ಫಿಫಾ ವಿಶ್ವಕಪ್: ಇಂಗ್ಲೆಂಡ್ vs ಇರಾನ್, ಸೆನೆಗಲ್ vs ನೆದರ್ಲೆಂಡ್ಸ್: ಪಂದ್ಯಗಳ ಪ್ರಮುಖ ಮಾಹಿತಿ

ಫುಟ್ಬಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ವಿಶ್ವಕಪ್ ಫುಟ್ಬಾಲ್‌ಗೆ ಭಾನುವಾರದಿಂದ ಚಾಲನೆ ದೊರೆತಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಕತಾರ್ ವಿರುದ್ಧ ಈಕ್ವೆಡಾರ್ ತಂಡ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಇಂದು ಸೋಮವಾರ ಎರಡು ಪಂದ್ಯಗಳು ವಿಶ್ವಕಪ್‌ನಲ್ಲಿ ನಡೆಯಲಿದ್ದು ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇರಾನ್ ವಿರುದ್ಧ ದೋಹಾದ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಣೆಸಾಟ ನಡೆಸಿದರೆ ಇಂದಿನ ಎರಡನೇ ಮುಖಾಮುಖಿಯಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೆನೆಗಲ್ ಅಲ್ ತುಮಮಾ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಜೊತೆಗೆ ವೇಲ್ಸ್ ಹಾಗೂ ಯುಎಸ್‌ಎ ತಂಡಗಳು ಕೂಡಾ ಮುಖಾಮುಖಿಯಾಗಲಿದ್ದು ಭಾರತೀಯ ಕಾಲಮಾನ ಮಧ್ಯರಾತ್ರಿ ನಡೆಯಲಿದೆ.
ಪಂದ್ಯಗಳ ಸಮಯ: ಇಂಗ್ಲೆಂಡ್ ಹಾಗೂ ಇರಾನ್ ನಡುವಿನ ಪಂದ್ಯ ಭಾರತೀಯ ಕಾಲಮಾನ ಸಂಜೆ 6:30ಕ್ಕೆ ನಡೆಯಲಿದ್ದು ಸೆನೆಗಲ್ ಹಾಗೂ ನೆದರ್ಲೆಂಡ್ಸ್ ತಂಡಗಳ ನಡುವಿನ ಪಂದ್ಯ ಭಾರತೀಯ ಕಾಲಮಾನ ರಾತ್ರಿ 9:30ಕ್ಕೆ ನಡೆಯಲಿದೆ. ಇನ್ನು ಯುಎಸ್‌ಎ ಹಾಗೂ ವೇಲ್ಸ್ ನಡುವಿನ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ನಡೆಯಲಿದ್ದು ಮಧ್ಯರಾತ್ರಿ 12:30ಕ್ಕೆ ಈ ಪಂದ್ಯ ಆರಂಭವಾಗಲಿದೆ.
ಪಂದ್ಯಗಳ ನೇರಪ್ರಸಾರ: ಇನ್ನು ಈ ಬಾರಿಯ ಫಿಫಾ ವಿಶ್ವಕಪ್‌ನ ನೇರಪ್ರಸಾರದ ಹಕ್ಕನ್ನು ವಯಕಾಮ್ ಪಡೆದುಕೊಂಡಿದ್ದು ಸ್ಪೋರ್ಟ್ಸ್ 18 ಹಾಗೂ ಸ್ಪೋರ್ಟ್ಸ್ 18HD ಮೂಲಕ ನೇರಪ್ರಸಾರವಾಗಲಿದೆ. ಇನ್ನು ಜಿಯೋ ಸಿನಿಮಾದಲ್ಲಿಯೂ ಈ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.
ಫಿಫಾ ವಿಶ್ವಕಪ್‌ಗೆ ಅದ್ದೂರಿ ಚಾಲನೆ: ಇನ್ನು ಭಾನುವಾರ ಫಿಫಾ ವಿಶ್ವಕಪ್‌ನ ಉದ್ಘಾಟನಾ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಯೋಜನೆ ಮಾಡಲಾಗಿದ್ದು ಇಡೀ ವಿಶ್ವದ ಫುಟ್ಬಾಲ್ ಅಭಿಮಾನಿಗಳು ಈ ಕಾರ್ಯಕ್ರಮವನ್ನು ನಿಬ್ಬೆರಗಾಗುವಂತೆ ಆಯೋಜನೆ ಮಾಡುವಲ್ಲಿ ಕತಾರ್ ಯಶಸ್ವಿಯಾಗಿದೆ.
ಇಂಗ್ಲೆಂಡ್ vs ಇರಾನ್: ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರಾಬಲ್ಯ ಸಾಧಿಸಿರುವ ಫುಟ್ಬಾಲ್ ಕ್ರೀಡೆಯಲ್ಲಿ ಏಷ್ಯಾದ ರಾಷ್ಟ್ರವಾಗಿ ಇರಾನ್ ಅತ್ಯುತ್ತಮ ಪ್ರದರ್ಶನ ನೀಡುಕೊಂಡು ಬರುತ್ತಿದೆ. ಇರಾನ್ ಸತತ ಮೂರನೇ ಬಾರಿಗೆ ವಿಶ್ವಕಪ್‌ನಲ್ಲಿ ಅರ್ಹತೆ ಪಡೆದುಕೊಂಡಿರುವುದು ಗಮನಾರ್ಹ. ಅರ್ಹತಾ ಸುತ್ತಿನ 10 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿ ಇರಾನ್ ವಿಶ್ವಕಪ್‌ನಲ್ಲಿಅರ್ಹತೆ ಸಂಪಾದಿಸಿದೆ. 20ನೇ ಶ್ರೇಯಾಂಕವನ್ನು ಹೊಂದಿರುವ ಇರಾನ್ ಅತ್ಯಂತ ಬಲಿಷ್ಠ ರಕ್ಷಣಾ ವಿಭಾಗವನ್ನು ಹೊಂದಿದೆ ಎಂಬುದು ಪ್ರಮುಖ ಅಂಶ. ಇನ್ನು ಇಂಗ್ಲೆಂಡ್ ತಂಡ ಈ ಬಾರಿ ಸುದೀರ್ಘ ಕಾಲದ ಬಳಿಕ ವಿಶ್ವಕಪ್ ಗೆದ್ದೇ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದ್ದು ಗೆಲುವಿನೊಂದಿಗೆ ಶುಭಾರಂಭ ಮಾಡುವ ಆತ್ಮವಿಶ್ವಾಸದಲ್ಲಿದೆ.
ಸೆನೆಗಲ್ vs ನೆದರ್ಲೆಂಡ್ಸ್: ಇನ್ನು ಇಂದಿನ ಎರಡನೇ ಪಂದ್ಯದಲ್ಲಿ ಸೆನೆಗಲ್ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿದೆ. ಸೆನೆಗಲ್ ತಂಡಕ್ಕೆ ಈ ಬಾರಿಯ ವಿಶ್ವಕಪ್‌ನಲ್ಲಿ ದೊಡ್ಡ ಹಿನ್ನಡೆಯೆಂದರೆ ತಂಡದ ಸ್ಟಾರ್ ಆಟಗಾರ ಸ್ಯಾಡಿಯೋ ಮಾನೆ ಅಲಭ್ಯವಾಗುತ್ತಿರುವುದು. ಇನ್ನು ನೆದರ್ಲೆಂಡ್ಸ್ ತಂಡ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಫೈನಲ್‌ಗೆ ಪ್ರವೇಶಿಸಿದ್ದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. 2010ರ ವಿಶ್ವಕಪ್‌ನಲ್ಲಿ ಅಂತಿಮ ಬಾರಿ ವಿಶ್ವಕಪ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು. ಈ ಬಾರಿ ಮತ್ತೆ ಅದೇ ಛಲದೊಂದಿಗೆ ಡಚ್ ಪಡೆ ಕಣಕ್ಕಿಳಿಯುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications