Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಆಸ್ಪತ್ರೆಗೆ ದಾಖಲು

Football great Diego Maradona admitted to hospital in Argentina

ಬ್ಯೂನಸ್ ಏರ್ಸ್: ವೈದ್ಯಕೀಯ ತಪಾಸಣೆಗೋಸ್ಕರ ಅರ್ಜೆಂಟೀನಾದ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಅರ್ಜೆಂಟೀನಾ ಆಸ್ಪತ್ರೆಗೆ ಸೋಮವಾರ (ನವೆಂಬರ್ 2) ದಾಖಲಾಗಿದ್ದಾರೆ ಎಂದು ಅವರ ವೈಯಕ್ತಿಕ ವೈದ್ಯ ಮಾಹಿತಿ ನೀಡಿದ್ದಾರೆ.

'ಇದು ಅಂಥ ಗಂಭೀರ ಸಮಸ್ಯೆಯೇನಾಲ್ಲ. ನಾವಿಲ್ಲಿಗೆ ಬಂದಿದ್ದು ತುರ್ತು ಪರಿಸ್ಥಿತಿಗಾಗಿಯೂ ಅಲ್ಲ,' ಎಂದು ಬ್ಯೂನಸ್ ಏರ್ಸ್‌ನ ಲಾ ಪ್ಲಾಟಾದಲ್ಲಿನ ಕ್ಲಿನಿಕ್ ನಲ್ಲಿದ್ದ ವೈದ್ಯ ಲಿಯೋಪೋಲ್ಡೊ ಲುಕ್ ವರದಿಗಾರರಿಗೆ ತಿಳಿಸಿದ್ದಾರೆ.

ಆದರೂ ಲಿಯೋಪೋಲ್ಡೊ ಅವರು ಮರಡೋನಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿಯೇನೂ ನೀಡಿಲ್ಲ. ತನ್ನ ರೋಗಿ ಬೇರೆ ಬೇರೆ ರೀತಿಯ ಸರಣಿ ತಪಾಸಣೆಗಳಿಗೆ ಒಳಗಾಗಬೇಕಿದೆ ಎಂದಷ್ಟೇ ಲಿಯೋಪೋಲ್ಡೊ ಹೇಳಿದ್ದಾರೆ.

'ತನ್ನ ಬದುಕಿನಲ್ಲಿ ಅನೇಕ ಒತ್ತಡಗಳನ್ನು ಅನುಭವಿಸುತ್ತಿರುವ ಹಿರಿಯ ರೋಗಿ ಆತ. ಇಂಥ ಸಂದರ್ಭದಲ್ಲಿ ನಾವು ಅವರಿಗೆ ನೆರವು ನೀಡಬೇಕಿದೆ. ಮರಡೋನಾಗೆ ಇದು ಬಹಳ ಕಷ್ಟದ ಸಮಯ,' ಎಂದು ಲುಕ್ ನುಡಿದಿದ್ದಾರೆ. ಅಂದ್ಹಾಗೆ ಮೊನ್ನೆ ಅಕ್ಟೋಬರ್ 30ಕ್ಕೆ ಮರಡೋನಾ 60ನೇ ವರ್ಷಕ್ಕೆ ಕಾಲಿಸಿರಿದ್ದರು.

Story first published: Wednesday, November 4, 2020, 10:30 [IST]
Other articles published on Nov 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+