Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫಿಫಾ ವಿಶ್ವಕಪ್: ರೋಚಕ ಡ್ರಾದಲ್ಲಿ ಅಂತ್ಯ ಕಂಡ ಉರುಗ್ವೆ vs ದ. ಕೊರಿಯಾ ಪಂದ್ಯ

FIFA World Cup: Uruguay vs South Korea match ended with goalless draw Highlights

ಫಿಫಾ ವಿಶ್ವಕಪ್‌ನಲ್ಲಿ ಉರುಗ್ವೆ ಹಾಗೂ ದಕ್ಷಿಣ ಕೊರಿಯಾ ತಂಡಗಳ ರೋಚಕ ಕಾದಾಟ ನಡೆದಿದೆ. ಆದರೆ ಒಂದೂ ಗೋಲು ದಾಖಲಾಗದೆ ಈ ಪಂದ್ಯ ಡ್ರಾ ಫಲಿತಾಂಶದೊಂದಿಗೆ ಅಂತ್ಯವಾಯಿತು. ದಕ್ಷಿಣ ಕೊರಿಯಾ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಸನ್ ಹ್ಯೂಂಗ್ ಮಿನ್ ಮುಂದಾಳತ್ವದಲ್ಲಿ ಅಕ್ರಮಣ ಪ್ರದರ್ಶನ ನೀಡಿತು. ಆದರೆ ಉರುಗ್ವೆ ತಂಡದ ರಕ್ಷಣಾ ವಿಭಾಗ ಅಷ್ಟೇ ಪ್ರಬಲವಾದ ಪ್ರತಿರೋಧವನ್ನು ತೋರ್ಪಡಿಸುವಲ್ಲಿ ಯಶಸ್ವಿಯಾಗಿತ್ತು.

ಪಂದ್ಯದಲ್ಲಿ ಪೈಪೋಟಿಯನ್ನು ನೀಡಲು ಉರುಗ್ವೆ ತಂಡಕ್ಕೆ ಸುಮರು 15 ನಿಮಿಷಗಳು ಹಿಡಿದಿತ್ತು. ಅದಾದ ಬಳಿಕ ಉರುಗ್ವೆ ಕೂಡ ನಿಧಾನವಾಗಿ ತನ್ನ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸುತ್ತಾ ಸಾಗಿತು. ಹೀಗಾಗಿ ಎರಡು ತಂಡಗಳು ಕೂಡ ಜಿದ್ದಾಜಿದ್ದಿನ ಪ್ರದರ್ಶನ ನೀಡಿದೆ. ಆದರೆ ಅಂತಿಮವಾಗಿ ಎರಡೂ ತಂಡಗಳು ಗೋಲುಗಳಿಲ್ಲದೆ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಪಂದ್ಯದ 18 ನೇ ನಿಮಿಷದಲ್ಲಿ ಉರುಗ್ವೆ ತಂಡದ ಫೆಡೆರಿಕೊ ವಾಲ್ವರ್ಡೆ ಪಂದ್ಯದಲ್ಲಿ ಗೋಲು ಹೊಡೆಯುವ ಮೊದಲ ಪ್ರಯತ್ನ ಮಾಡಿದರು. ಆದರೆ ಈ ಸಂದರ್ಭದಲ್ಲಿ ಗುರಿ ತಪ್ಪಿದ ಕಾರಣ ಅವಕಾಶ ವಂಚಿತವಾದರು. ಈ ಮೂಲಕ ಮೊದಲಾರ್ಧ ಯಾವುದೇ ಗೋಲು ದಾಖಲಾಗದೆ ಅಂತ್ಯವಾಯಿತು.

ಇನ್ನು ದ್ವಿತಿಯಾರ್ಧದಲ್ಲಿ ಕೂಡ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಅಂತಿಮ ಹಂತದಲ್ಲಿ ಕೆಲ ರೋಚಕ ಕ್ಷಣಗಳು ಅಭಿಮಾನಿಗಳಿಗೆ ದೊರೆಯಿತು. 81ನೇ ನಿಮಿಷದಲ್ಲಿ ಉರುಗ್ವೆ ತಂಡದ ನುನೆಜ್ ಬಾರಿಸಿದ ಚೆಂಡನ್ನು ಎಡಿನ್ಸನ್ ಕವಾನಿಗೆ ಹೆಡರ್ ಮಾಡುವ ಅವಕಾಶವಾಗಿ ಮಾರ್ಪಟ್ಟಿತು. ಈ ಇದಕ್ಕೆ ದ. ಕೊರಿಯಾ ತಡೆಯೊಡ್ಡಿತು. ನಂತರ 89ನೇ ನಿಮಿಷದಲ್ಲಿ ಉರುಗ್ವೆ ಬಹುತೇಕ ಗೆಲುವಿನ ಸನಿಹಕ್ಕೆ ಹೋಗಿತ್ತು. ಆದರೆ ಇದನ್ನು ಕೂಡ ಗೋಲಾಗಿ ಪರಿವರ್ತಿಸಲು ಉರುಗ್ವೆ ವಿಫಲವಾಯಿತು.

ಉರುಗ್ವೆ ಆಡುವ ಬಳಗ: ರೋಚೆಟ್, ಕ್ಯಾಸೆರೆಸ್, ಗಾಡಿನ್, ಗಿಮೆನೆಜ್, ಒಲಿವಿಯೆರಾ, ವಾಲ್ವರ್ಡೆ, ವೆಸಿನೊ, ಬೆಂಟನ್ಕುರ್, ಪೆಲ್ಲಿಸ್ಟ್ರಿ, ನುನೆಜ್, ಸೌರೆಜ್

ದಕ್ಷಿಣ ಕೊರಿಯಾ ಆಡುವ ಬಳಗ: ಸೆಯುಂಗ್ ಗ್ಯು ಕಿಮ್, ಜಿನ್-ಸು ಕಿಮ್, ಯಂಗ್-ಗ್ವಾನ್ ಕಿಮ್, ಮಿನ್-ಜೇ, ಟೇ-ಹ್ವಾನ್ ಕಿಮ್, ಚಾಂಗ್-ಹೂನ್ ಕ್ವಾನ್, ವೂ-ಯೋಂಗ್ ಜಿಯೋಂಗ್, ಇನ್-ಬೀಮ್ ಹ್ವಾಂಗ್, ಹೆಯುಂಗ್ ಮಿನ್-ಸನ್, ಉಯಿ-ಜೋ, ಹೀ-ಚಾನ್

Story first published: Thursday, November 24, 2022, 22:43 [IST]
Other articles published on Nov 24, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+