Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ಮದ್ಯ ಮಾರಾಟ ನಿಷೇಧ ಮಾಡಿದ ಆಯೋಜಕರು

FIFA World cup: Organisers bans alcohol sales at World Cup

ಫಿಫಾ ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಫುಟ್ಬಾಲ್ ಲೋಕದ ಅತಿ ದೊಡ್ಡ ಟೂರ್ನಿಗೆ ಚಾಲನೆ ದೊರೆಯಲಿದ್ದು ಇದಕ್ಕೂ ಮುನ್ನ ಆಯೋಜಕರು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ವಿಶ್ವಕಪ್ ನಡೆಯಲಿರುವ ದೋಹಾ ಸುತ್ತಲಿನ 8 ಕ್ರೀಡಾಂಗಣಗಳಲ್ಲಿಯೂ ಮದ್ಯವನ್ನು ನಿಷೇಧಿಸಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ ಎಂಟು ಸ್ಥಳಗಳಲ್ಲಿ ಬಹುಕಾಲದಿಂದ ವಿಶ್ವಕಪ್ ಬಿಯರ್ ಪ್ರಾಯೋಜಕತ್ವ ಪಡೆದುಕೊಂಡಿರುವ ಬಡ್‌ವೈಸರ್‌ನ ಮಾರಾಟಗಳನ್ನು ನಿಷೇಧಿಸುವಂತೆ ಕತಾರ್ ಅಧಿಕಾರಿಗಳು ಫಿಫಾ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ವರ್ಲ್ಡ್ ಕಪ್ ಸಂಘಟನಾ ಸಮಿತಿ ಮತ್ತು ಫಿಫಾ ಈ ವರದಿಗಳ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಲು ನಿರಾಕರಿಸಿದವು. ಲಂಡನ್ ಟೈಮ್ಸ್ ಈ ವಿಚಾರವನ್ನು ಮೊದಲಿಗೆ ಬಹಿರಂಗಪಡಿಸಿತ್ತು.

ಬಡ್‌ವೈಸರ್ ಬಿಯರ್ ಕಂಪನಿಯ ಮಾತೃ ಸಂಸ್ಥೆಯಾದ ಎಬಿ ಇನ್‌ಬೆವ್ ಕಂಪನಿ ಫಿಫಾ ವಿಶ್ವಕಪ್‌ನಲ್ಲಿ ಬಿಯರ್‌ಗಳನ್ನು ಮಾರಾಟ ಮಾಡುವುದಕ್ಕಾಗಿಯೇ ದೊಡ್ಡ ಮೊತ್ತವನ್ನು ನೀಡಿ ಮಾರಾಟದ ಹಕ್ಕು ಪಡೆದುಕೊಳ್ಳುತ್ತಿದೆ. 1986ರ ವಿಶ್ವಕಪ್‌ನ ಬಳಿಕ ಈ ಕಂಪನಿ ಫಿಫಾ ಜೊತೆಗೆ ವ್ಯವಹಾರದ ಸಂಬಂಧ ಹೊಂದಿದೆ. ವಿಶ್ವಕಪ್ ಆಯೋಜನೆಗೆ ಕತಾರ್ ಬಿಡ್ ಸಲ್ಲಿಸಿದ್ದಾಗ ಫಿಫಾದ ವ್ಯಾವಹಾರಿಕಾ ಪಾಲುದಾರರನ್ನು ಗೌರವಿಸುವುದಾಗಿ ಒಪ್ಪಿಕೊಂಡಿತ್ತು. 2010ರಲ್ಲಿ ಬಿಡ್ ಗೆದ್ದುಕೊಂಡಾಗ ಇದಕ್ಕೆ ಸಂಬಂಧಿಸಿದ ಒಪ್ಪಂದಕ್ಕೂ ಸಹಿ ಹಾಕಿತ್ತು. ಆದರೆ ಈಗ ವಿಶ್ವಕಪ್ ಪಂದ್ಯಗಳು ನಡೆಯುವ ಕ್ರೀಡಾಂಗಣದಲ್ಲಿ ಬಿಯರ್‌ಗಳನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದೆ.

ನವೆಂಬರ್ 20ರಂದು ಫಿಫಾ ವಿಶ್ವಕಪ್ ಆರಂಬವಾಗಲಿದ್ದು ಉದ್ಘಾಟನಾ ಪಂದ್ಯದಲ್ಲಿ ಕತಾರ್ ಹಾಗೂ ಈಕ್ವೆಡಾರ್ ತಂಡಗಳು ಮುಖಾಮುಖಿಯಾಗಲಿದೆ. 32 ತಂಡಗಳು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸಲಿದ್ದು ವಿಶ್ವಕಪ್ ಟ್ರೋಫಿಗಾಗಿ ಸೆಣೆಸಾಟ ನಡೆಸಲಿದೆ. ಫೈನಲ್ ಪಂದ್ಯ ಡಿಸೆಂಬರ್ 18ರಂದು ನಡೆಯಲಿದೆ.

Story first published: Friday, November 18, 2022, 19:52 [IST]
Other articles published on Nov 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+