ಅಂದು ಹಸಿವು ನೀಗಿಸಿದ್ದ ಮಹಿಳೆಗೆ ದೇಶದ ಅತಿ ದೊಡ್ಡ ಗಿಫ್ಟ್ ಕೊಟ್ಟ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ.. ವಿಶ್ವ ಫುಟ್ಬಾಲ್ ಲೋಕದ ಧ್ರುವ ತಾರೆ. ತನ್ನ ಅಮೋಘ ಆಟ ಹಾಗೂ ಐಷಾರಾಮಿ ಜೀವನಶೈಲಿಯಿಂದ ಅಪಾರ ಅಭಿಮಾನಿಗಳ ಮನ ಕದ್ದ ಆಟಗಾರ. ಅಮೆರಿಕ, ಮೆಕ್ಸಿಕೊ, ಕೆನಡಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪೋರ್ಚುಗಲ್ ತಂಡದ ಪರ ಆಡುತ್ತಿರುವ ಸ್ಟಾರ್ ಆಟಗಾರ ಮಂಗಳವಾರ ತಡ ರಾತ್ರಿ ದೊಡ್ಡ ದಾಖಲೆ ಬರೆದಿದ್ದಾರೆ.
ಉಜ್ಬೇಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲಾವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಅಬ್ಬರಿಸಿದರು. ಆರಂಭದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ರೊನಾಲ್ಡೊ ಮೊದಲ ಗೋಲು ಬಾರಿಸಿದರು. ಈ ಮೂಲಕ ರೊನಾಲ್ಡೊ ಫಿಫಾ ವಿಶ್ವಕಪ್‌ನಲ್ಲಿ ಅಪರೂಪದ ದಾಖಲೆಯನ್ನು ಬರೆದಿದ್ದಾರೆ. ಆಡಿದ ಆರು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಗೋಲು ಬಾರಿಸಿ ಮೊದಲ ಆಟಗಾರ ಎಂಬ ಖ್ಯಾತಿ ರೊನಾಲ್ಡೊ ಪಾಲಾಗಿದೆ.

ಉಜ್ಬೇಬೆಕಿಸ್ತಾನ್ ವಿರುದ್ಧದ ಅಮೋಘ ಪ್ರದರ್ಶನದ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ಅವರು ತಮ್ಮ ಮೇಲೆ ಇದ್ದ ಟೀಕೆಗಗಳಿಗೆ ಮೈದಾನದಲ್ಲಿ ಉತ್ತರ ನೀಡಿದ್ದಾರೆ. ಕ್ರಿಸ್ಟಿಯಾನೊ ಮುಂದಾಳತ್ವದ ತಂಡ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕೊಲಂಬಿಯಾ ತಂಡವನ್ನು ಎದುರಿಸಲಿದೆ.
ಬಾಲ್ಯದಲ್ಲಿ ಕಡು ಬಡುತನ
ಕ್ರಿಸ್ಟಿಯಾನೊ ರೊನಾಲ್ಡೊ ಈಗ ಈ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಆದರೆ ಅವರ ಬಾಲ್ಯದ ದಿನಗಳು ತುಂಬ ಕಷ್ಟಕರವಾಗಿದ್ದವು. ಈ ಬಗ್ಗೆ ರೊನಾಲ್ಡೊ ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ. 11-12 ವರ್ಷದ ಬಾಲಕನಾಗಿದ್ದಾಗ ತೀವ್ರ ಹಸಿವಿನಿಂದ ಬಳಲುತ್ತಿದ್ದೆ. ಆಗ ಕ್ರೀಡಾಂಗಣದ ಪಕ್ಕದಲ್ಲಿದ್ದ ಮ್ಯಾಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ನ ಹಿಂಬಾಗಿಲು ತಟ್ಟಿ ಬರ್ಗರ್‌ಗಳಿದ್ದರೆ ಕೊಡಿ" ಎಂದು ಬೇಡುತ್ತಿದ್ದ ಎಂದು ಆ ದಿನಗಳನ್ನು ರೊನಾಲ್ಡೊ ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ.
ರೊನಾಲ್ಡೊ ಅವರಿಗೆ ಮ್ಯಾಕ್‌ಡೊನಾಲ್ಡ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಎಡ್ನಾ ಹಾಗೂ ಇಬ್ಬರು ಹುಡುಗಿಯರು ರೊನಾಲ್ಡೊಗೆ ಉಚಿತವಾಗಿ ಬರ್ಗರ್ ನೀಡಿ ಹಸಿವು ನೀಗಿಸುತ್ತಿದ್ದರು. ಆ ಕೃತಜ್ಞತೆಯನ್ನು ರೊನಾಲ್ಡೊ ಇಂದಿಗೂ ಮರೆತಿಲ್ಲ.
ರೊನಾಲ್ಡೊ ಕೆಲ ವರ್ಷಗಳ ಹಿಂದೆ ಎಡ್ನಾ ಅವರನ್ನು ಹುಡುಕಿ ಭೇಟಿಯಾಗಿದ್ದಾರೆ. ಭೇಟಿಯಾದ ತಕ್ಷಣ ರೊನಾಲ್ಡೊ ಆಕೆಯ ಕೈಗಳಿಗೆ ಮುತ್ತಿಕ್ಕಿ, ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ ಅವರಿಗೆ ದುಬಾರಿ ಗಿಫ್ಟ್‌ಗಳನ್ನು ನೀಡಿದ್ದಾಗಿ ತಿಳಿದು ಬಂದಿದೆ.

ರೊನಾಲ್ಡೊ ತಮ್ಮನ್ನು ಇಂದಿಗೂ ನೆನಪಿನಲ್ಲಿಟ್ಟಿರುವುದಕ್ಕೆ ಎಡ್ನಾ ಪೋರ್ಚುಗಲ್‌ನ ಕ್ರೀಡಾ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿ ಸಂತಸ ಹಂಚಿಕೊಂಡಿದ್ದಾರೆ. ರೊನಾಲ್ಡೊ ಅವರ ಈ ನಡೆ ನನಗೆ ತುಂಬಾ ಸಂತೋಷ ತಂದಿದೆ. ಇದು ಅವರ ನಮ್ರತೆ ಮತ್ತು ಸರಳತೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ರೊನಾಲ್ಡೊ ಅವರು ಎಡ್ನಾ ಅವರಿಗೆ ಪೋರ್ಚುಗಲ್ ದೇಶದಲ್ಲೇ ಅತಿ ದೊಡ್ಡದಾದ ರೆಸ್ಟೋರೆಂಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾಗಿ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications