Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫಿಫಾ ವಿಶ್ವಕಪ್: ಪ್ರಿ ಕ್ವಾ.ಫೈನಲ್‌ನಲ್ಲಿ ಸ್ಪೇನ್‌ಗೆ ಇಂದು ಮೊರಾಕ್ಕೋ ಸವಾಲು

FIFA world cup: Morocco face Spain in pre quarter Final match

ಫಿಫಾ ವಿಶ್ವಕಪ್‌ನಲ್ಲಿ ಇಂದು ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಮೊರಾಕ್ಕೋ ಹಾಗೂ ಸ್ಪೈನ್ ತಂಡಗಳು ಮುಖಾಮುಖಿಯಾಗಲಿದೆ. ಮಂಗಳವಾರ ರಾತ್ರಿ ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶ್ವಕಪ್ 2022 ಗ್ರೂಪ್ ಆಫ್ 16 ಹಂತದ ಅಂತಿಮ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದ್ದು ಕ್ವಾರ್ಟರ್‌ಫೈನಲ್‌ ಸ್ಥಾನಕ್ಕೇರುವ ಕೊನೆಯ ಎರಡು ತಂಡಗಳು ಯಾವುದು ಎಂದು ಇಂದು ನಿರ್ಧಾರವಾಗಲಿದೆ.

ಮೊರಾಕ್ಕೋ ತಂಡ ಈ ಪಂದ್ಯದಲ್ಲಿ ಪೂರ್ಣ ಪ್ರಮಾಣದ ಸಾಮರ್ಥ್ಯದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ವಾಲಿಡ್ ರೆಗ್ರಾಗುಯಿ ಕೋಚ್ ಆಗಿರುವ ಮೊರಾಕ್ಕೋ ತಂಡಕ್ಕೆ ಗಾಯದ ಸಮಸ್ಯೆ ಇಲ್ಲದಿರುವುದರಿಂದ ಆಟಗಾರರ ಆಯ್ಕೆಯಲ್ಲಿ ಯಾವುದೇ ಸಮಸ್ಯೆಯಾಗದು. ಇನ್ನು ತಂಡದ ಪ್ರಮುಖ ಆಟಗಾರ ಯಾಸಿನ್ ಬೌನೌ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು ಆರಂಭಿಕ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿಲ್ಲ.

ಮೊರಾಕ್ಕೋ ತಂಡದ ಅಚ್ರಾಫ್ ಹಕಿಮಿ ಪಾದದಲ್ಲಿ ಸಣ್ಣ ಪ್ರಮಾಣದ ಗಾಯದಿಂದಾಗಿ ಕಳೆದ ಶನಿವಾರ ಪೂರ್ಣ ಪ್ರಮಾಣದ ಅಭ್ಯಾಸದಿಂದ ಹೊರಗುಳಿದಿದ್ದರು ಕೂಡ ಈ ಪಂದ್ಯಕ್ಕೆ ಪೂರ್ಣವಾಗಿ ಸಿದ್ದವಾಗುವ ನಿರೀಕ್ಷೆಯಿದೆ. ಜಿಯೆಚ್, ಸೊಫ್ಯಾನ್ ಅಮ್ರಾಬತ್, ಸೋಫಿಯಾನ್ ಬೌಫಲ್ ಕೂಡ ವಿಶ್ರಾಂತಿ ಪಡೆದುಕೊಂಡು ಈ ಮಹತ್ವದ ಪಂದ್ಯಕ್ಕೆ ಸಿದ್ದವಾಗಿದ್ದಾರೆ.

ಇತ್ತ ಸ್ಪೈನ್ ತಂಡ ಕೂಡ ನಾಕೌಟ್ ಹಂತಕ್ಕೆ ಪೂರ್ಣ ಪ್ರಮಾಣದ ಆಟಗಾರ ಪಡೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಕಳೆದ ಶುಕ್ರವಾರದ ಅಭ್ಯಾಸದಲ್ಲಿ ಎನ್ರಿಕ್ ಡ್ಯಾನಿ ಓಲ್ಮೊ, ಡೇವಿಡ್ ರಾಯಾ ಮತ್ತು ಸೀಸರ್ ಅಜ್ಪಿಲಿಕ್ಯೂಟಾ ಭಾಗಿಯಾಗಿರಲಿಲ್ಲ. ಡ್ಯಾನಿ ಓಲ್ಮೊ ಮಣಿಗಂಟಿನ ಗಾಯಕ್ಕೆ ಒಳಗಾಗಿದ್ದ ಅವರು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಫೆರನ್ ಟೊರೆಸ್ ಜಾರ್ಡಿ ಅಲ್ಬಾ ನಾಕೌಟ್ ಪಂದ್ಯದ ಆರಂಭಿಕ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ.

ಮೊರಾಕೊ ಸಂಭಾವ್ಯ XI: ಬೊನೊ, ಹಕೀಮ್, ಸೈಸ್, ಆಗ್ವಾರ್ಡ್, ಮಾಸ್ರಾಯ್; ಔನಾಹಿ, ಅಮ್ರಾಬ್ತಿ, ಸಹಿರಿ, ಜಿಯೆಚ್, ಎನ್-ನೆಸಿರಿ, ಬೌಫಲ್

ಸ್ಪೇನ್ ಊಹಿಸಿದ XI: ಸೈಮನ್; ಕಾರ್ವಾಜಾಲ್, ರೋಡ್ರಿ, ಲ್ಯಾಪೋರ್ಟೆ, ಆಲ್ಬಾ; ಪೆದ್ರಿ, ಬಸ್ಕೆಟ್ಸ್, ಗವಿ; ಟೊರೆಸ್, ಮೊರಾಟಾ, ಓಲ್ಮೊ

Story first published: Tuesday, December 6, 2022, 19:14 [IST]
Other articles published on Dec 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+