ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಲ್ಲಾ, ಕಾರ್ಡಿಫ್ ಮಿಡ್‌ಫೀಲ್ಡರ್ ಪೀಟರ್ ವೈಟಿಂಗ್ಹ್ಯಾಮ್ ದುರ್ಮರಣ

Former Aston Villa and Cardiff midfielder Peter Whittingham dies aged 35

ಕಾರ್ಡಿಫ್, ಮಾರ್ಚ್ 19: ಆ್ಯಸ್ಟನ್ ವಿಲ್ಲಾ ಮತ್ತು ಕಾರ್ಡಿಫ್ ಎಫ್‌ಸಿಯ ಮಾಜಿ ಮಿಡ್‌ಫೀಲ್ಡರ್ ಪೀಟರ್ ವೈಟಿಂಗ್ಹ್ಯಾಮ್ ಗುರುವಾರ (ಮಾರ್ಚ್ 19) ಅಕಾಲಿಕ ಸಾವನ್ನಪ್ಪಿದ್ದಾರೆ. ಪೀಟರ್ ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 35 ವರ್ಷ ವಯಸ್ಸಾಗಿತ್ತು.

ವಿದೇಶಿಯರಿಲ್ಲದೆ ಐಪಿಎಲ್? : ಹೇಗಿದೆ ಗೊತ್ತಾ ಎಲ್ಲಾ ತಂಡಗಳ ಪ್ಲೇಯಿಂಗ್ XIವಿದೇಶಿಯರಿಲ್ಲದೆ ಐಪಿಎಲ್? : ಹೇಗಿದೆ ಗೊತ್ತಾ ಎಲ್ಲಾ ತಂಡಗಳ ಪ್ಲೇಯಿಂಗ್ XI

ಮಾರ್ಚ್ 7 ರಂದು ಕಡಲತೀರದ ಪಟ್ಟಣವಾದ ಬ್ಯಾರಿಯ ಪಬ್‌ನಲ್ಲಿ ತಲೆಗೆ ಪೆಟ್ಟಾಗಿದ್ದರಿಂದ ವೈಟಿಂಗ್ಹ್ಯಾಮ್ ಆಸ್ಪತ್ರೆಯಲ್ಲಿದ್ದರು. ಆರು ರಾಷ್ಟ್ರಗಳ ಫುಟ್ಬಾಲ್ ಟೂರ್ನಿಯಲ್ಲಿ ಇಂಗ್ಲೆಂಡ್-ವೇಲ್ಸ್ ಆಟ ನೋಡಿದ ಬಳಿಕ ವೈಟಿಂಗ್ಹ್ಯಾಮ್ ಮೆಟ್ಟಿಲಿನಿಂದ ಆಯತಪ್ಪಿ ಬಿದ್ದು ಗಾಯಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಅತಿಯಾಳ ಕಾಲೆಳೆದ ಕೆಎಲ್ ರಾಹುಲ್, ಡೇಟಿಂಗ್ ಗುಸುಗುಸುಗೆ ರೆಕ್ಕೆಪುಕ್ಕ!ಅತಿಯಾಳ ಕಾಲೆಳೆದ ಕೆಎಲ್ ರಾಹುಲ್, ಡೇಟಿಂಗ್ ಗುಸುಗುಸುಗೆ ರೆಕ್ಕೆಪುಕ್ಕ!

ಕಾರ್ಡಿಫ್ ವೆಬ್‌ಸೈಟ್‌ನಲ್ಲಿ, 'ಪೀಟರ್ ವೈಟಿಂಗ್ಹ್ಯಾಮ್ ತನ್ನ 35ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅಭಿಮಾನಿಗಳಿಗೆ ತಿಳಿಸಲು ನಮಗೆ ಅಪಾರ ದುಃಖವಾಗುತ್ತಿದೆ. ನಮ್ಮ ಹೃದಯವೇ ಒಡೆದು ಹೋದಂತೆ ಭಾಸವಾಗುತ್ತಿದೆ,' ಎಂದು ಬರೆದುಕೊಳ್ಳಲಾಗಿದೆ.

ಕೊರೊನಾ: ಫಿಟ್ ಆಗಿರೋಕೆ ಆ್ಯಂಡರ್ಸನ್ ಮಾಡಿದ್ದೇನು ನೋಡಿ-ವೀಡಿಯೋಕೊರೊನಾ: ಫಿಟ್ ಆಗಿರೋಕೆ ಆ್ಯಂಡರ್ಸನ್ ಮಾಡಿದ್ದೇನು ನೋಡಿ-ವೀಡಿಯೋ

ಅಂಡರ್ 21 ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಮಾಜಿ ಆಟಗಾರರಾಗಿರುವ ವೈಟಿಂಗ್ಹ್ಯಾಮ್, ವಿಲ್ಲಾ ಪರ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು ಮತ್ತು 2002ರಲ್ಲಿ ಎಫ್‌ಎ ಯೂತ್ ಕಪ್‌ ಕೂಡ ಗೆದ್ದಿದ್ದರು. ವಿಲ್ಲಾ ಪರ ವೈಟಿಂಗ್ಹ್ಯಾಮ್ 66 ಪಂದ್ಯಗಳನ್ನಾಡಿದ್ದರು. ಅದಾಗಿ ಪೀಟರ್ ಕಾರ್ಡಿಫ್‌ಗೆ ಸೇರಿದ್ದು 2007ರಲ್ಲಿ.

Story first published: Thursday, March 19, 2020, 23:03 [IST]
Other articles published on Mar 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X