ಫುಟ್ಬಾಲ್‌ನಲ್ಲಿ ಐದು ಬದಲಿ ಆಟಗಾರರು ಮೈದಾನಕ್ಕಿಳಿಯಲು ಅನುಮತಿ

ನವದೆಹಲಿ, ಮೇ 8: ಕೊರೊನಾವೈರಸ್‌ನಿಂದ ನಿಲ್ಲಿಸಲ್ಪಟ್ಟಿರುವ ಫುಟ್ಬಾಲ್ ಪಂದ್ಯಾಟಗಳು ಪುನರಾರಂಭಗೊಳ್ಳುವಾಗ ಹೊಸ ನಿಯಮ ಅನ್ವಯವಾಗಲಿದೆ. ಪಂದ್ಯದ ವೇಳೆ ಐದು ಬದಲಿ ಆಟಗಾರರನ್ನು ಮೈದಾನಕ್ಕಿಳಿಸಲು ಅನುಮತಿ ನೀಡಲಿದ್ದೇವೆ ಎಂದು ಕ್ರೀಡಾ ಕಾನೂನು ನಿರ್ಮಾಣ ಸಮಿತಿ ಶುಕ್ರವಾರ (ಮೇ 8) ಹೇಳಿದೆ.
ನಿಯಮವನ್ನು ಬದಲಾಯಿಸುವ ಸಲುವಾಗಿ ಫೆಡರೇಶನ್ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಶನ್ (ಫೀಫಾ) ನೀಡಿದ್ದ ಪ್ರಸ್ತಾವನೆಗೆ ಫುಟ್ಬಾಲ್‌ನ ನಿಯಮಗಳನ್ನು ನಿರ್ಧರಿಸಲಿರುವ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಶನ್ ಬೋರ್ಡ್ (ಐಎಫ್‌ಎಬಿ) ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
'ಈ ತಿದ್ದುಪಡಿ ತಕ್ಷಣದಿಂದ ಜಾರಿಗೆ ಬರುತ್ತದೆ ಮತ್ತು ಇದು ವರ್ಷದ ಅಂತ್ಯದವರೆಗೆ ಅನ್ವಯಿಸುತ್ತದೆ. ಬದಲಾವಣೆಯನ್ನು ಮತ್ತೂ ವಿಸ್ತರಿಸಲಾಗುತ್ತದೆಯೇ ಎಂದು ನಂತರದ ದಿನಗಳಲ್ಲಿ ನಿರ್ಧರಿಸುತ್ತೇವೆ' ಎಂದು ಐಎಫ್‌ಎಬಿ ಮತ್ತು ಫೀಫಾ ಹೇಳಿದೆ.
ಹೊಸದಾಗಿ ಜಾರಿಯಾಗಿರುವ ಈ ನಿಯಮ ಎಲ್ಲಾ ಪ್ರಮುಖ ಫುಟ್ಬಾಲ್ ಪಂದ್ಯಗಳಿಗೆ ಈ ವರ್ಷದ ಅಂತ್ಯದವರೆಗೆ ಅನ್ವಯವಾಗಲಿದೆ. ಈ ನಿಯಮವನ್ನು ಜಾರಿಗೊಳಿಸುವ ಬಗ್ಗೆ ವೈಯಕ್ತಿಯ ಸ್ಪರ್ಧೆಗಳ ಆಯೋಜಕರಿಗೆ ನಿರ್ಧರಿಸಲು ಅವಕಾಶವಿರುತ್ತದೆ ಎಂದು ಐಎಫ್‌ಎಬಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications