ಇಂಡಿಯಾ ಆಲ್-ಸ್ಟಾರ್ಸ್ vs ಬ್ರೆಜಿಲ್ ಲೆಜೆಂಡ್ಸ್ ನಡುವೆ ಚೆನ್ನೈನಲ್ಲಿ ಪ್ರದರ್ಶನಾ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸ್ಟಾರ್ ಆಟಗಾರರು ಮೈದಾನದಲ್ಲಿ ಅಬ್ಬರದ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆದ್ದರು. ಭಾನುವಾರ ನಡೆದ ಪಂದ್ಯದಲ್ಲಿ ಪ್ರವಾಸಿ ಬ್ರೆಜಿಲ್ 2-1 ರಿಂದ ಆತಿಥೇಯ ಇಂಡಿಯಾನ ಆಲ್ ಸ್ಟಾರ್ಸ್ ತಂಡವನ್ನು ಮಣಿಸಿತು. ವಿಜೇತ ತಂಡದಲ್ಲಿ 1994 ಹಾಗೈ 2002ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಭಾಗವಹಿಸಿದ್ದರು.
ವರ್ಷದ ಬಹು ತಿಂಗಳು ಗಾಡ ನೀಲಿ ಬಣ್ಣದ ಜೆರ್ಸಿಗಳಿಂದ ತುಂಬಿ ತುಳಕುತ್ತಿದ್ದ ಅಭಿಮಾನಿಗಳ ಗ್ಯಾಲರಿಯಲ್ಲಿ ಭಾನುವಾರ ಹಳದಿ ಜೆರ್ಸಿ ಸಹ ಹೆಚ್ಚಾಗಿ ಕಾಣಿಸಿಕೊಂಡಿತು. ಪಂದ್ಯಕ್ಕೂ ಮುನ್ನ ಭಾರತ ಹಾಗೂ ಬ್ರೇಜಿಲ್ ತಂಡದ ಸ್ಟಾರ್ ಆಟಗಾರರು ಅಭಿಮಾನಿಗಳತ್ತ ಕೈ ಬಿಸಿ ರಂಜಿಸಿದರು. ಈ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ಸುಮಾರು 23 ಸಾವಿರ ಅಭಿಮಾನಿಗಳು ನೆರೆದಿದ್ದರು. ಉಭಯ ತಂಡದ ಆಟಗಾರರು ಆರಂಭದಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿದರು. ಮೊದಲಾವಧಿಯ ಐದನೇ ನಿಮಿಷದಲ್ಲಿ ರಿವಾಲ್ಡೊ ಗೋಲು ಪೆಟ್ಟಿಗೆಯ ಪಕ್ಕದಲ್ಲಿ ಚೆಂಡನ್ನು ಬಾರಿಸಿದರು. ಇದನ್ನು ತಡೆಯುವಲ್ಲಿ ಭಾರತೀಯ ಗೋಲ್ ಕೀಪರ್ ಸಫಲರಾದರು.

ಉಭಯ ತಂಡಗಳ ನಡುವಿನ ಪಂದ್ಯ ಅಭಿಮಾನಿಗಳನ್ನು ರಂಜಿಸಿತು. ಈ ವೇಳೆ ಬ್ರೆಜಿಲ್ ತಂಡದ ಪರ ವಿಯೋಲಾ ಆರಂಭಿಕ ಮುನ್ನಡೆಯನ್ನು ತಂದು ಕೊಟ್ಟರು. ಈ ವೇಳೆ ವಿಯೋಲಾ ಅಮೋಘವಾಗಿ ಚೆಂಡನ್ನು ಗೋಲು ಪೆಟ್ಟಿಗೆಯ ಒಳಗಡೆ ತಳ್ಳಿದರು. ಈ ಮೂಲಕ ಬ್ರೇಜಿಲ್ 1-0 ಮುನ್ನಡೆ ಸಾಧಿಸಿತು. ಬ್ರೆಜಿಲ್ 23 ನೇ ನಿಮಿಷದಲ್ಲಿ ಗೋಲಿನ ಖಾತೆಯನ್ನು ಆರಂಭಿಸಿತು.
ಆದರೆ ಇದೇ ಅವಧಿಯಲ್ಲಿ ಭಾರತದ ಪರ ಸ್ಟಾರ್ ಆಟಗಾರ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ದಾಖಲಿಸಿದರು. ಭಾರತದ ಪರ ಬಿಬಿಯಾನೊ ಫೆರ್ನಾಂಡಿಸ್ ಗೋಲು ಸಿಡಿಸಿ ಅಬ್ಬರಿಸಿತು. ಈ ಮೂಲಕ ಭಾರತ ಸಮಬಲದ ಹೋರಾಟ ನೀಡುವ ಸೂಚನೆಯನ್ನು ನೀಡಿತು. ಭಾರತದ ಪರ ಬಿಬಿಯಾನೊ ಫೆರ್ನಾಂಡಿಸ್ 43ನೇ ನಿಮಿಷದಲ್ಲಿ ಗೋಲು ಬಾರಿಸಿ ಅಭಿಮಾಣಿಗಳ ಮುಖದಲ್ಲಿ ಮಂದಹಾಸ ಮೂಡಿಸಿದರು.

ಬದಲಿ ಆಟಗಾರನಾಗಿ ಅಂಗಳ ಪ್ರವೇಶಿಸಿದ ರಿಕಾರ್ಡೊ ಒಲಿವೇರಾ ಪಂದ್ಯದ ಕೊನೆಯಕ್ಷಣದಲ್ಲಿ ಗೋಲು ಬಾರಿಸಿ ಪ್ರವಾಸಿ ತಂಡದ ಪಾಳಯದಲ್ಲಿ ಮಂದಹಾಸ ಮೂಡಿಸಿದರು. ಇವರು ಬಾರಿಸಿದ ಗೋಲುಗಳ ಸಹಾಯದಿಂದ ಬ್ರೆಜಿಲ್ ಲೆಜೆಂಡ್ಸ್‌ಗೆ ಗೆಲುವು ತಂದುಕೊಡುವಲ್ಲಿ ಮಿಂಚಿದರು. ಈ ವೇಳೆ ಉಭಯ ತಂಡಗಳು ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು.