ಅರ್ಜೆಂಟೀನಾ ಮಾಜಿ ಕೋಚ್ ಕಾರ್ಲೋಸ್ ಬಿಲಾರ್ಡೊಗೆ ಕೊರೊನಾವೈರಸ್

ಸಾವೊ ಪೌಲೊ, ಜೂನ್ 27: 1986ರ ಫುಟ್ಬಾಲ್ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡದ ಗೆಲುವಿಗೆ ಕಾರಣರಾಗಿದ್ದ ತಂಡದ ಮಾಜಿ ಕೋಚ್ ಕಾರ್ಲೋಸ್ ಬಿಲಾರ್ಡೊಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಬಿಲಾರ್ಡೊ ಕುಟುಂಬಕ್ಕೆ ಹತ್ತಿರದ ಮೂಲವೊಂದು ರಾಯಿಟರ್ಸ್‌ಗೆ ಈ ವಿಚಾರ ತಿಳಿಸಿದೆ.
'ಅವರು (ಕಾರ್ಲೋಸ್ ಬಿಲಾರ್ಡೊ) ಕೊರೊನಾವೈರಸ್ ಪರೀಕ್ಷೆಗೆ ಒಳಗಾಗಿದ್ದರು. ಇದರ ಫಲಿತಾಂಶ ಪಾಸಿಟಿವ್ ಬಂದಿದೆ. ಆದರೂ ಬಿಲಾರ್ಡೊ ರೋಗದ ಯಾವುದೇ ಗುಣಲಕ್ಷಣ ತೋರಿಸಿಲ್ಲ. ಅವರು ಚೆನ್ನಾಗೇ ಇದ್ದಾರೆ,' ಎಂದು ಮೂಲ ಮಾಹಿತಿ ನೀಡಿದೆ.
ಕಾರ್ಲೋಸ್ ಬಿಲಾರ್ಡೊ ಅವರ ಮಾಜಿ ತಂಡ ಎಸ್ಟೂಡಿಯಂಟ್ಸ್, ಬಿಲಾರ್ಡೋಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದೆ. ಈಗ 82ರ ಹರೆಯದವರಾಗಿರುವ ಮಾಜಿ ಫುಟ್ಬಾಲ್ ಆಟಗಾರ, ಮ್ಯಾನೇಜರ್ ಬಿಲಾರ್ಡೋ 2018ರಿಂದಲೂ ಬ್ಯೂನಸ್ ಏರ್ಸ್‌ನಲ್ಲಿರುವ ನರ್ಸಿಂಗ್ ಹೋಮ್‌ನಲ್ಲಿದ್ದಾರೆ.
1986ರಲ್ಲಿ ಮೆಕ್ಸಿಕೋದಲ್ಲಿ ನಡೆದಿದ್ದ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಡಿಯಾಗೋ ಮರಡೋನಾ ನಾಯಕತ್ವದ ಅರ್ಜೆಂಟೀನಾ ತಂಡಕ್ಕೆ ಕಾರ್ಲೋಸ್ ಬಿಲಾರ್ಡೊ ತರಬೇತಿ ನೀಡಿದ್ದರು. ತಾನು ಆಡುತ್ತಿದ್ದ ಎಸ್ಟೂಡಿಯಂಟ್ಸ್ ತಂಡ ಬಿಡುವುದಕ್ಕೂ ಮುನ್ನ ಅಂತಿಮ ನಾಲ್ಕು ವರ್ಷಗಳಲ್ಲಿ ಅಂದರೆ 1968ರಿಂದ 1970ರ ಮಧ್ಯೆ ಬಿಲಾರ್ಡೊ ಅವರು ಮೂರು ಬಾರಿ ಕೋಪಾ ಲಿಬರ್ಟಡೋರ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications