ಅಂದು ಜೀವನ ನಿರ್ವಹಣೆಗೆ ಬಸ್ ಡ್ರೈವರ್, ಇಂದು ಕೇಪ್ ವರ್ಡೆ ಗೋಲ್ ಕೀಪರ್ ವೊಜಿನ್ಹಾ
ಕಳೆದ ಸೋಮವಾರ ಕೇಪ್ ವರ್ಡೆ ಫುಟ್ಬಾಲ್ ವಿಶ್ವಕಪ್‌ನಲ್ಲಿ ಕಣಕ್ಕೆ ಇಳಿದಾಗ ಈ ದೇಶದ ಮೇಲೆ ಯಾರೂ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ಕಾರಣ ಕೇಪ್ ವರ್ಡೆ, ಬಲಿಷ್ಠ ಸ್ಪೇನ್ ತಂಡವನ್ನು ಮೊದಲ ಪಂದ್ಯದಲ್ಲಿ ಎದುರಿಸಲಿತ್ತು. ಈ ಪಂದ್ಯದಲ್ಲಿ ಸ್ಪೇನ್ ಸುಲಭವಾಗಿ ಗೆಲುವು ದಾಖಲಿಸಿ ಬಿಡುತ್ತದೆ ಎಂಬ ಲೆಕ್ಕಾಚಾರ ಎಲ್ಲ ಪಂಡಿತರದ್ದಾಗಿತ್ತು. ಆದರೆ ಈ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಹೆಗ್ಗಳಿಕೆ 40 ವರ್ಷದ ಗೋಲ್‌ಕೀಪರ್ ವೊಜಿನ್ಹಾ ಅವರಿಗೆ ಸಲ್ಲುತ್ತದೆ.
ವೊಜಿನ್ಹಾ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್‌ನಂತಹ ಬಿಗ್ ಸ್ಟೇಜ್‌ನಲ್ಲಿ ಕಣಕ್ಕೆ ಇಳಿದರು. ಈ ವೇಳೆ ಇವರು ತಮ್ಮ ಸಂಪೂರ್ಣ ಅನುಭವ ಬಳಸಿಕೊಂಡು ಸ್ಪೇನ್ ಆಟಗಾರರನ್ನು ಕಾಡಿದರು. ಅಲ್ಲದೆ ಅವರು ಎದುರಾಳಿಗಳು ಬಾರಿಸಿದ ಚೆಂಡು ಗೋಲು ಪೆಟ್ಟಿಗೆಯ ಒಳಗಡೆ ಹೋಗಲು ಬಿಡಲೇ ಇಲ್ಲ. ಆಗಲೇ ವಿಶ್ವ ಇವರ ಆಟವನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು. ಬಲಿಷ್ಠ ಸ್ಪೇನ್ ವಿರುದ್ಧ ಡ್ರಾ ಸಾಧಿಸುವಲ್ಲಿ ಕೇಪ್ ವರ್ಡೆ ಡ್ರಾ ಸಾಧಿಸುವಲ್ಲಿ ಸಫಲವಾಯಿತು.

ಅಟ್ಲಾಂಟಾ ಸ್ಟೇಡಿಯಂನಲ್ಲಿ ನಡೆದ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಕೇಪ್ ವರ್ಡೆ ತಂಡವು ತನ್ನ ರಕ್ಷಣಾತ್ಮಕ ಆಟಕ್ಕೆ ಮೊರೆಹೋಗಿತ್ತು. ಸ್ಪೇನ್ ತಂಡದ ಪ್ರಮುಖ ಆಟಗಾರರಾದ ಪೆದ್ರಿ, ಮಾರ್ಕ್ ಕುಕುರೆಲ್ಲಾ, ಫೆರಾನ್ ಟೊರೆಸ್ ಮತ್ತು ಐಮೆರಿಕ್ ಲ್ಯಾಪೋರ್ಟೆ ಪ್ರಯತ್ನಕ್ಕೆ ಗೋಲ್‌ಕೀಪರ್ ವೊಜಿನ್ಹಾ ಪೆಟ್ಟು ನೀಡಿದರು. ಈ ಪಂದ್ಯದಲ್ಲಿ 7 ಬಾರಿ ಗೋಲು ಬಾರಿಸುವ ಯತ್ನವನ್ನು ನುಚ್ಚು ನೂರಾಗಿಸಿದ ವೊಜಿನ್ಹಾ ಸ್ಟಾರ್ ಪಟ್ಟವನ್ನು ಅಲಂಕರಿಸಿದರು.
ವೊಜಿನ್ಹಾ ಯಾರು?
ವೊಜಿನ್ಹಾ ಅವರ ಅಸಲಿ ಹೆಸರು 'ಜೋಸಿಮರ್ ಜೋಸ್ ಎವೊರಾ ಡಿಯಾಸ್'. ಕೇಪ್ ವರ್ಡೆಯ ಮಿಂಡೆಲೋದಲ್ಲಿ ಜನಿಸಿದ ವೊಜಿನ್ಹಾ, 2007ರಲ್ಲಿ ಸ್ಥಳೀಯ ಕ್ಲಬ್ 'ಬಟುಕ್ ಎಫ್‌ಸಿ' ಮೂಲಕ ತಮ್ಮ ಫುಟ್ಬಾಲ್ ಜೀವನ ಆರಂಭಿಸಿದರು. ಇವರು ಈ ವರೆಗೆ ಯಾವುದೇ ದೊಡ್ಡ ಖ್ಯಾತ ಕ್ಲಬ್ ಪರ ಆಡಿಲ್ಲ. ಸದ್ಯ ಇವರು ಪೋರ್ಚುಗಲ್‌ನ ಎರಡನೇ ವಿಭಾಗದ 'ಚಾವೆಸ್' ಕ್ಲಬ್ ಪರ ಆಡುತ್ತಿದ್ದಾರೆ.
ವಿಶ್ವದ ಮಹಾನ್ ವೇದಿಕೆಯಲ್ಲಿ ಆಡುತ್ತಿರುವ ವೊಜಿನ್ಹಾ, ತಮ್ಮ ಬಾಲ್ಯದ ದಿನಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ಎತ್ತರ ಕಡಿಮೆ ಇದೆ ಎಂಬ ಕಾರಣಕ್ಕೆ ಬಾಲ್ಯದಲ್ಲಿ ಟ್ರಯಲ್ಸ್ ವೇಳೆ ನನ್ನನ್ನು ಆಯ್ಕೆ ಮಾಡುತ್ತಿರಲಿಲ್ಲ. ಆದರೂ ನಾನು ಭರವಸೆ ಕಳೆದುಕೊಳ್ಳದೆ ಪ್ರಯತ್ನ ಮುಂದುವರಿಸಿದೆ. ಇಂದು ನನ್ನ 40ನೇ ವಯಸ್ಸಿನಲ್ಲಿ ವಿಶ್ವಕಪ್ ಆಡುವ ಕನಸು ನನಸಾಗಿದೆ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಜೀವನ ನಿರ್ವಹಣೆಗೆ ಬಸ್ ಡ್ರೈವರ್
ಇಂದು ವಿಶ್ವಕಪ್‌ನ ಅತ್ಯುನ್ನತ ವೇದಿಕೆಯಲ್ಲಿ ಮಿಂಚುತ್ತಿರುವ ವೊಜಿನ್ಹಾ ಕಲ್ಲು ಮುಳ್ಳುಗಳಿಂದ ಕೂಡಿತ್ತು. ಆಫ್ರಿಕಾದ ಸಣ್ಣ ದ್ವೀಪ ರಾಷ್ಟ್ರವಾದ ಕೇಪ್ ವರ್ಡೆಯಲ್ಲಿ ವೃತ್ತಿಪರ ಫುಟ್‌ಬಾಲ್ ಆಟಗಾರನಾಗಿ ಜೀವನ ಸಾಗಿಸುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ತಮ್ಮ ಆರಂಭಿಕ ದಿನಗಳಲ್ಲಿ ಫುಟ್‌ಬಾಲ್ ಮೇಲಿನ ಕನಸನ್ನು ಜೀವಂತವಾಗಿಡಲು ಹಾಗೂ ಜೀವನವನ್ನು ನಡೆಸಲು ಬಸ್ ಡ್ರೈವರ್ ಆಗಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಅವರು ಎಲೆಕ್ಟ್ರಿಷಿಯನ್ ಆಗಿಯೂ ದುಡಿಯುತ್ತಿದ್ದರು. ಹಗಲಿನಲ್ಲಿ ಜೀವನಕ್ಕಾಗಿ ವಾಹನಗಳನ್ನು ಚಲಾಯಿಸುತ್ತಾ, ಸಿಕ್ಕ ಅತ್ಯಲ್ಪ ಸಮಯದಲ್ಲಿ ಮೈದಾನಕ್ಕೆ ಬಂದು ಫುಟ್‌ಬಾಲ್ ಪ್ರ್ಯಾಕ್ಟೀಸ್ ಮಾಡುತ್ತಿದ್ದ ವೊಜಿನ್ಹಾ ಈ ಮಟ್ಟಕ್ಕೆ ಬಂದು ನಿಂತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

