Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2026: ಮೆಸ್ಸಿ ತಂಡ ಕ್ವಾರ್ಟರ್ ಫೈನಲ್‌ಗೆ, ರೆಫ್ರಿ ಬೆನ್ನ ಹಿಂದೆ ನಿಂತಿದ್ದಕ್ಕೆ ಗೆದ್ದಿದ್ದೆಂದ ಈಜಿಪ್ಟ್

ಅಟ್ಲಾಂಟಾದಲ್ಲಿ ನಡೆದ ಪ್ರಸಕ್ತ ಫಿಫಾ ವಿಶ್ವಕಪ್‌ನ ರೌಂಡ್ ಆಫ್‌ 16ನಲ್ಲಿ ಅರ್ಜೆಂಟೀನಾ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಅರ್ಜೆಂಟೀನಾ 3-2ರಿಂದ ಈಜಿಪ್ಟ್‌ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಆದರೆ ಈ ಪಂದ್ಯದಲ್ಲಿ ರೆಫ್ರಿಗಳ ವರ್ತನೆ ಈಗ ವಿವಾದ ಹುಟ್ಟಿಸಿದೆ. ಹಾಗಿದ್ದರೆ ಮೈದಾನದಲ್ಲಿ ನಡೆದಿದ್ದು ಏನು? ಇಲ್ಲಿದೆ ವರದಿ.

ಪಂದ್ಯದ ಆರಂಭದಿಂದಲೂ ಈಜಿಪ್ಟ್‌ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಮೊದಲ ಅರ್ಧದಲ್ಲಿ ಈಜಿಪ್ಟ್‌ ತಂಡ 15ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಈ ಅವಧಿಯಲ್ಲಿ ಅರ್ಜೆಂಟೀನಾ ತಂಡಕ್ಕೂ ಪೆನಾಲ್ಟಿ ಅವಕಾಶ ಲಭಿಸಿತು. ಆದರೆ ಈ ಅವಕಾಶದಲ್ಲಿ ಅವರು ಗೋಲು ಬಾರಿಸುವಲ್ಲಿ ವಿಫಲರಾದರು. ಮೊದಲ ಅರ್ಧದಲ್ಲಿ ಈಜಿಪ್ಟ್‌್ 1-0 ಗೋಲುಗಳ ಮುನ್ನಡೆ ಸಾಧಿಸಿತ್ತು.

Controversy Sparks

ಎರಡನೇ ಅವಧಿಯ ಆಟದಲ್ಲೂ ಈಜಿಪ್ಟ್‌ ಭರ್ಜರಿ ಆಟವನ್ನು ಆಡಿ ಎದುರಾಳಿ ತಂಡದ ಮೇಲೆ ಒತ್ತಡವನ್ನು ಹೇರಿತು. ಮೊಸ್ತಫಾ ಜಿಕೊ ಗೋಲು ಗಳಿಸಿ ತಂಡಕ್ಕೆ 2-0 ಅಂತರದ ಮುನ್ನಡೆ ತಂದುಕೊಟ್ಟರು. ಇದಕ್ಕೂ ಮೊದಲು, ಜಿಕೊ ಅವರ ಮತ್ತೊಂದು ಅದ್ಭುತ ಗೋಲನ್ನು ವಿಎಆರ್‌ (ವಿಡಿಯೋ ಸಹಾಯಕ ರೆಫರಿ) ಪರಿಶೀಲನೆಯ ನಂತರ ಫೌಲ್ ನೀಡಿದ ಕಾರಣ ನಿರಾಕರಿಸಲಾಯಿತು.

ರೆಫ್ರಿ ವಿರುದ್ಧ ತಾರತಮ್ಯದ ಆರೋಪ

79 ನೇ ನಿಮಿಷದಲ್ಲಿ ಅರ್ಜೆಂಟೀನಾ ಚೆಂಡಿನ ಮೇಲೆ ಹಿಡಿತ ಸಾಧಿಸಿ ಅಬ್ಬರಿಸಿತು. ಅರ್ಜೆಂಟೀನಾ ತಂಡದ ಪರ 83ನೇ ನಿಮಿಷದಲ್ಲಿ ಮೆಸ್ಸಿ ಸಹ ಮತ್ತೊಂದು ಗೋಲು ಬಾರಿಸಿದರು. ಹೆಚ್ಚುವರಿ ಸಮಯದಲ್ಲಿ ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಮತ್ತೊಂದು ಗೋಲು ದಾಖಲಿಸಿ 3-2 ಗೋಲುಗಳಿಂದ ಜಯ ಸಾಧಿಸಿತು. ಈ ಪಂದ್ಯದ ವೇಳೆ ತೆಗೆದುಕೊಂಡ ನಿರ್ಧಾರಗಳನ್ನು ಈಗ ಪ್ರಶ್ನಿಸಲಾಗುತ್ತಿದೆ.

ಈಜಿಪ್ಟ್ ಫಾರ್ವರ್ಡ್ ಆಟಗಾರ ಜಿಕೊ ಮತ್ತು ಕೋಚ್ ಹೊಸಮ್ ಹಸನ್ ಅವರು, ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಮೆಸ್ಸಿ ಮತ್ತು ಫಿಫಾ ಅಧ್ಯಕ್ಷ ಇನ್ಫಾಂಟಿನೊ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡಕ್ಕೆ ಪಂದ್ಯದಲ್ಲಿ ರೆಫರಿಗಳು ಅತಿಯಾಗಿ ಆಸರೆಯಾದರು ಎಂದು ಕೋಚ್‌ ಹಸನ್ ಗುಡುಗಿದ್ದಾರೆ.

ಲಿಯೋನೆಲ್ ಮೆಸ್ಸಿ ವಿಶ್ವಕಪ್ ಟೂರ್ನಿಯಿಂದ ಬೇಗನೆ ಹೊರಗುಳಿದರೆ ಜಾಗತಿಕವಾಗಿ ವೀಕ್ಷಕರ ಸಂಖ್ಯೆ ಕುಸಿಯುತ್ತದೆ. ಇದರಿಂದ ವಾಣಿಜ್ಯ ನಷ್ಟ ಉಂಟಾಗುತ್ತದೆ. ಇದೇ ಕಾರಣಕ್ಕಾಗಿ ಅರ್ಜೆಂಟೀನಾ ತಂಡವನ್ನು ಟೂರ್ನಿಯಲ್ಲಿ ಮುಂದುವರಿಸಲು ರೆಫರಿಗಳ ಮೂಲಕ ಸಂಚು ರೂಪಿಸಲಾಗಿದೆ ಎಂದು ಹಸನ್ ಆರೋಪಿಸಿದ್ದಾರೆ. ನಾವು ಈ ತೀರ್ಪಿನ ವಿರುದ್ಧದ ಪ್ರತಿಭಟನೆಯಾಗಿ ವಿಶ್ವಕಪ್‌ನ ಇನ್ನುಳಿದ ಪಂದ್ಯಗಳನ್ನು ನಾವು ನೋಡುವುದಿಲ್ಲ ಎಂದು ಹಸನ್ ತಿಳಿಸಿದ್ದಾರೆ.

ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ

ಅರ್ಜೆಂಟೀನಾ ತಂಡದ ಡಿಫೆನ್ಸ್ ಬಾಕ್ಸ್ ಅಡಿಯಲ್ಲಿ ಈಜಿಪ್ಟ್‌ನ ಸ್ಟಾರ್‌ ಆಟಗಾರ ಮೊಹಮ್ಮದ್ ಸಲಾಹ್ ಹಾಗೂ ಒಮರ್ ಮರ್ಮುಶ್ ಅವರ ಮೇಲೆ ನಡೆದ ದೈಹಿಕ ತಳ್ಳಾಟವನ್ನು ರೆಫರಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಆಕ್ರಮಣಕಾರಿ ಆಟದ ಸಂದರ್ಭದಲ್ಲಿ ಅರ್ಜೆಂಟೀನಾದ ಮೆಕ್ ಅಲಿಸ್ಟರ್ ಈಜಿಪ್ಟ್‌ನ ಹಮ್ದಿ ಫಾತಿ ಅವರ ಜೆರ್ಸಿಯನ್ನು ಎಳೆದು ತಡೆದಿದ್ದರೂ ಪೆನಾಲ್ಟಿ ನೀಡಲಲಿಲ್ಲ. ಈ ಸಂದರ್ಭದಲ್ಲಿ ವಿಎಆರ್ ಪರೀಕ್ಷೆಯನ್ನೂ ನಡೆಸದಿರುವುದು ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಪಂದ್ಯ ಮುಗಿದ ಬಳಿಕ ಕಣ್ಣೀರು ಹಾಕುತ್ತಲೇ ಮಾತನಾಡಿದ ಈಜಿಪ್ಟ್ ಮಿಡ್‌ಫೀಲ್ಡರ್ ಮೊಸ್ತಫಾ ಜಿಕೊ, ರೆಫರಿ ಆರಂಭದಿಂದಲೂ, ನಮ್ಮ ವಿರುದ್ಧವೇ ನಿರ್ಧಾರಗಳನ್ನು ತೆಗೆದುಕೊಂಡರು ಎಂದು ದೂರಿದ್ದಾರೆ.

Story first published: Wednesday, July 8, 2026, 11:02 [IST]
Other articles published on Jul 8, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+