Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗೋಲ್ ಬಾರಿಸಿ ಗೆಳತಿಗೆ 'ಪ್ರಪೋಸ್' ಮಾಡಿದ ಬೆಲ್ಲೊಗೆ ಯೆಲ್ಲೋ ಕಾರ್ಡ್!

Footballer celebrates goal by proposing to girlfriend, gets booked

ನವದೆಹಲಿ, ಅಕ್ಟೋಬರ್ 30: ತನ್ನ ಗೆಳತಿಗೆ ಹೆಂಗೆಂಗೋ ಪ್ರಪೋಸ್ ಮಾಡೋರಿದ್ದಾರೆ. ಅಂಥವರ ಸಾಲಿಗೆ ಆಂಟೊಫಾಗಸ್ಟಾ ತಂಡದ ಎಡ್ವರ್ಡ್ ಬೆಲ್ಲೊ ಕೂಡ ಸೇರುತ್ತಾರೆ. ಬೆಲ್ಲೊ ಗೋಲ್ ಬಾರಿಸಿ ಬಂದು ಗೆಳತಿಗೆ ಪ್ರಪೋಸ್ ಮಾಡಿದ್ದಾರೆ. ಅನಂತರ ರೆಫರಿಯ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಇಂಥದ್ದೊಂದು ಸ್ವಾರಸ್ಯಕರ ಘಟನೆ ನಡೆದಿದೆ.

ಸಂಗತಿ ನಡೆದಿದ್ದು ಭಾನುವಾರ (ಅಕ್ಟೋಬರ್ 28). ಆದರೆ ಈ ಸುದ್ದಿ ಈಗಲೂ ಸಾಮಾಜಿಕ ಜಾಲತಾಣದಲ್ಲಿ ಗಮ್ಮತ್ತಾಗಿ ಓಡಾಡುತ್ತಿದೆ. ಚಿಲಿಯಲ್ಲಿ ನಡೆಯುತ್ತಿರುವ 2018ರ ಚಿಲಿಯನ್ ಪ್ರಿಮೆರಾ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ ಭಾನುವಾರ ಆಂಟೊಫಾಗಸ್ಟಾ ಎಫ್‌ಸಿ ಮತ್ತು ಎವೆರ್ಟನ್ ತಂಡಗಳು ಮುಖಾಮುಖಿಯಾಗಿದ್ದವು.

ಈ ವೇಳೆ ಪಂದ್ಯಾರಂಭಗೊಂಡು 2ನೇ ನಿಮಿಷದಲ್ಲೇ ಗೋಲ್ ಬಾರಿಸಿದ ಆಂಟೊಫಾಗಸ್ಟಾ ಮಿಡ್ ಫೀಲ್ಡರ್ ಎಡ್ವರ್ಡ್ ಬೆಲ್ಲೊ ಮೈದಾನದಿಂದ ಪ್ರೇಕ್ಷಕರು ಕೂತಿದ್ದೆಡೆಗೆ ಹತ್ತಿ ಬಂದವರೇ ಅಲ್ಲಿ ಕುಳಿತಿದ್ದ ತನ್ನ ಗೆಳತಿ, ಬೀಚ್ ವಾಲಿಬಾಲ್ ಪ್ಲೇಯರ್ ಗಾಬ್ರಿಯೆಲಾ ಬ್ರಿಟೊ ಮುಂದೆ ಮೊಣಕಾಲೂರಿ, ತಬ್ಬಿ ಪ್ರಪೋಸ್ ಮಾಡಿ ರಿಂಗೂ ತೊಡಿಸಿಬಿಟ್ಟರು!

ಆಟಗಾರನ ಈ ಅಚಾನಕ್ ವರ್ತನೆಗೆ ಒಮ್ಮೆ ದಂಗಾದರೂ ಹೇಗೋ ಸಾವರಿಸಿಕೊಂಡ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೇಮಿಗಳನ್ನು ಬೆಂಬಲಿಸಿದ್ದರೆನ್ನಿ; ಆದರೆ ರೆಫ್ರಿ ಕೇಳಬೇಕೆ?! ಹೇಳದೆ ಕೇಳದೆ ಮೈದಾನದ ಹೊರಗೆ ಬಂದ ಬೆಲ್ಲೊಗೆ ಯೆಲ್ಲೋ ಕಾರ್ಡ್ ತೋರಿಸಿಬಿಟ್ಟರು. ಅಂದ್ಹಾಗೆ ಈ ಪಂದ್ಯದಲ್ಲಿ ಆಂಟೊಫಾಗಸ್ಟಾ ತಂಡ ಎವರ್ಟನ್ ವಿರುದ್ಧ 3-2ರಿಂದ ಸೋತಿತು!

Story first published: Tuesday, October 30, 2018, 23:39 [IST]
Other articles published on Oct 30, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+