ಏಕಕಾಲಕ್ಕೆ ಇಬ್ಬಿಬ್ಬರನ್ನು ವರಿಸಲಿದ್ದಾರೆ ಫುಟ್ಬಾಲಿಗ ರೊನಾಲ್ಡಿನೋ

ಬ್ರೆಸಿಲಿಯಾ, ಮೇ 25: ಇದು ಫುಟ್ಬಾಲ್ ವನಿತಾ ಅಭಿಮಾನಿಗಳಿಗೆ ಅಘಾತಕಾರಿ ಸಂಗತಿ. ಅದರಲ್ಲೂ ಎರಡೆರಡು ಬಾರಿ ಯುವತಿಯರ ಹಾರ್ಟಿಗೆ ಕಿರಿಕಿರಿ ಮಾಡಿಸಬಲ್ಲ ವಿಚಾರವಿದು. ಅದೇನೆಂದರೆ ಬ್ರೆಸಿಲ್ ನ ಮಾಜಿ ಸ್ಟಾರ್ ಫುಟ್ಬಾಲಿಗ ರೊನಾಲ್ಡಿನೋ ಅವರು ತನ್ನ ಇಬ್ಬಿಬ್ಬರು ಗೆಳತಿಯರನ್ನು ಏಕಕಾಲಕ್ಕೆ ವರಿಸುವುದರಲ್ಲಿದ್ದಾರೆ.
ಬ್ರೆಸಿಲ್ ನ ರೊನಾಲ್ಡೊ ಡೆ ಅಸಿಸ್ ಮೊರೆರಾ ಅವರು ಇಬ್ಬಿಬ್ಬರನ್ನು ಗೆಳತಿಯರನ್ನು ವರಿಸಲು ನಿರ್ಧರಿಸಿದ್ದಾರೆ. ರಿಯೋ ಡಿ ಜನೈರೋದಲ್ಲಿರುವ ರೊನಾಲ್ಡಿನೋ ನಿವಾಸದಲ್ಲಿ ಆಗಸ್ಟ್ ತಿಂಗಳಲ್ಲಿ ಮದುವೆ ನಡೆಯುವುದರಲ್ಲಿದೆ.
ಪ್ರಿಸಿಲ್ಲಾ ಕೊಯೆಲೊ ಮತ್ತು ಬೀಟ್ರಿಜ್ ಸೌಜಾ ಇವು ರೊನಾಲ್ಡಿನೋ ಭಾವಿ ಪತ್ನಿಯರ ಹೆಸರುಗಳು. ಕಳೆದ ವರ್ಷ ಡಿಸೆಂಬರ್ ನಿಂದಲೂ ಮೂವರೂ ಜೊತೆಯಾಗಿ ವಾಸಿಸುತ್ತಿದ್ದಾರೆ. ಮಾಹಿತಿಯೊಂದಲ್ಲಿ ಹೇಳಿರುವಂತೆ ರೊನಾಲ್ಡಿನೋ 2013ರಿಂದಲೇ ಕೊಯೆಲೊ ಅವರೊಂದಿಗೆ ಡೇಟಿಂಗ್ ಆರಂಭಿಸಿದ್ದರು. ರೊನಾಲ್ಡಿನೋ-ಸೌಜಾ ಮೊದಲ ಭೇಟಿಯಾಗಿದ್ದು 2016ರಲ್ಲಿ.
ವರದಿಯೊಂದರ ಪ್ರಕಾರ ಬ್ರೆಜಿಲ್ ನಲ್ಲಿ ಎರಡು ಮದುವೆಗೆ ಅನುಮತಿಯಿಲ್ಲ. ಎರಡು ಮದುವೆ ಇಲ್ಲಿ ಶಿಕ್ಷಾರ್ಹ ಅಪರಾಧ. ದ್ವಿವಿವಾಹಕ್ಕೆ ಇಲ್ಲಿ 6 ವರ್ಷಗಳವರೆಗಿನ ಜೈಲು ಶಿಕ್ಷೆಯಿದೆ. ಆದರೆ ರೊನಾಲ್ಡಿನೋ ಎರಡು ಮದುವೆಯನ್ನು ನೋಂದಾಯಿಸಿಕೊಳ್ಳದಿರಲು ಯೋಚಿಸಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ತಂಡವಾಗಿ ಬ್ರೆಸಿಲ್ ಅನ್ನು 97 ಬಾರಿ ಪ್ರತಿನಿಧಿಸಿರುವ ರೊನಾಲ್ಡಿನೋ 33 ಗೋಲ್ ಗಳನ್ನು ಬಾರಿಸಿದ್ದರು. 2002ರಲ್ಲಿ ಇಂಗ್ಲೆಂಡ್ ವಿರುದ್ಧ ವಿಶ್ವ ಕಪ್ ಜಯಿಸಿದ್ದ ಬ್ರೆಸಿಲ್ ತಂಡದಲ್ಲಿ ರೊನಾಲ್ಡಿನೋ ಪ್ರಮುಖರು. ರೆಡ್ ಕಾರ್ಡ್ ಮೂಲಕ ಆ ಫೈನಲ್ ಪಂದ್ಯದಿಂದ ರೊನಾಲ್ಡಿನೋ ಹೊರ ಹೋಗುವುದಕ್ಕೂ ಮುನ್ನ ಆಕರ್ಷಕ ಗೋಲು ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications