Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup: ಮುಟ್ಟಿದರೆ ಮುನಿಯವ ಚೆಂಡು; ಟೂರ್ನಿಯ ರಿಯಲ್‌ ಹೀರೋ ಈ ಸ್ಮಾರ್ಟ್ ಫುಟ್ಬಾಲ್‌

ಫಿಫಾ ವಿಶ್ವಕಪ್‌ ಫುಟ್ಬಾಲ್ ಅಂತಿಮ ಘಟ್ಟದತ್ತ ಮುಖ ಮಾಡಿದೆ. ಈಗಾಗಲೇ ಸ್ಪೇನ್ ತಂಡ 16 ವರ್ಷಗಳ ಬಳಿಕ ವಿಶ್ವಕಪ್‌ ಫುಟ್ಬಾಲ್ ಫೈನಲ್‌ಗೆ ಅರ್ಹತೆ ಪಡೆದಿದೆ. ಇನ್ನು ಎರಡನೇ ಸೆಮಿಫೈನಲ್‌ನಲ್ಲಿ ಅರ್ಜೆಂಟಿನಾ ಹಾಗೂ ಇಂಗ್ಲೆಂಡ್ ತಂಡಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಭಿಮಾನಿಗಳು ಫೈನಲ್‌ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ. ಈ ವೇಳೆ ಎಲ್ಲರ ಚಿತ್ತ ಫುಟ್ಬಾಲ್ ಆಟಗಾರರು ಬಳಸುವ ಪರಿಕರಗಳತ್ತ ನೆಟ್ಟಿದೆ. ಅಲ್ಲದೆ ಫುಟ್ಬಾಲ್‌ ಚೆಂಡಿನ ವಿಶೇಷತೆಯ ಬಗ್ಗೆಯೂ ಅಭಿಮಾನಿಗಳು ಹುಡುಕಾಟ ನಡೆಸಿದ್ದಾರೆ.

ಫಿಫಾ ಮತ್ತು ಆಡಿಡಾಸ್‌ ಈ ಚೆಂಡನ್ನು ನಿರ್ಮಿಸುವಲ್ಲಿ ಪ್ರತಿ ಹಂತದಲ್ಲೂ ಆಧುನಿಕತೆಯನ್ನು ಬಳಸುತ್ತಲೇ ಇವೆ. ಈ ಪ್ರಯತ್ನದ ಭಾಗವಾಗಿ ಈ ಬಾರಿ ಸ್ಮಾರ್ಟ್‌ ಫುಟ್‌ಬಾಲ್‌ ಎಂಬೆಡೆಡ್‌ ಸೆನ್ಸರ್‌ ಬಳಸಲಾಗಿದ್ದು, ಈ ವ್ಯವಸ್ಥೆಯು ನಿರಂತರವಾಗಿ ಡೇಟಾವನ್ನು ರವಾನಿಸುತ್ತಲೇ ಇರುತ್ತದೆ. ಈ ತಂತ್ರಜ್ಜಾನದ ಸಹಾಯದಿಂದಲೇ ಮ್ಯಾಚ್‌ ರೆಫ್ರಿಗಳು ವಿಎಆರ್‌ ಸಹಯಾ ಪಡೆಯುತ್ತಿದ್ದಾರೆ. ಅಲ್ಲದೆ ಸ್ಪಷ್ಟ ತೀರ್ಪನ್ನು ನೀಡಲು ಸಹಾಯಕವಾಗುತ್ತದೆ.

FIFA World Cup

ಈ ಫುಟ್ಬಾಲ್‌ ನೋಡಲು ಸಾಮಾನ್ಯ ಫುಟ್ಬಾಲ್‌ನಂತೆ ಕಾಣುತ್ತದೆ. ಆದರೆ ಇದರ ಹಿಂದೆ ದೊಡ್ಡ ತಂತ್ರಜ್ಞಾನವೇ ಇದೆ. ಈ ಫುಟ್ಬಾಲ್‌ ಹೊರಭಾಗದಲ್ಲಿ ಸಣ್ಣ ಸೆನ್ಸರ್‌ ಮಾಡ್ಯೂಲ್‌ಗಳು ಇದ್ದು, ಹಗುರವಾದ ಚಿಪ್‌ ಸೆಟ್‌ ಬಳಸಲಾಗಿದೆ. ಇದರಿಂದ ಚೆಂಡಿನ ಚಲನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಚೆಂಡಿನಲ್ಲಿ ಬಳಸಲಾದ ಸೆನ್ಸರ್‌ನಿಂದ ಏನು ಉಪಯೋಗ?

ಈ ಚೆಂಡು ಪಂದ್ಯದ ಸಮಯದಲ್ಲಿ ಸಾವಿರಾರು ಡೇಟಾ ಪಾಯಿಂಟ್‌ಗಳನ್ನು ಸೆರೆಹಿಡಯುತ್ತದೆ. ಇದರಿಂಧ ಚೆಂಡು ಚಲಿಸುವ ವೇಗ, ತಿರುಗುವಿಕೆ, ಸ್ಪರ್ಷದಂತಹ ಸೂಕ್ಷ್ಮ ಮಾಹಿತಿಯನ್ನು ನೀಡುತ್ತದೆ. ಇದನ್ನು ಫಿಫಾ ಟೆಕ್ನಾಲಜಿಕಲ್‌ ಸಿಸ್ಟಮ್‌ಗೆ ವರ್ಗಾಯಿಸಲಾಗುತ್ತದೆ.

ಈ ಚೆಂಡು ಎಐ ಮತ್ತು ವಿಶ್ವಕಪ್‌ ಕ್ರೀಡಾಂಗಣದಲ್ಲಿ ಸ್ಥಾಪಿತ ಸುಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನದಿಂದ ನಿಖರವಾದ ಕಿಕ್‌, ಚೆಂಡಿನ ಚಲನೆಯನ್ನು ಗ್ರಾಫಿಕ್ಸ್‌ ಮೂಲಕ ನೀಡುತ್ತದೆ. ಹಲವು ಬಾರಿ ಈ ಗ್ರಾಫಿಕ್ಸ್‌ಗಳನ್ನು ಟಿವಿ ಪರದೆಯ ಮೇಲೂ ನೋಡಿರಬಹುದು.

ವಿಎಆರ್‌ಗೆ ನೀಡಲು ಸಹಾಯಕ

ಈ ತಂತ್ರಜ್ಞಾನ ವಿಎಆರ್ ಬಳಕೆಗೆ ತುಂಬ ಸಹಾಯಕವಾಗಿದೆ. ಈ ಟೆಕ್ನಾಲಜಿ ಆಟಗಾರ ಚೆಂಡನ್ನು ಒದೆಯುವ ನಿಖರವಾದ ಸಮಯವನ್ನು ತಿಳಿಸುತ್ತದೆ. ಇದನ್ನು ಕ್ರೀಡಂಗಣದಲ್ಲಿನ ಇತರ ಕ್ಯಾಮೆರಾಗಳೊಂದಿಗೆ ಸೇರಿಸಿದಾಗ ಕ್ಲೀಯರ್‌ ಪಿಕ್ಚರ್ ಸಿಗುತ್ತದೆ. ಇದು ಆಫ್‌ ಸೈಡ್ ನೀಡಲು ತುಂಬ ನೆರವಾಗುತ್ತಿದೆ.

ಕಳೆದ ವರ್ಷದ ಫುಟ್ಬಾಲ್‌ ವಿಶ್ವಕಪ್‌ಗೆ ಹೋಲಿಸಿದರೆ, ಈ ವರ್ಷ ಇನ್ನಷ್ಟು ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಫಿಫಾ ಚಿಂತನೆ ನಡೆಸಿದೆ.

Story first published: Wednesday, July 15, 2026, 17:48 [IST]
Other articles published on Jul 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+