Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಿಯೋನೆಲ್ ಮೆಸ್ಸಿಗೆ ಕೊರೊನಾವೈರಸ್ ದೃಢ: ಮಾಹಿತಿ ನೀಡಿದ ಪ್ಯಾರಿಸ್ ಸೇಂಟ್ ಜರ್ಮೈನ್

Football legend Lionel Messi Tests Positive For Coronavirus with 3 other players

ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಕೊರೊನಾವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿದೆ. ಹೀಗಾಗಿ ಅವರು ಸ್ವಯಂ ಐಸೊಲೇಶನ್‌ಗೆ ಒಳಗಾಗಿದ್ದಾರೆ ಎಂದು ಪ್ಯಾರಿಸ್ ಸೇಂಟ್ ಜರ್ಮೈನ್(ಪಿಎಸ್‌ಜಿ) ಅಧಿಕೃತವಾಗಿ ಮಾಹಿತಿ ನೀಡಿದೆ. ಫ್ರೆಂಚ್ ಕಪ್‌ನಲ್ಲಿ ವ್ಯಾನ್ನೆಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಲಿಯೋನೆಲ್ ಮೆಸ್ಸ ವರದಿ ಪಾಸಿಟಿವ್ ಬಂದಿದೆ. ಲಿಯೋನೆಲ್ ಮಸ್ಸಿ ಜೊತೆಗೆ ಇತರ ಮೂವರು ಪಿಎಸ್‌ಗಿ ತಂಡದ ಸದಸ್ಯರಿಗೂ ಕೋವಿಡ್ ದೃಢಪಟ್ಟಿದೆ.

ಕ್ಲಬ್ ಆರಂಭದಲ್ಲಿ ನಾಲ್ವರು ಆಟಗಾರರು ಕೋವಿಡ್‌ಗೆ ತುತ್ತಾಗಿದ್ದಾರೆ ಎಂಬುದಾಗಿ ಮಾತ್ರವೇ ಮಾಹಿತಿ ನೀಡಿತ್ತು. ಆಟಗಾರರ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ನಂತರ ಮೆಡಿಕಲ್ ತಂಡ ಈ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಆಟಗಾರರ ಹೆಸರನ್ನು ಬಹಿರಂಗಪಡಿಸಿದೆ. ಲಿಯೋನೆಲ್ ಮೆಸ್ಸಿ ಜೊತೆಗೆ ಹುವಾ ಬರ್ನೆಟ್, ಬ್ಯಾಕಪ್ ಗೋಲ್ಕೀಪರ್ ಸೆರ್ಗಿಯೋ ರಿಕೊ ಮತ್ತು 19 ವರ್ಷದ ಮಿಡ್‌ಫೀಲ್ಡರ್ ನಾಥನ್ ಬಿಟುಮ್ಜಾಲಾ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ

ಇನ್ನು ಕೊರೊನಾವೈರಸ್‌ಗೆ ತುತ್ತಾಗಿರುವ ಎಲ್ಲಾ ಆಟಗಾರರು ಕೂಡ ಈಗ ಐಸೋಲೇಶನ್‌ಗೆ ಒಳಗಾಗಿದ್ದು ವೈದ್ಯಕೀಯ ಪ್ರೊಟೊಕಾಲ್‌ಗಳನ್ನು ಪಾಲಿಸಬೇಕಿದೆ ಎಂಬುದಾಗಿ ಕೂಡ ಕ್ಲಬ್ ಮಾಹಿತಿಯನ್ನು ನೀಡಿದೆ. ಹೀಗಾಗಿ ಸೋಮವಾರ ನಡೆಯಲಿರುವ ಪಂದ್ಯದಿಂದ ಹೊರಗುಳಿಯುವುದು ಖಚಿತವಾಗಿದೆ.

ಕಳೆದ ಬೇಸಿಗೆ ಋತುವಿನ ಆರಂಭಕ್ಕೂ ಮುನ್ನ ಲಿಯೋನೆಲ್ ಮೆಸ್ಸಿ ವೃತ್ತಿ ಜೀವನದ ಆರಂಭದಿಂದ ಇದ್ದ ಬಾರ್ಸಿಲೋನಾ ತಂಡವನ್ನು ತೊರೆದು ಪ್ಯಾರಿಸ್ ಸೇಂಟ್ ಜರ್ಮನ್ ತಂಡವನ್ನು ಸೇರಿಕೊಂಡಿದ್ದರು. ಅದರೆ ಪಿಎಸ್‌ಜಿ ತಂಡದ ಪರವಾಗಿ ಮೆಸ್ಸಿ ಪ್ರದರ್ಶನ ನಿರಾಸೆ ಮೂಡಿಸಿದೆ. 11 ಲೀಗ್‌ ಪಂದ್ಯಗಳಲ್ಲಿ ಮೆಸ್ಸಿ ಗಳಿಸಿದ್ದ ಕೇವಲ ಒಂದು ಗೋಲು ಮಾತ್ರ.

Story first published: Monday, January 3, 2022, 8:53 [IST]
Other articles published on Jan 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+