For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್: ರೊನಾಲ್ಡೋ ಐತಿಹಾಸಿಕ ವಿಶ್ವದಾಖಲೆ: ಘಾನಾ ವಿರುದ್ದ ಪೋರ್ಚುಗಲ್‌ಗೆ ಭರ್ಜರಿ ಗೆಲುವು

FIFA World cup: Ronaldo create history, Portugal win by 3-2 against Ghana

ಫಿಫಾ ವಿಶ್ವಕಪ್‌ನಲ್ಲಿ ಗುರುವಾರ ಪೋರ್ಚುಗಲ್ ಹಾಗೂ ಘಾನಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಎರಡು ತಂಡಗಳಿಂದಲೂ ಅದ್ಭುತ ಪ್ರದರ್ಶನ ತೀವ್ರ ಪೈಪೋಟಿಯ ಪ್ರದರ್ಶನ ಬಂದಿದ್ದು ಪೋರ್ಚುಗಲ್ ತಂಡ ಗೆಲುವಿನ ನಗೆ ಬೀರಿದೆ. 3-2 ಗೋಲುಗಳ ಅಂತರದಿಂದ ಪೋರ್ಚುಗಲ್ ತಂಡ ಘಾನಾ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಫುಟ್ಬಾಲ್‌ನ ದಿಗ್ಗಜ ಆಟಗಾರ ಎನಿಸಿಕೊಂಡಿರುವ ಪೋರ್ಚುಗಲ್‌ನ ಕ್ರಿಶ್ಚಿಯಾನೋ ರೊನಾಲ್ಡೋ ವಿಶ್ವದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 37ರ ಹರೆಯದ ರೊನಾಲ್ಡೋ ಈ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ ಐದು ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಈ ಪಂದ್ಯದಲ್ಲಿ ಪೋರ್ಚುಗಲ್ ತಂಡದ ಗೆಲುವಿಗೂ ಕಾರಣವಾಗಿದ್ದಾರೆ.

ಮ್ಯಾಂಚೆಸ್ಟರ್ ಯುನೈಟೆಡ್‌ ಜೊತೆಗಿನ ಒಪ್ಪಂದ ಈ ವಾರ ಧಿಡೀರ್ ಆಗಿ ಅಂತ್ಯವಾದ ಬಳಿಕ ರೊನಾಲ್ಡೊ ಸಂಭಾವ್ಯ ಹೊಸ ಕ್ಲಬ್‌ಗಳಿಗೆ ತನ್ನ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಈ ಪಂದ್ಯದ ಮೊದಲಾರ್ಧದಲ್ಲಿ ಎರಡು ಉತ್ತಮ ಅವಕಾಶಗಳನ್ನು ಹಾಳು ಮಾಡಿದ ರೊನಾಲ್ಡೋ ದ್ವಿತಿಯಾರ್ಧದಲ್ಲಿ ದೊರೆತ ಫೆನಾಲ್ಟಿ ಅವಕಾಶದಲ್ಲಿ ಪೋರ್ಚುಗಲ್‌ಗೆ ಮೇಲುಗೈ ಒದಗಿಸುವಲ್ಲಿ ಯಶಸ್ವಿಯಾದರು.

ಘಾನಾ ವಿರುದ್ಧದ ಪಂದ್ಯದಲ್ಲಿ 65ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ರೊನಾಲ್ಡೊ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಐದು ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಪುರುಷ ಆಟಗಾರ ಎನಿಸಿಕೊಂಡರು. ಅಲ್ಲದೆ ಘಾನಾ ವಿರುದ್ಧ ಪೋರ್ಚುಗಲ್‌ಗೆ 1-0 ಮುನ್ನಡೆ ಒದಗಿಸಿದರು.ಆದರೆ ಅದಾದ ಬಳಿಕ 974 ಸ್ಟೇಡಿಯಂನಲ್ಲಿ ಘಾನಾದ ಅಭಿಮಾನಿಗಳ ಬಳಗಕ್ಕೆ ಉತ್ತೇಜನ ನೀಡಲು ಆಂಡ್ರೆ ಅಯೆವ್ 73 ನೇ ನಿಮಿಷದಲ್ಲಿ ಗೋಲು ಬಾರಿಸಿ ಸಮಬಲಕ್ಕೆ ಕಾರಣವಾದರು.

ಅದಾಗಿ ಐದು ನಿಮಿಷಗಳ ಬಳಿಕ ಜೋವೊ ಫೆಲಿಕ್ಸ್ ಗೋಲು ಸಿಡಿಸಿ ಪೋರ್ಚುಗಲ್‌ಗೆ ಮುನ್ನಡೆ ಒದಗಿಸಿದರು. ಅದಾದ ಬಳಿಕ ರೊನಾಲ್ಡೊ ತಮ್ಮಲ್ಲಿನ ಅದ್ಭುತ ಕೌಶಲ್ಯವನ್ನು ಬಳಸಿ ರಾಫೆಲ್ ಲಿಯೊಗೆ ಪಾಸ್ ನೀಡುವ ಮೂಲಕ ಘಾನಾಗೆ ಮತ್ತೊಂದು ಆಘಾತಕ್ಕೆ ಕಾರಣವಾದರು. ಇದಾದ ಬಳಿಕ ಒಸ್ಮಾನ್ ಬುಕಾರಿ ಘಾನಾ ತಂಡಕ್ಕೆ ಎರಡನೇ ಗೋಲು ಗಳಿಸಿದರು ಕೂಡ ಅದಾಗಲೇ ಸಮಯ ಮೀರಿಯಾಗಿತ್ತು. ಈ ಮೂಲಕ ಪೋರ್ಚುಗಲ್ ತಂಡ ಕಳೆದ ನಾಲ್ಕು ವಿಶ್ವಕಪ್‌ಗಳಲ್ಲಿ ಮೊದಲ ಬಾರಿಗೆ ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸಿದಂತಾಗಿದೆ.

ಪೋರ್ಚುಗಲ್ ಆಡುವ ಬಳಗ: ಕೋಸ್ಟಾ, ಜೋವೊ ಕ್ಯಾನ್ಸೆಲೊ, ಡ್ಯಾನಿಲೊ, ಡಯಾಸ್, ಗೆರೆರೊ, ನೆವೆಸ್, ಒಟಾವಿಯೊ, ಸಿಲ್ವಾ, ಬ್ರೂನೋ ಫೆರ್ನಾಂಡಿಸ್, ಫೆಲಿಕ್ಸ್, ಕ್ರಿಸ್ಟಿಯಾನೊ ರೊನಾಲ್ಡೊ.

ಘಾನಾ ಆಡುವ ಹನ್ನೊಂದರ ಬಳಗ: ಝಿಗಿ, ಅಮಾರ್ಟೆ, ಸೀದು, ಜಿಕು, ಸಲಿಸು, ರೆಹಮಾನ್, ಅಬ್ದುಲ್ ಸಮೇದ್, ಪಾರ್ಟಿ, ಕುಡುಸ್, ವಿಲಿಯಮ್ಸ್, ಎ ಆಯೆವ್.

Story first published: Friday, November 25, 2022, 2:30 [IST]
Other articles published on Nov 25, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+