For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

30ರ ಹರೆಯದಲ್ಲಿ ಆಟ ನಿಲ್ಲಿಸಿದ ಅಟ್ಲೆಟಿಕೊ ಅಟಗಾರ ಇಗ್ನಾಸಿಯೊ ಕ್ಯಾಮಾಚೊ

Former Atletico player Camacho retires at 30 after injury

ಮ್ಯಾಡ್ರಿಡ್: ಅಟ್ಲೆಟಿಕೊ ಮ್ಯಾಡ್ರಿಡ್ ಮಿಡ್ ಫೀಲ್ಡರ್ ಇಗ್ನಾಸಿಯೊ ಕ್ಯಾಮಾಚೊ ವೃತ್ತಿಪರ ಫುಟ್ಬಾಲ್ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. ದೀರ್ಘಕಾಲದ ಗಾಯದಿಂದ ಗುಣಮುಖರಾಗದಿರುವುದರಿಂದ 30ರ ಹರೆಯದ ಕ್ಯಾಮಾಚೊ ಫುಟ್ಬಾಲ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.

2017ರಲ್ಲಿ ಜರ್ಮನ್‌ ಕಪ್‌ ಟೂರ್ನಿಯಲ್ಲಿ ವುಲ್ಫ್ಸ್‌ಬರ್ಗ್ ಪರ ಆಡುತ್ತಿದ್ದ ಇಗ್ನಾಸಿಯೊ ಕ್ಯಾಮಾಚೊ ಕಾಲಿನ ಮಣಿಕಟ್ಟಿಗೆ ಗಾಯ ಮಾಡಿಕೊಂಡಿದ್ದರು. ಅದಾಗಿ ಇಗ್ನಾಸಿಯೊ ಸುಮಾರು ಐದು ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದರು. ಇಗ್ನಾಸಿಯೊ ಸೆಪ್ಟೆಂಬರ್ 2018ರಂದು ಕಡೇಯ ಸ್ಪರ್ಧಾತ್ಮಕ ಪಂದ್ಯ ಆಡಿದ್ದರು.

'ಇದು ಸುಲಭವಿಲ್ಲ. ಗಾಯದ ನೋವು ಈ ಮೂರು ವರ್ಷಗಳಿಂದಲೂ ಪ್ರತೀ ದಿನ ನನ್ನ ಕಾಡುತ್ತಿದೆ. ಅದು ಕೊನೆಯಾಗಿ ನನ್ನನ್ನು ಮುಂದುವರೆಯಲು ಬಿಡುತ್ತಿಲ್ಲ,' ಎಂದು ನಿವೃತ್ತಿ ಘೋಷಿಸುವ ವೇಳೆ ಇಗ್ನಾಸಿಯೊ ಕ್ಯಾಮಾಚೊ ಭಾವನಾತ್ಮಕವಾಗಿ ಹೇಳಿದ್ದಾರೆ.

ಕ್ಯಾಮಾಚೊ ಅವರು 2010ರಲ್ಲಿ ಅಟ್ಲೆಂಟಿಕೋ ಜೊತೆಗೆ ಯುರೋಪಿಯನ್ ಲೀಗ್ ಜಯಿಸಿದ್ದರು. ಆ ಬಳಿಕ ಕ್ಯಾಮಾಚೊ ಸ್ಪ್ಯಾನಿಶ್ ಲೀಗ್ ಮತ್ತು ಚಾಂಪಿಯನ್ಸ್ ಲೀಗ್‌ನಲ್ಲಿ ಪ್ರಮುಖ ಆಟಗಾರರಾಗಿ ಆಡಿದ್ದರು. ಸ್ಪೇನ್ ರಾಷ್ಟ್ರೀಯ ತಂಡದ ಪರ 2014ರಲ್ಲಿ ಒಂದು ಸೌಹಾರ್ದ ಪಂದ್ಯದಲ್ಲಿ ಕ್ಯಾಮಾಚೊ ಆಡಿದ್ದರು.

Story first published: Tuesday, September 15, 2020, 9:45 [IST]
Other articles published on Sep 15, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+