Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಯಲ್ ಮ್ಯಾಡ್ರೀಡ್ ಫುಟ್ಬಾಲ್ ಕ್ಲಬ್‌ನ ಮಾಜಿ ಅಧ್ಯಕ್ಷ ಕೊರೊನಾ ವೈರಸ್‌ಗೆ ಬಲಿ

Former Real Madrid President Lorenzo Sanz Dies Of Coronavirus

ಮ್ಯಾಡ್ರಿಡ್: ಖ್ಯಾತ ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರೀನ್‌ನ ಮಾಜಿ ಅಧ್ಯಕ್ಷ ಲಾರೆನ್ಜೋ ಸಾನ್ಸ್ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಈ ಬಗ್ಗೆ ಸಾನ್ಸ್‌ ಪುತ್ರ ಟ್ವಿಟ್ಟರ್‌ನಲ್ಲಿ ಖಚಿತಪಡಿಸಿದ್ದಾರೆ. ಲಾರೆನ್ಜೋ ಸಾನ್ಸ್ 1995 ರಿಂದ 2000ನೇ ಇಸವಿಯ ವರೆಗೆ ರಿಯಲ್ ಮ್ಯಾಡ್ರೀಡ್ ಫುಟ್ಬಾಲ್ ಕ್ಲಬ್‌ನ ಅಧ್ಯಕ್ಷರಾಗಿದ್ದರು.

ಲಾರೆನ್ಜೋ ಸಾನ್ಸ್ ಕಳೆದ ಮಂಗಳವಾರದಂದು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆರಂಭದಲ್ಲಿ ಶುಚಿತ್ವದ ಕಾರಣಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಲು ಲಾರೆನ್ಜೋ ಸಾನ್ಸ್ ನಿರಾಕರಿಸಿದ್ದರು. 8 ದಿನಗಳ ಅನಾರೋಗ್ಯದ ಬಳಿಕ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಲಾರೆನ್ಜೋ ಕೊರೊನಾ ಬಾಧಿತರಾಗಿದ್ದಾರೆ ಎಂಬುದು ಸಾಭೀತಾಗಿತ್ತು.

ಸ್ಪೇನ್‌ನ ಖ್ಯಾತ ಫುಟ್ಬಾಲ್ ಕ್ಲಬ್ ಆಗಿರುವ ರಿಯಲ್ ಮ್ಯಾಡ್ರೀಡ್ ತಂಡ ಲಾರೆನ್ಜೋ ಸಾನ್ಸ್ ರಿಯಲ್ ಸಮಯದಲ್ಲಿ ಉನ್ನತ ಸ್ಥಾನಕ್ಕೇರಿತ್ತು. ತನ್ನ 32 ವರ್ಷದ ಕಪ್‌ ಬರವನ್ನು ರಿಯಮ್ ಮ್ಯಾಡ್ರೀಡ್ ತಂಡ ಈ ಸಂದರ್ಭದಲ್ಲಿ ನೀಗಿಸಿಕೊಂಡಿತ್ತು. 1998ರಲ್ಲಿ ಯುರೋಪಿಯನ್ ಕಪ್‌ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಸ್ಪೇನ್‌ನಲ್ಲೂ ಕೊರೊನಾ ಭಾರೀ ಪ್ರಮಾಣದಲ್ಲಿ ಪ್ರಾಣ ಹಾನಿಗೆ ಕಾರಣವಾಗಿದೆ. ಈವರೆಗೂ 1300ಕ್ಕೂ ಅಧಿಕ ಮಂದಿ ಸ್ಪೇನ್‌ನಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಸರ್ಕಾರ ಅಧಿಕೃತವಾಗಿ ಹೇಳಿಕೊಂಡಿದೆ. 20 ಸಾವಿರದಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.

ಕೊರೊನಾ ವೈರಸ್‌ನಿಂದ ಹೆಚ್ಚಿನ ಹಾನಿಗೊಳಗಾಗ ರಾಷ್ಟ್ರದಲ್ಲಿ ಸ್ಪೇನ್ ಮೂರನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನದಲ್ಲಿ ಚೀನಾ ಮತ್ತು ಇಟೆಲಿ ಇದೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ಶನಿವಾರದ ವೇಳೆಗೆ 11,000 ಜನರು ವಿಶ್ವಾದ್ಯಂತ ಕೊರೊನಾ ಸೋಕಿಗೆ ಬಲಿಯಾಗಿ

Story first published: Sunday, March 22, 2020, 14:52 [IST]
Other articles published on Mar 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+