
ಕೊರೊನಾ ವೈರಸ್‌ಗೆ 21 ವರ್ಷದ ಫುಟ್ಬಾಲ್ ಕೋಚ್ ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಫ್ರ್ಯಾನ್ಸಿಸ್ಕೋ ಗಾರ್ಸಿಯಾ ಎಂಬ ಯುವಕ ಅರ್ಟಿಟಿಕೋ ಪೊರ್ಟಡಾ ಅಲ್ಟಾ ಎಂಬ ತಂಡಕ್ಕೆ ಕೋಚ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು.
ಇನ್ನು ಫ್ರ್ಯಾನ್ಸಿಸ್ಕೋ ಗಾರ್ಸಿಯಾ ಕೊರೊನಾ ವೈರಸ್‌ಗೂ ಮುನ್ನ ಲುಖೇಮಿಯಾ ಖಾಯಿಲೆಯಿಂದಲೂ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಕೊರೊನಾ ವೈರಸ್ ಗಾರ್ಸಿಯ ಅವರನ್ನು ಮತ್ತಷ್ಟು ದುರ್ಬಲಗೊಳಿಸಿತ್ತು. ಕೊರೊನಾ ವೈರಸ್‌ನ ಲಕ್ಷಣಗಳನ್ನು ಹೊಂದಿದ್ದ ಕಾರಣ ಗಾರ್ಸಿಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫ್ರಾನ್ಸ್‌ನ ಮಲಗಾ ಪ್ರಾಂತ್ಯದಲ್ಲಿ ಕರೊನಾ ವೈರಸ್‌ಗೆ ಮೃತಪಟ್ಟ ಕಿರಿಯ ವ್ಯಕ್ತಿಯಾಗಿದ್ದಾರೆ ಗಾರ್ಸಿಯಾ.
ಕಿರಿಯ ಕೋಚ್ ಫ್ರ್ಯಾನ್ಸಿಸ್ಕೋ ಗಾರ್ಸಿಯಾ ಅವರ ಅಕಾಲಿಕ ಮರಣಕ್ಕೆ ಅರ್ಟಿಟಿಕೋ ಪೊರ್ಟಡಾ ಅಲ್ಟಾ ಫುಟ್ಬಾಲ್ ಕ್ಲಬ್ ಕಂಬನಿಯನ್ನು ಮಿಡಿದಿದೆ. ಈ ಬಗ್ಗೆ ಭಾವುಕ ಪತ್ರವೊಂದನ್ನು ಬರೆದಿದ್ದು ಗಾರ್ಸಿಯಾ ಕುಟುಂಬಸ್ಥರು ಮತ್ತು ಆಪ್ತರಿಗೆ ಧೈರ್ಯವನ್ನು ತುಂಬಿ ಸಂತಾಪವನ್ನು ಸೂಚಿಸಿದೆ.
ಇದಕ್ಕೂ ಮೊದಲು ವಲೆನ್ಸಿಕಾ ಸಿಎಫ್‌ನ ಡಿಫೆಂಡರ್ ಆಗಿರುವ ಇಝೆಕ್ವಲ್ ಗರಾಯ್ ಮೊಟ್ಟಮೊದಲು 'ಲಾ ಲಿಗಾ' ಫುಟ್ಬಾಲ್ ಟೂರ್ನಿಯಲ್ಲಿ ಕೊರೊನಾ ವೈರಸ್‌ಗೆ ತುತ್ತಾದ ಆಟಗಾರನಾಗಿದ್ದಾರೆ. ತಾನು ಕೊರೊನಾ ವೈರಸ್‌ಗೆ ತುತ್ತಾಗಿರುವುದರ ಬಗ್ಗೆ ಇಝೆಕ್ವಲ್ ಗರಾಯ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.
ಸ್ಪೇನ್‌ನ ಪ್ರಮುಖ ಫುಟ್ಬಾಲ್ ಲೀಗ್ ಟೂರ್ನಿಯಾದ 'ಲಾ ಲಿಗಾ'ವನ್ನು ಕೂಡ ಈಗಾಗಲೆ ರದ್ದುಗೊಳಿಸಲಾಗಿದೆ. ಅಬಯಾನಕ ರೀತಿಯಲ್ಲಿ ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈ ಕೂಟವನ್ನು ಮುಂಜಾಗ್ರತಾ ಕ್ರಮವಾಗಿ ಮುಂದೂಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ