For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮತ್ತೆ ಹೀರೋ ಆದ ಎಂಬಪ್ಪೆ: ಡೆನ್ಮಾರ್ಕ್ ವಿರುದ್ಧ ಗೆದ್ದು ನಾಕೌಟ್ ಹಂತಕ್ಕೇರಿದ ಫ್ರಾನ್ಸ್

FIFA World cup: France won by 2-1 against Denmark enter Knockout Stage

ಹಾಲಿ ಚಾಂಪಿಯನ್ ಫ್ರಾನ್ಸ್ ಈ ಕತಾರ್ ವಿಶ್ವಕಪ್‌ನಲ್ಲಿಯೂ ಗೆಲುವಿನ ಓಟವನ್ನು ಮುಂದುವರಿಸಿದೆ. ಡೆನ್ಮಾರ್ಕ್ ವಿರುದ್ಧ ನಡೆದ ರೋಚಕ ಸೆಣೆಸಾಟದಲ್ಲಿ ಕಿಲಿಯಾನ್ ಎಂಬಪ್ಪೆ ಅವರ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಫ್ರಾನ್ಸ್ 2-1 ಅಂತರದಿಂದ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಫ್ರಾನ್ಸ್ ಕತಾರ್ ವಿಶ್ವಕಪ್‌ನಲ್ಲಿ ನಾಕೌಟ್ ಹಂತವನ್ನು ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ.

ಬಲಿಷ್ಠ ಫ್ರೆಂಚ್ ತಂಡ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಕಾರಣ ಈ ಪಂದ್ಯದಲ್ಲಿ ಗೆದ್ದರೆ ಅಂತಿಮ 16ರ ಘಟ್ಟಕ್ಕೆ ತಲುಪಲಿದೆ ಎಂಬುದು ಸ್ಪಷ್ಟವಾಗಿತ್ತು. ಅದಕ್ಕೆ ಪೂರಕವಾಗಿ ಅದ್ಭುತ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಪಡೆ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಫ್ರಾನ್ಸ್ ಪರವಾಗಿ ಯುವ ಆಟಗಾರ ಕಿಲಿಯಾನ್ ಎಂಬಪ್ಪೆ ಎರ್ಡು ಗೋಲು ಸಿಡಿಸಿದ್ದು ಫ್ರಾನ್ಸ್ ಗೆಲುವುವಿಗೆ ಕಾರಣವಾಯಿತು. ಇನ್ನು ಡೆನ್ಮಾರ್ಕ್ ಕೂಡ ಅದ್ಭುತ ಪ್ರದರ್ಶನ ನೀಡಿತಾದರೂ ಒಂದು ಗೋಲು ಗಳಿಸಲಷ್ಟೇ ಶಕ್ತವಾಯಿತು.

ಸ್ಟೇಡಿಯಂ 974ರಲ್ಲಿ ನಡೆದ ಈ ಪಂದ್ಯದಲ್ಲಿ 61ನೇ ನಿಮಿಷದಲ್ಲಿ ಫ್ರಾನ್ಸ್ ತಂಡದ ಪರವಾಗಿ ಮಿಡ್ ಫೀಲ್ಡ್ ಆಟಗಾರ ಕಿಲಿಯಾನ್ ಎಂಬಪ್ಪೆ ಗೋಲು ಸಿಡಿಸುವ ಮೂಲಕ ಮೊದಲ ಮೇಲುಗೈ ಒದಗಿಸಿದರು. ಹೆರ್ನಾಂಡ್ಸ್ ನೀಡಿದ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ಯುವ ಆಟಗಾರ ಯಶಸ್ವಿಯಾದರು. ಅದಾಗಿ 7 ನಿಮಿಷದಲ್ಲಿ ಡೆನ್ಮಾರ್ಕ್ ಕೂಡ ಗೋಲು ದಾಖಲಿಸುವ ಮೂಲಕ ಸಮಬಲದ ಸಾಧನೆ ಮಾಡುವಲ್ಲಿ ಯಶಸ್ವಿಯಾಯಿತು. ಕ್ರಿಸ್ಟೆನ್ಸನ್ ಈ ಗೋಲು ಸಿಡಿಸಿ ಡೆನ್ಮಾರ್ಕ್‌ಗೆ ಯಶಸ್ಸು ನೀಡಿದರು.

ಎರಡು ತಂಡಗಳು ಕೂಡ ಪೈಪೋಟಿಯ ಪ್ರದರ್ಶನ ನೀಡುತ್ತಿದ್ದಾಗಲೇ ಫ್ರಾನ್ಸ್‌ ತಂಡ ಮತ್ತೊಮ್ಮೆ ಮೇಲುಗೈ ಪಡೆಯುವಲ್ಲಿ ಯಶಸ್ವಿಯಾಯಿತು. 86ನೇ ನಿಮಿಷದಲ್ಲಿ ಡೆನ್ಮಾರ್ಕ್‌ನ ರಕ್ಷಣಾ ವಿಭಾಗದ ಇಬ್ಬರು ಆಟಗಾರರನ್ನು ವಂಚಿಸಿ ಎರಡನೇ ಗೋಲು ಸಿಡಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಈ ಪಂದ್ಯದಲ್ಲಿ ಫ್ರಾನ್ಸ್ ಮೇಲುಗೈ ಸಾಧಿಸಿತು. ಬಳಿಕ ಡೆನ್ಮಾರ್ಕ್‌ಗೆ ಗೋಲು ಗಳಿಸಲು ಅವಕಾಶ ನೀಡದ ಫ್ರಾನ್ಸ್ ಪಂದ್ಯವನ್ನು ಗೆದ್ದುಕೊಂಡಿದೆ.

ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಸಾಕಷ್ಟ ನಿರೀಕ್ಷೆ ಮೂಡಿಸಿರುವ ಎಂಬಪ್ಪೆ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಫ್ರಾನ್ಸ್ ತಂಡದ ಪರವಾಗಿ 12ನೇ ಪಂದ್ಯದಲ್ಲಿ ಅವರು ಗಳಿಸಿರುವ 14ನೇ ಗೋಲು ಇದಾಗಿದೆ.

ಡೆನ್ಮಾರ್ಕ್ XI: ಕ್ಯಾಸ್ಪರ್ ಸ್ಮಿಚೆಲ್, ಜೋಕಿಮ್ ಮೆಹ್ಲೆ, ಜೋಕಿಮ್ ಆಂಡರ್ಸನ್, ವಿಕ್ಟರ್ ನೆಲ್ಸನ್, ಆಂಡ್ರಿಯಾಸ್ ಕ್ರಿಸ್ಟೇನ್ಸನ್, ರಾಸ್ಮಸ್ ಕ್ರಿಸ್ಟೆನ್ಸೆನ್, ಪಿಯರೆ-ಎಮಿಲ್ ಹಾಜ್ಬ್ಜೆರ್ಗ್, ಕ್ರಿಶ್ಚಿಯನ್ ಎರಿಕ್ಸೆನ್, ಜೆಸ್ಪರ್ ಲಿಂಡ್ಸ್ಟ್ರಾಮ್, ಮಿಕ್ಕೆಲ್ ಡ್ಯಾಮ್ಸ್ಗಾರ್ಡ್, ಆಂಡ್ರಿಯಾಸ್ ಕಾರ್ನೆಲಿಯಸ್.

ಫ್ರಾನ್ಸ್ XI: ಹ್ಯೂಗೋ ಲೊರಿಸ್, ಜೂಲ್ಸ್ ಕೌಂಡೆ, ರಾಫೆಲ್ ವರಾನೆ, ದಯೋಟ್ ಉಪಮೆಕಾನೊ, ಥಿಯೋ ಹೆರ್ನಾಂಡೆಜ್, ಆಡ್ರಿಯನ್ ರಾಬಿಯೊಟ್, ಆರೆಲಿಯನ್ ಟ್ಚೌಮೆನಿ, ಆಂಟೊಯಿನ್ ಗ್ರೀಜ್‌ಮನ್, ಉಸ್ಮಾನೆ ಡೆಂಬೆಲೆ, ಒಲಿವಿಯರ್ ಗಿರೌಡ್, ಕಿಲಿಯನ್ ಎಂಬಪ್ಪೆ.

Story first published: Sunday, November 27, 2022, 2:35 [IST]
Other articles published on Nov 27, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+