For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

Euro Cup 2024 Quarter Final: ರೋಚಕ ಪಂದ್ಯದಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸ್ಪೇನ್; ಆತಿಥೇಯ ಜರ್ಮನಿ ಟೂರ್ನಿಯಿಂದ ಔಟ್‌

ಜುಲೈ 6 ಶನಿವಾರ, ಯುರೋ ಕಪ್‌ 2024ರ ಫುಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಸ್ಪೇನ್ ಎದುರು ಜರ್ಮನಿ ಸೋಲು ಕಂಡಿದೆ. ಈ ಸೋಲಿನೊಂದಿಗೆ ಆತಿಥೇಯ ಜರ್ಮನಿ ತಂಡವು ಯುರೋ ಕಪ್‌ನಿಂದ ಹೊರಬಿದ್ದಿದ್ದು, ಸ್ಪೇನ್‌ ಸೆಪಿಫೈನಲ್‌ ತಲುಪಿದೆ.

ನಾಕೌಟ್‌ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸ್ಪೇನ್ ಪಡೆ 2-1 ಗೋಲುಗಳಿಂದ ಜಯಗಳಿಸಿದೆ. ಹೆಚ್ಚುವರಿ ಸಮಯದಲ್ಲಿ ಸ್ಪೇನ್‌ ಪರ ಮೈಕಲ್ ಮೆರಿನೊ ಹೊಡೆದ ಗೋಲಿನಿಂದ ಉಭಯ ತಂಡಗಳು ಸಮಬಲ ಸಾಧಿಸಿದರು. ಇದಾದ ಬಳಿಕ ಆಕ್ರಮಣಕಾರಿ ಆಟವಾಡಿದ ಸ್ಪೇನ್ ಗೆಲ್ಲಲು ಸಾಧ್ಯವಾಯಿತು.

Germany beat Spain in Euro Cup 2024 quarter-final match

51ನೇ ನಿಮಿಷದಲ್ಲಿ ಡ್ಯಾನಿ ಓಲ್ಮೊ ಬಾರಿಸಿದ ಗೋಲು ಮೂಲಕ ಸ್ಪೇನ್ ಆರಂಭಿಕ ಮುನ್ನಡೆ ಸಾಧಿಸಿತು. ಜರ್ಮನಿ 89ನೇ ನಿಮಿಷದಲ್ಲಿ ಫ್ಲೋರಿಯನ್ ವಿರ್ಟ್ಜ್ ಹೊಡೆದ ಗೋಲೊಂದಿಗೆ ಸಮಬಲ ಸಾಧಿಸಿತು.

ನಿಕೊ ವಿಲಿಯಮ್ಸ್ ಮತ್ತು ಲ್ಯಾಮಿನ್ ಯಮಲ್ ವಿಂಗ್ಸ್‌ನಲ್ಲಿ ಜರ್ಮನಿಯ ರಕ್ಷಣೆಗೆ ತಲೆನೋವು ತಂದರು. ಸ್ಪೇನ್ 8ನೇ ನಿಮಿಷದಲ್ಲಿ ಗಾಯದ ಕಾರಣ ಯುವ ಆಟಗಾರ ಪೆಡ್ರಿಯನ್ನು ಹಿಂಪಡೆಯಬೇಕಾಯಿತು. ಈ ವೇಳೆ ಡ್ಯಾನಿ ಓಲ್ಮಾ ಬದಲಿ ಆಟಗಾರನಾಗಿ ಕಣಕ್ಕೀಳಿದರು.

ಜರ್ಮನಿ ಹೆಚ್ಚಾಗಿ ಚೆಂಡಿನೊಂದಿಗೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿತ್ತು. ಸಿಕ್ಕ ಅವಕಾಶಗಳಲ್ಲಿ ಜರ್ಮನಿ ಕೂಡ ಸ್ಪೇನ್‌ನ ಪೋಸ್ಟ್‌ನಲ್ಲಿ ಶೂಟ್ ಮಾಡಲು ಪ್ರಯತ್ನಿಸಿತು. ಆದರೆ, ಜರ್ಮನಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಮೊದಲಾರ್ಧದ ಅಂತಿಮ ನಿಮಿಷಗಳಲ್ಲಿ, ಸ್ಪೇನ್ ತಂಡವು ಜರ್ಮನ್ ರಕ್ಷಣೆಯನ್ನು ಭೇದಿಸುವುದನ್ನು ಮುಂದುವರೆಸಿತು. ಆದರೆ, ಪ್ರಬಲ ಡಿಫೆನ್ಸ್ ಹಾಕಿದ ಜರ್ಮನಿ, ಸ್ಪೇನ್ ತಂಡವನ್ನು ಗೋಲು ಹೊಡೆಯದಂಯೆ ತಡೆಯುವಲ್ಲಿ ಯಶಸ್ವುಯಾಯಿತು. ಇದರೊಂದಿಗೆ ಮೊದಲಾರ್ಧ ಗೋಲು ರಹಿತವಾಗಿ ಅಂತ್ಯಗೊಂಡಿತು.

ದ್ವಿತೀಯಾರ್ಧ

ದ್ವಿತೀಯಾರ್ಧದ ಆರಂಭದಲ್ಲಿ ಸ್ಪೇನ್ ಉತ್ತಮ ಅವಕಾಶಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ಅಲ್ವಾರೊ ಮೊರಾಟಾ ಅವರ ಗೋಲು ಯತ್ನ ಗೋಲ್ ಬಾರ್ ಮೇಲೆ ಹೋಯಿತು. ಇದಾದ ಬಳಿಕ ಕೆಲವೇ ನಿಮಿಷಗಳಲ್ಲಿ ಆತಿಥೇಯರಿಗೆ ಆಘಾತ ನೀಡುವಲ್ಲಿ ಸ್ಪೇನ್ ಯಶಸ್ವಿಯಾಯಿತು.

ಸ್ಪೇನ್‌ ಎದುರು ಜರ್ಮನಿ ಪರ ಮುಸಿಯಾಲಾ, ಫುಲ್ಕ್ರುಗ್ ಮತ್ತು ಟೋನಿ ಕ್ರೂಸ್ ಸಮಬಲಕ್ಕಾಗಿ ಹೋರಾಡಿದರು. 69ನೇ ನಿಮಿಷದಲ್ಲಿ ಆಂಡ್ರಿಚ್ ಬಾರಿಸಿದ ಗೋಲು ಬಾರಿಸಿದ ಚೆಂಡನ್ನು ಸ್ಪೇನ್ ಗೋಲ್‌ಕೀಪರ್‌ ಉನೈ ಸೈಮನ್ ಹಿಮ್ಮೆಟ್ಟಿಸಿದರು. 77ನೇ ನಿಮಿಷದಲ್ಲಿ ಫುಲ್‌ಕ್ರುಗ್‌ಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸಮಬಲಕ್ಕಾಗಿ ಹೋರಾಟ ನಡೆಸಿದ ಜರ್ಮನಿ 89ನೇ ನಿಮಿಷದಲ್ಲಿ ಗುರಿ ಕಂಡಿತು. ಫ್ಲೋರಿಯನ್ ವಿರ್ಟ್ಜ್ ಗೋಲು ಗಳಿಸಿದರು. ಪಂದ್ಯ ಟೈ ಆಗಿದ್ದರಿಂದ ಹೆಚ್ಚುವರಿ ಸಮಯಕ್ಕೆ ಹೋಯಿತು.

ಹೆಚ್ಚುವರಿ ಸಮಯದಲ್ಲಿ ಜರ್ಮನಿ ಭರ್ಜರಿ ಮುನ್ನಡೆ ಸಾಧಿಸಿತು. ಬಳಿಕ ಸಿಕ್ಕ ಅವಕಾಶಗಳಲ್ಲಿ ಗೋಲು ಗಳಿಸಿದ ಸ್ಪೇನ್ 119ನೇ ನಿಮಿಷದಲ್ಲಿ ಗುರಿ ಮುಟ್ಟಿತು. ಬದಲಿ ಆಟಗಾರ ಮೈಕಲ್ ಮೆರಿನೊ ಹೆಡರ್ ಮೂಲಕ ಗೆಲುವಿನ ಗೋಲು ಸ್ಪೇನ್‌ ಗಳಿಸಿತು. ಇದರೊಂದಿಗೆ ಜರ್ಮನಿ ಹೊರಬಿದ್ದಿದ್ದು, ಸ್ಪೇನ್ ಸೆಮಿಫೈನಲ್ ಪ್ರವೇಶಿಸಿದೆ.

Story first published: Saturday, July 6, 2024, 9:17 [IST]
Other articles published on Jul 6, 2024
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+