Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭ್ಯಾಸದಿಂದ ಹೊರಗುಳಿದ ಮೆಸ್ಸಿ: ಫೈನಲ್ ಪಂದ್ಯಕ್ಕೂ ಮುನ್ನ ಗಾಯಗೊಂಡರಾ ಅರ್ಜೆಂಟಿನಾ ಸ್ಟಾರ್!

FIFA World cup: Lionel Messi Skips Training head of the World Cup final, could be battling with injury

ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯ ಮಾತ್ರವೇ ಬಾಕಿಯಿದ್ದು ಅರ್ಜೆಂಟಿನಾ ಹಾಗೂ ಫ್ರಾನ್ಸ್ ತಂಡಗಳು ಟೂರ್ನಿಯ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಭಾನುವಾರ ನಡೆಯಲಿರುವ ಈ ಮಹಾಕದನವನ್ನು ವೀಕ್ಷಿಸಲು ವಿಶ್ವದ ಫುಟ್ಬಾಲ್ ಪ್ರೇಮಿಗಳು ಕಾತರರಾಗಿದ್ದಾರೆ. ಈ ಮಧ್ಯೆ ಈ ಪಂದ್ಯದ ಕೇಂದ್ರ ಬಿಂದುವಾಗಿರುವ ಅರ್ಜೆಂಟಿನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಈ ಮಹತ್ವದ ಪಂದ್ಯದಿಂದ ಹೊರಗುಳಿಯಲಿದ್ದಾರಾ ಎಂಬ ಆತಂಕ ಮೂಡಿಸಿದೆ.

ಲಿಯೋನೆಲ್ ಮೆಸ್ಸಿ ಅವರ ಐದನೇ ವಿಶ್ವಕಪ್ ಟೂರ್ನಿ ಇದಾಗಿದ್ದು ಇದೇ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಮೆಸ್ಸಿ ಮುಂದಿದೆ. ಈ ವಿಶ್ವಕಪ್‌ನಲ್ಲಿ ಮೆಸ್ಸು ಅದ್ಭುತ ಪ್ರದರ್ಶನ ನೀಡಿದ್ದು ಅರ್ಜೆಂಟಿನಾ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಐದು ಗೋಲು ಹಾಗೂ ಮೂರು ಅಸಿಸ್ಟ್ ಹೊಂದಿರುವ ಮೆಸ್ಸಿ ಫೈನಲ್ ಪಂದ್ಯದಲ್ಲಿಯೂ ಅರ್ಜೆಂಟಿನಾ ತಂಡಕ್ಕೆ ದೊಡ್ಡ ಭರವಸೆಯಾಗಿದ್ದಾರೆ. ಆದರೆ ಅರ್ಜೆಂಟಿನಾ ತಂಡದ ನಾಯಕ ಗಾಯಕ್ಕೆ ತುತ್ತಾಗಿದ್ದಾರಾ ಎಂಬ ಅನುಮಾನಗಳು ಈಗ ಎದ್ದಿದೆ.

ಶುಕ್ರವಾರ ಅರ್ಜೆಂಟಿನಾ ತಂಡದ ಅಭ್ಯಾಸಕ್ಕೆ ನಾಯಕ ಲಿಯೋನೆಲ್ ಮೆಸ್ಸಿ ಗೈರಾಗಿದ್ದಾರೆ. ಈ ಸಂದರ್ಭದಲ್ಲಿ ದಿ ಮಿರರ್ ವೆಬ್‌ಸೈಟ್ ವರದಿಯೊಂದನ್ನು ಪ್ರಕಟಿಸಿದ್ದು ಕ್ರಿಯೇಶಿಯಾ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ಗಾಯಗೊಂಡಿದ್ದು ಆ ಪಂದ್ಯದ ಅಂತಿಮ ಹಂತದಲ್ಲಿ ಮೈದಾನದಿಂದ ಹೊರಬಂದಿದ್ದರು, ಈ ಕಾರಣದಿಂದಾಗಿಯೇ ಅರ್ಜೆಂಟಿನಾ ತಂಡದ ನಾಯಕ ಅಭ್ಯಾಸದಿಂದಲೂ ಹೊರಗುಳಿದಿದ್ದಾರೆ ಎಂದಿದೆ. ಈ ವರದಿ ವಿಶ್ವದಾದ್ಯಂತ ಇರುವ ಲಿಯೋನೆಲ್ ಮೆಸ್ಸಿ ಅಭಿಮಾನಿಗಳ ಕಳವಳಕ್ಕೆ ಕಾರಣವಾಗಿದೆ.

ಆದರೆ ಅರ್ಜೆಂಟೀನಾ ತಂಡದಿಂದ ಸ್ಟಾರ್‌ ಆಟಗಾರ ಗಾಯಕ್ಕೆ ತುತ್ತಾಗಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಭಾಗಿಯಾಗಿದ್ದ ಅನೇಕ ಆಟಗಾರರಿಗೆ ಚೇತರಿಸಿಕೊಳ್ಳಳು ಹೆಚ್ಚಿನ ಅವಧಿಯನ್ನು ನೀಡಲಾಗಿ ಈ ಕಾರಣದಿಂದಾಗಿ ಮೆಸ್ಸಿ ಸೇರಿದಂತೆ ಹಲವು ಆಟಗಾರರು ಅಭ್ಯಾಸದಿಂದ ಹೊರಗುಳಿದ್ದು ಅದರ ಬದಲಿಗೆ ಜಿಮ್ ಸೆಷನ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ.

Story first published: Saturday, December 17, 2022, 2:20 [IST]
Other articles published on Dec 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+