟ್, ಔರೆಲಿಯನ್ ಟೌಮೆನಿ, ಜೋರ್ಡಾನ್ ವೆರೆಟೌಟ್
ಫಾರ್ವರ್ಡ್‌ ಆಟಗಾರರು: ಕರೀಮ್ ಬೆಂಜೆಮಾ, ಕಿಂಗ್ಲ್ಸೆ ಕೋಮನ್, ಉಸ್ಮಾನೆ ಡೆಂಬೆಲೆ, ಒಲಿವಿಯರ್ ಗಿರೌಡ್, ಆಂಟೊಯಿನ್ ಗ್ರೀಜ್‌ಮನ್, ಕೈಲಿಯನ್ ಎಂಬಪ್ಪೆ, ಕ್ರಿಸ್ಟೋಫರ್ ಎನ್‌ಕುಂಕು

Story first published: Friday, November 11, 2022, 5:15 [IST]
Other articles published on Nov 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+