ಕುಡಿದ ಅಮಲಿನಲ್ಲಿ ತನ್ನದೇ ಅಶ್ಲೀಲ ವಿಡಿಯೊ ಲೈವ್ ಮಾಡಿದ ಫುಟ್ಬಾಲಿಗ!

ಲಂಡನ್, ಆಗಸ್ಟ್ 01: ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ದೈತ್ಯ ಫುಟ್ಬಾಲ್ ಕ್ಲಬ್ ತಂಡವಾದ ಟೊಟೆನ್‌ಹ್ಯಾಮ್ ಹಾಟ್‌ಸ್ಪುರ್ ತಂಡದ ಮಾಜಿ ಫಾರ್ವರ್ಡ್ ಆಟಗಾರ ಕ್ಲಿಂಟನ್ ಎನ್ಜೀ, ಕುಡಿದ ಅಮಲಿನಲ್ಲಿ ತಮ್ಮದೇ ಸೆಕ್ಸ್ ವಿಡಿಯೊವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಲೈವ್ ಸ್ಟ್ರೀಮ್ ಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.
ಕ್ಲಿಂಟನ್ ತಮ್ಮ ಸ್ನ್ಯಾಪ್ ಚಾಟ್‌ನಲ್ಲಿ 'clinton14' ಐಡಿ ಮೂಲಕ ತಮ್ಮದೇ ಲೈಂಗಿಕ ವಿಡಿಯೊವನ್ನು ನೇರ ಪ್ರಸಾರ ಮಾಡಿದ್ದಾರೆ. ಬಳಿಕ ಕುಡಿದ ಮತ್ತಿನಲ್ಲಿ ಮಾಡಿದ ಎಡವಟ್ಟಿನ ಅರಿವಾಗುತ್ತಿದ್ದಂತೆಯೇ ವಿಡಿಯೊವನ್ನು ಡಿಲೀಟ್ ಮಾಡಿದ್ದಾರೆ.
2015ರಿಂದ 2017ರ ವರೆಗೆ ಟೊಟೆನ್‌ಹ್ಯಾಮ್ ಹಾಟ್‌ಸ್ಪುರ್ ತಂಡದ ಮುಖ್ಯ ಸ್ಟ್ರೈಕರ್‌ಗಳಲ್ಲಿ ಒಬ್ಬರಾಗಿದ್ದ ಕ್ಲಿಂಟನ್ ಎನ್ಜೇ ಗೂಗಲ್‌ನಲ್ಲಿ ತಮ್ಮ ಸುದ್ದಿಯನ್ನು ಹುಡುಕುವ ಪ್ರಯತ್ನದಲ್ಲಿ ಇಂಥದ್ದೊಂದು ಯಡವಟ್ಟು ಸಂಭವಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಕಂಠಮಟ್ಟ ಕುಡಿದು ಅಪರಿಚಿತ ಮಹಿಳೆಯೊಂದಿಗೆ ತಮ್ಮ ಹೋಟೆಲ್‌ಗೆ ತೆರಳಿದ್ದ ಕ್ಲಿಂಟನ್, ಬಳಕ ತಮ್ಮ ಖಾಸಗಿ ವಿಡಿಯೊವನ್ನು ನೇರ ಪ್ರಸಾರ ಮಾಡಿದ್ದಾರೆ. "ತಪ್ಪಾದ ಬಟನ್ ಒತ್ತಿದ ಪರಿಣಾಮ ಹೀಗಾಗಿದೆ," ಎಂದು ಬಳಿಕ ಸಬೂಬು ನೀಡಿದ್ದಾರೆ.
"ನನ್ನನ್ನು ಕ್ಷಮಿಸಿಬಿಡಿ. ನಾನು ಬಹಳ ಕುಡಿದಿದ್ದೆ. ನೂತನ ಕ್ಲಬ್ ಜೊತೆಗೆ ಮಾಡಿಕೊಂಡ ಒಪ್ಪಂದವನ್ನು ಸಂಭ್ರಮಿಸುತ್ತಿದೆ. ಈ ಸುದ್ದಿಯನ್ನು ಓದಲು ಪ್ರಯತ್ನಿಸುವ ಸಂದರ್ಭದಲ್ಲಿ ತಪ್ಪಾದ ಬಟನ್ ಒತ್ತಿ ಈ ರೀತಿಯಾಗಿದೆ," ಎಂದು ಕ್ಲಿಂಟನ್ ವಿವರಣೆ ನೀಡಿದ್ದಾರೆ.
ಕ್ಲಿಂಟನ್ ಎನ್ಜೇ, ಮರ್ಸೆಲಿ ತಂಡದಿಂದ ಬರೋಬ್ಬರಿ 42 ಕೋಟಿ ರೂ. ಮೊತ್ತಕ್ಕೆ ಡೈನಮೊ ಮಾಸ್ಕೊ ತಂಡಕ್ಕೆ ವರ್ಗಾವಣೆಯಾಗಿದ್ದರು. ಇನ್ನು ವರದಿಗಳ ಪ್ರಕಾರ ಕ್ಲಿಂಟನ್ ತಮ್ಮ ವಿಡಿಯೊ ಡಿಲೀಟ್ ಮಾಡುವ ಮೊದಲು ಸಾವಿರಾರು ಮಂದಿ ವಿಡಿಯೊ ವೀಕ್ಷಿಸಿದ್ದರು ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications