FIFA World Cup: ಪನಾಮ ಮಣಿಸಿದ ಇಂಗ್ಲೆಂಡ್, ಕೇನ್ ದಾಖಲೆಯ ಗೋಲು; ಕೊಲಂಬಿಯಾ ವಿರುದ್ಧ ಪೋರ್ಚುಗಲ್ ಡ್ರಾ
ನವದೆಹಲಿ: ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮುಂದಾಳತ್ವದ ಪೋರ್ಚುಗಲ್ ತಂಡ ಫಿಫಾ ವಿಶ್ವಕಪ್ 2026ರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಡ್ರಾ ಸಾಧಿಸಿದೆ. ಈ ಪಂದ್ಯದಲ್ಲಿ ಡ್ರಾ ಸಾಧಿಸಿದ ಪೋರ್ಚುಗಲ್ ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿದೆ.
ಭಾನುವಾರ, ಮಿಯಾಮಿ ಕ್ರೀಡಾಂಗಣದಲ್ಲಿ ಪೋರ್ಚುಗಲ್ ಕೊಲಂಬಿಯಾ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತು. ಈ ಪಂದ್ಯದಲ್ಲಿ ಪೋರ್ಚುಗಲ್ ಹಾಗೂ ಕೊಲಂಬಿಯಾ ತಂಡದ ಗೋಲ್ ಕೀಪರ್ ಸೊಗಸಾದ ಪ್ರದರ್ಶನ ನೀಡಿದರು. ಈ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಡೇವಿನ್ಸನ್ ಸ್ಯಾಂಚೆಜ್ ಹೆಡರ್ ಮೂಲಕ ಗೋಲು ದಾಖಲಿಸಿದರು. ಆದರೆ ರೆಫರಿ ಆಫ್‌ಸೈಡ್ ಎಂದು ನಿರ್ಣಯ ನೀಡಿದರು. ಹೀಗಾಗಿ ಪೋರ್ಚುಗಲ್ ವಿಶ್ವಕಪ್‌ನಲ್ಲಿ ಗೋಲುರಹಿತ ಡ್ರಾ ಆಡಿದ್ದು ಇದೇ ಮೊದಲು.

ಕೊಲಂಬಿಯಾ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌಟ್ ಹಂತಕ್ಕೆ ಮುನ್ನಡೆದಿದೆ. ಪೋರ್ಚುಗಲ್ ಎರಡನೇ ಸ್ಥಾನ ಮತ್ತು ಕಾಂಗೋ ಡಿಆರ್ ಮೂರನೇ ಸ್ಥಾನ ಗಳಿಸಿದೆ. ಜುಲೈ 1 ರಂದು ಕೊಲಂಬಿಯಾ, ಇಂಗ್ಲೆಂಡ್ ವಿರುದ್ಧ ಪ್ರೀ ಕ್ವಾರ್ಟರ್ ಫೈನಲ್ ಆಡಲಿದ್ದು, ಜುಲೈ 3 ರಂದು ಪೋರ್ಚುಗಲ್, ಕ್ರೊಯೇಷಿಯಾವನ್ನು 32ರ ಹಂತದಲ್ಲಿ ಎದುರಿಸಲಿದೆ.
ಪನಾಮ ಮಣಿಸಿದ ಇಂಗ್ಲೆಂಡ್
ಎಲ್ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅಮೋಘ ಆಟದ ಪ್ರದರ್ಶನ ನೀಡಿ 2-0 ಗೋಲುಗಳಿಂದ ಪನಾಮ ತಂಡದ ವಿರುದ್ಧ ಜಯ ಸಾಧಿಸಿದೆ. ಉಭಯ ತಂಡಗಳು ಮೊದಲಾವಧಿಯ ಆಟದಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿದವು. ಇಂಗ್ಲೆಂಡ್ ಈ ಅವಧಿಯಲ್ಲಿ ಆಕ್ರಮಣಕಾರಿ ಆಟವನ್ನು ಆಡಿತು. ಪನಾಮ ಗೋಲು ಕೀಪರ್ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಇಂಗ್ಲೆಂಡ್‌ಗೆ ಗೋಲು ನೀಡದಂತೆ ತಡೆಯುವಲ್ಲಿ ಸಫಲರಾದರು. ಇನ್ನು ಪನಾಮ ಗೋಲು ಬಾರಿಸುವ ಯೋಜನೆ ಸಹ ಫಲಿಸಲಿಲ್ಲ.
ಎರಡನೇವಧಿಯಲ್ಲಿ ಇಂಗ್ಲೆಂಡ್ ಅಬ್ಬರದ ಆಟವನ್ನು ಆಡಿತು. ಈ ಅವಧಿಯಲ್ಲಿ ಸಿಕ್ಕ ಕಾರ್ನರ್ ಕಿಕ್ ಅವಕಾಶದಲ್ಲಿ ಇಂಗ್ಲೆಂಡ್ ಆಟಗಾರ ಸಮಯೋಚಿತ ಆಟದ ಪ್ರದರ್ಶನ ನೀಡಿದ ಜೂಡ್ ಬೆಲ್ಲಿಂಗ್ಹ್ಯಾಮ್ ಅಬ್ಬರಿಸಿದರು. ಪರಿಣಾಮ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿತು.
ಇಂಗ್ಲೆಂಡ್ ಗೋಲು ದಾಖಲಿಸಿದ ಐದನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಾಯಿತು. ಗೋಲು ಪೆಟ್ಟಿಗೆಯ ಬಲ ಭಾಗದಿಂದ ಬಂದ ಉತ್ತಮ ಪಾಸ್‌ನ ಲಾಭ ಪಡೆದ ಹ್ಯಾರಿ ಕೇನ್ ಹೆಡರ್ ಮೂಲಕ ಗೋಲು ಬಾರಿಸಿದರು. ಇಂಗ್ಲೆಂಡ್ 2-0 ಮುನ್ನಡೆ ಸಾಧಿಸಿತು. ಕೊನೆಯ ಕ್ಷಣದವರೆಗೂ ಗೋಲು ಬಾರಿಸುವ ಎರಡೂ ತಂಡಗಳ ಆಸೆ ಫಲಿಸಲಿಲ್ಲ. ಇಂಗ್ಲೆಂಡ್ ಆಡಿದ 3 ಪಂದ್ಯಗಳಲ್ಲಿ 2 ಜಯ, 1 ಡ್ರಾ ಸಾಧಿಸಿದ್ದು, 7 ಅಂಕಗಳೊಂದಿಗೆ ಎಲ್ ಗುಂಪಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಕೇನ್ ದಾಖಲೆ
ಪನಾಮ ವಿರುದ್ಧದ ಪಂದ್ಯದಲ್ಲಿ ಒಂದು ಗೋಲು ಬಾರಿಸುತ್ತಿದ್ದಂತೆ ಹ್ಯಾರಿ ಕೇನ್ ದೊಡ್ಡ ದಾಖಲೆ ಬರೆದರು. ಇವರು ಫಿಫಾ ವಿಶ್ವಕಪ್ ವೃತ್ತಿಜೀವನದ 11ನೇ ಗೋಲು ಗಳಿಸುವ ಮೂಲಕ, ಇವರು ಗ್ಯಾರಿ ಲಿನೆಕರ್ (10 ಗೋಲು) ಅವರ ದಾಖಲೆಯನ್ನು ಮುರಿದರು. ಈ ಮೂಲಕ ಇಂಗ್ಲೆಂಡ್ ಪರ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲದೆ ಕೇನ್ ವಿಶ್ವಕಪ್‌ನಲ್ಲಿ ಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಗೇಬ್ರಿಯಲ್ ಬಟಿಸ್ಟುಟಾ ಅವರನ್ನು ಹಿಂದಿಕ್ಕಿದ್ದಾರೆ.
ಕ್ರೊಯೇಷಿಯಾಗೆ ಭರ್ಜರಿ ಜಯ
ಎಲ್ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕ್ರೊಯೇಷಿಯಾ 2-1 ಗೋಲುಗಳಿಂದ ಘಾನ ತಂಡವನ್ನು ಮಣಿಸಿತು. ಫಿಫಾ ವಿಶ್ವಕಪ್ 2026ನಲ್ಲಿ ಕ್ರೊಯೇಷಿಯಾ ದಾಖಲಿಸಿದ 2ನೇ ಜಯ ದಾಖಲಿಸಿತು. ಕ್ರೊಯೇಷಿಯಾ ತಂಡದ ಪರ ಪೀಟರ್ 31ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, 83ನೇ ನಿಮಿಷದಲ್ಲಿ ನಿಕೋಲಾ ವ್ಲಾಸಿಕ್ ಗೋಲು ಬಾರಿಸಿ ಮಿಂಚಿದರು. ಘಾನ ಪರ ಡೆರಿಕ್ ಲಕ್ಸೆನ್ 73ನೇ ನಿಮಿಷದಲ್ಲಿ ಗೋಲು ಸಿಡಿಸಿದರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications