Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾಗೆ ಯಶಸ್ವಿ ಶಸ್ತ್ರಚಿಕಿತ್ಸೆ

Football legend Diego Maradonas brain surgery successful, in recover

ಬ್ಯೂನಸ್ ಏರ್ಸ್: ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾಗೆ ಮೆದುಳಿನ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆದಿದೆ. ಇತ್ತೀಚೆಗೆ ಮರಡೋನಾ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಮರಡೋನಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

'ನಾನು ಹೆಮಟೋಮಾವನ್ನು ಯಶಶ್ವಿಯಾಗಿ ತೆಗೆದಿದ್ದೇನೆ. ಶಸ್ತ್ರ ಚಿಕಿತ್ಸೆಯ ವೇಳೆ ಡಿಯಾಗೋ ತುಂಬಾ ಚೆನ್ನಾಗಿ ಸಹಿಸಿಕೊಂಡರು,' ಎಂದು ಮರಡೋನಾ ಅವರ ನರಶಸ್ತ್ರಚಿಕಿತ್ಸಕ ಲಿಯೋಪೋಲ್ಡೊ ಲುಕ್ ಬ್ಯೂನಸ್ ಏರ್ಸ್‌ನ ಕ್ಲಿನಿಕ್ ಬಳಿಯಿದ್ದ ವರದಿಗಾರರಿಗೆ ಮಾಹಿತಿ ನೀಡಿದ್ದಾರೆ.

'ಡಿಯಾಗೋ ಈಗ ನಿಯಂತ್ರಣದಲ್ಲಿದ್ದಾರೆ. ಅವರ ತಲೆಯಲ್ಲಿ ಸಣ್ಣ ಗಾಯವಿದೆ. ಅದಕ್ಕೆ ನಾಳೆ ಚಿಕಿತ್ಸೆ ನೀಡಲಿದ್ದೇವೆ. ಹೀಗಾಗಿ ಡಿಯಾಗೋ ಅವರು ಆಸ್ಪತ್ರೆಯಲ್ಲೇ ಇರಲಿದ್ದಾರೆ. ಅವರು ಎಷ್ಟು ಕಾಲ ಇಲ್ಲಿರಲಿದ್ದಾರೆ ಅನ್ನೋದು ಅವರ ಚೇತರಿಕೆಯನ್ನು ಅವಲಂಬಿಸಿದೆ,' ಎಂದು ಲಿಯೋಪೋಲ್ಡೊ ಹೇಳಿದ್ದಾರೆ.

ರಕ್ತಹೀನತೆ, ನಿರ್ಜಲೀಕರಣ ಮತ್ತು ಖಿನ್ನತೆಯ ಕಾರಣದಿಂದಾಗಿ ಮರಡೋನಾ ಅವರು ಲಾ ಪ್ಲಾಟಾದಲ್ಲಿರುವ ಐಪೆನ್ಸಾ ಕ್ಲಿನಿಗೆ ದಾಖಲಾಗಿದ್ದರು. ಮಂಗಳವಾರ ನಡೆದ ಎಂಆರ್‌ಐನಲ್ಲಿ ಅವರ ಮೆದುಳಿನಲ್ಲಿ ಹೆಮಟೋಮಾ ಇದ್ದಿದ್ದು ಕಂಡು ಬಂದಿತ್ತು.

Story first published: Thursday, November 5, 2020, 9:41 [IST]
Other articles published on Nov 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+