Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Golden Boot ಮೇಲೆ ಕಣ್ಣು ನೆಟ್ಟಿರುವ ಮೆಸ್ಸಿ; ರೇಸ್‌ನಲ್ಲಿ ಎಂಬಪ್ಪೆ

ಫಿಫಾ ವಿಶ್ವಕಪ್‌ ರೋಚಕ ಘಟ್ಟದತ್ತ ದಿನ ಕಳೆದಂತೆ ಮುಖ ಮಾಡಿದೆ. ಈ ಟೂರ್ನಿಯಲ್ಲಿ 48 ತಂಡಗಳು 12 ಗುಂಪುಗಳಲ್ಲಿ ಈ ಮೊದಲು ಸ್ಪರ್ಧಿಸಿದ್ದವು. ಈಗ 8 ತಂಡಗಳು ಉಳಿದಿವೆ. ಶುಕ್ರವಾರದಿಂದ ಟೂರ್ನಿಯ ಕ್ವಾರ್ಟರ್ ಫೈನಲ್‌ ಪಂದ್ಯಗಳು ಆರಂಭವಾಗಲಿದ್ದು, ಎಲ್ಲರ ಚಿತ್ತ ಕದ್ದಿದೆ. ಇನ್ನು ಈ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರುವ ತಂಡ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಇನ್ನು ಅಭಿಮಾನಿಗಳು ಗೋಲ್ಡನ್‌ ಬೂಟ್ ಯಾರ ಪಾಲಾಗುತ್ತದೆ ಎಂಬ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ.

ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನು ಬಾರಿಸಿದ ಆಟಗಾರನಿಗೆ ಗೋಲ್ಡನ್‌ ಬೂಟ್‌ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸದ್ಯ ಈ ಪಟ್ಟಿಯಲ್ಲಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅಗ್ರ ಸ್ಥಾನದಲ್ಲಿದ್ದಾರೆ. ಹಾಲಿ ಚಾಂಪಿಯನ್‌ ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಮೆಸ್ಸಿ, ಫ್ರಾನ್ಸ್‌ ತಂಡದ ಕೈಲಿಯನ್ ಎಂಬಪ್ಪೆ ಹಾಗೂ ನಾರ್ವೆಯ ಎರ್ಲಿಂಗ್ ಹಾಲೆಂಡ್ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

Golden Boot

ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರನಿಗೆ ಗೋಲ್ಡನ್‌ ಬೂಟ್ ನೀಡಲಾಗುತ್ತದೆ. ಇನ್ನು ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ಗೋಲು ದಾಖಲಿಸಿದ ಪ್ಲೇಯರ್‌ಗೆ ಬೆಳ್ಳಿ ಬೂಟ್‌, ಮೂರನೇ ಗರಿಷ್ಠ ಗೋಲ್‌ ಸ್ಕೋರರ್‌ಗೆ ಕಂಚಿನ ಬೂಟ್ ನೀಡಲಾಗುತ್ತದೆ.

8 ಗೋಲು ಬಾರಿಸಿರುವ ಮೆಸ್ಸಿ

ಪ್ರಸಕ್ತ ಫಿಫಾ ವಿಶ್ವಕಪ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಲಿಯೋನೆಲ್ ಮೆಸ್ಸಿ ಅವರು ಗೋಲ್ಡನ್‌ ಬೂಟ್‌ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಲ್ಲಿಯವರೆಗೆ ಮೆಸ್ಸಿ ಟೂರ್ನಿಯಲ್ಲಿ ಒಟ್ಟು 8 ಗೋಲು ಸಿಡಿಸಿದ್ದಾರೆ. ಈ ಮೂಲಕ ಪ್ರತಿಷ್ಠಿತ ಗೌರವ ಪಡೆಯುವ ಹಾಟ್ ಫೆವರೀಟ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಇವರ ಮುಂದಾಳತ್ವದಲ್ಲಿ ಅರ್ಜೆಂಟೀನಾ ಮತ್ತೊಮ್ಮೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವ ನಿಟ್ಟಿನಲ್ಲಿ ಚಿತ್ತವನ್ನು ನೆಟ್ಟಿದೆ.

Golden Boot

ಫ್ರಾನ್ಸ್‌ನ ಸ್ಟಾರ್ ಆಟಗಾರ ಕೈಲಿಯನ್ ಎಂಬಪ್ಪೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಈ ಟೂರ್ನಿಯಲ್ಲಿ ಈ ವರೆಗೆ 7 ಗೋಲು ದಾಖಲಿಸಿದ್ದಾರೆ. ನಾರ್ವೆಯ ಎರ್ಲಿಂಗ್ ಹಾಲೆಂಡ್ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಸಹ ಈ ಟೂರ್ನಿಯಲ್ಲಿ ಇಲ್ಲಿನ ವರೆಗೆ 7 ಗೋಲು ಬಾರಿಸಿದ್ದಾರೆ.

ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿ ಮೆಸ್ಸಿ

ವಿಶ್ವ ಫುಟ್ಬಾಲ್‌ ಲೋಕದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಇನ್ನು ಸಹ ಒಮ್ಮೆಯೂ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಗೆದ್ದಿಲ್ಲ. 2022ರಲ್ಲಿ ಕತಾರ್‌ನಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಎಂಬಪ್ಪೆ 8 ಗೋಲು ಬಾರಿಸಿ ಗೋಲ್ಡನ್‌ ಬೂಟ್ ತಮ್ಮದಾಗಿಸಿಕೊಂಡಿದ್ದರು. ಇನ್ನು ಬೆಳ್ಳಿಯ ಬೂಟ್‌ ಮೆಸ್ಸಿ ಪಾಲಾಗಿತ್ತು. ಈ ಬಾರಿ ಮೆಸ್ಸಿಗೆ ಗೋಲ್ಡನ್‌ ಬೂಟ್‌ ಗೆಲ್ಲುವ ಹೆಚ್ಚಿನ ಅವಕಾಶ ಇದೆ.

Story first published: Thursday, July 9, 2026, 16:56 [IST]
Other articles published on Jul 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+