Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

11 ನಿಮಿಷದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಿಸಿದ ಇಂಗ್ಲೆಂಡ್‌ ತಂಡದ ಸ್ಟಾರ್ ಆಟಗಾರ ಹ್ಯಾರಿ ಕೇನ್‌

ಅಟ್ಲಾಂಟಾ: ಫಿಫಾ ವಿಶ್ವಕಪ್ ರೋಚಕತೆಗೆ ಬುಧವಾರ ನಡೆದ ಹೈವೋಲ್ಟೇಜ್‌ ಪಂದ್ಯವೇ ಸಾಕ್ಷಿ. ಪಂದ್ಯದ 75ನೇ ನಿಮಿಷದ ವರೆಗೂ ಡಿಆರ್‌ ಕಾಂಗೋ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿತ್ತು. ಆದರೆ 75 ನಿಮಿಷದಿಂದ 86 ನಿಮಿಷದ ಒಳಗೆ ಇಂಗ್ಲೆಂಡ್ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಇಂಗ್ಲೆಂಡ್ ಅಭಿಮಾನಿಗಳು ಹಾಗೂ ಆಟಗಾರರು ಹುಚ್ಚೆದ್ದು ಕುಣಿಯುವ ಅವಕಾಶವನ್ನು ಸ್ಟಾರ್ ಆಟಗಾರ ಹ್ಯಾರಿ ಕೇನ್ ಮಾಡಿಕೊಟ್ಟರು.

ಹ್ಯಾರಿ ಕೇನ್‌ ತಮ್ಮ ಅಮೋಘ ಆಟದ ನೆರವಿನಿಂದ ಡಿಆರ್‌ ಕಾಂಗೊ ಪಾಳಯಕ್ಕೆ ಶಾಕ್‌ ನೀಡಿದರು. ಬುಧವಾರ ರೌಂಡ್ ಆಫ್ 32ನಲ್ಲಿಇಂಗ್ಲೆಂಡ್‌ ಹಾಗೂ ಡಿಆರ್‌ ಕಾಂಗೋ ತಂಡಗಳು ಕಾದಾಟ ನಡೆಸಿದವು. ಪ್ರಸಕ್ತ ಫಿಫಾ ವಿಶ್ವಕಪ್‌ನಲ್ಲಿ ಅಪ್ರತಿಮ ಪ್ರದರ್ಶನ ನೀಡುತ್ತಿರುವ ಡಿಆರ್ ಕಾಂಗೊ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್ ಸ್ಟಾರ್ ಆಟಗಾರ ಹ್ಯಾರಿ ಕೇನ್‌ ಅಮೋಘ ಆಟದ ಪ್ರದರ್ಶನ ನೀಡಿ ಅಬ್ಬರಿಸಿದರು.

Harry Kane s

ಪಂದ್ಯದ 7ನೇ ನಿಮಿಷದಲ್ಲಿ ಬ್ರಿಯಾನ್ ಸಿಪೆಂಗಾ ಅವರು ಅಮೋಘ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದರು. ಸಹ ಆಟಗಾರ ಗೋಲು ಪೆಟ್ಟಿಗೆಯ ಎಡಭಾಗದಿಂದ ನೀಡಿದ ಕ್ಲಾಸ್‌ ಪಾಸ್‌ನ ಲಾಭ ಪಡೆದ ಇವರು ಇಂಗ್ಲೆಂಡ್ ತಂಡದ ಒಬ್ಬ ರಕ್ಷಣಾ ಆಟಗಾರ ಹಾಗೂ ಗೋಲ್‌ ಕೀಪರ್ ಅವರನ್ನು ವಂಚಿಸಿ ಚೆಂಡಿಗೆ ಗೋಲು ಪೆಟ್ಟಿಗೆಯ ದರ್ಶನ ಮಾಡಿಸಿದರು. ಪರಿಣಾಮ ಡಿಆರ್ ಕಾಂಗೊ ತಂಡ 1-0 ಮುನ್ನಡೆ ಸಾಧಿಸಿತು.

FIFA 2026: ಎಂಬಪ್ಪೆ ದಾಖಲೆಯ ಆಟಕ್ಕೆ ಸ್ವೀಡನ್ ಸ್ಟನ್‌; ಇತಿಹಾಸ ನಿರ್ಮಿಸಿದ ಮೆಕ್ಸಿಕೊ

FIFA 2026: ಎಂಬಪ್ಪೆ ದಾಖಲೆಯ ಆಟಕ್ಕೆ ಸ್ವೀಡನ್ ಸ್ಟನ್‌; ಇತಿಹಾಸ ನಿರ್ಮಿಸಿದ ಮೆಕ್ಸಿಕೊ

ಆರಂಭದಲ್ಲೇ ಗೋಲು ಬಾರಿಸಿದ ಕಾಂಗೊ

ಮೊದಲ ಅರ್ಧದಲ್ಲಿ ಇಂಗ್ಲೆಂಡ್‌ ಗೋಲು ಬಾರಿಸಲು ಸತತ ಪ್ರಯತ್ನ ಪಟ್ಟಿತು. ಆದರೆ ಫಲ ಲಭಿಸಲಿಲ್ಲ.ಡಿಆರ್ ಕಾಂಗೊ ಗೋಲ್ ಕೀಪರ್ ಅವರ ಅಮೋಘ ಆಟ ಹಾಗೂ ರಕ್ಷಣಾ ಆಟಗಾರರ ಭರ್ಜರಿ ಆಟದ ನೆರವಿನಿಂದ ಇಂಗ್ಲೆಂಡ್ ಮೊದಲ 45 ನಿಮಿಷದಲ್ಲಿ ಗೋಲು ಬಾರಿಸಲು ಸಾಧ್ಯವೇ ಆಗಲಿಲ್ಲ.

ಹ್ಯಾರಿ ಕೇನ್ ಅಬ್ಬರ

ಎರಡನೇ ಅರ್ಧದಲ್ಲಿ ಇಂಗ್ಲೆಂಡ್ ಯೋಜನಾಬದ್ಧ ಆಟವನ್ನು ಆಡಲು ಮುಂದಾಯಿತು. ಈ ಅವಧಿಯಲ್ಲಿ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದ ಇಂಗ್ಲೆಂಡ್‌ ಡಿಆರ್ ಕಾಂಗೊ ಪಡೆಗೆ ಶಾಕ್ ನೀಡುವ ತಂತ್ರವನ್ನು ರೂಪಿಸಿಕೊಂಡಿತು. ಆದರೆ ಈ ಹಂತದಲ್ಲಿ ಫಲ ಲಭಿಸಲಿಲ್ಲ. ಆದರೆ 75ನೇ ನಿಮಿಷದಲ್ಲಿ ಹ್ಯಾರಿ ಕೇನ್‌ ಅಮೋಗ ಆಟದ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಸಹ ಆಟಗಾರ ನೀಡಿದ ಪಾಸ್‌ನ ಪೂರ್ಣ ಲಾಭ ಪಡೆದ ಹ್ಯಾರಿ ಕೇನ್‌ ಹೆಡ್‌ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಯ ಒಳಗೆ ತಳ್ಳುವಲ್ಲಿ ಸಫಲರಾದರು. ಇಂಗ್ಲೆಂಡ್ ಈ ಗೋಲಿನ ಸಹಾಯದಿಂದ 1-1 ಸಮಬಲ ಸಾಧಿಸಿತು.

Harry Kane s

ಇದೇ ಅವಧಿಯ 86ನೇ ನಿಮಿಷದಲ್ಲಿ ಹ್ಯಾರಿ ಕೇನ್‌ ಮತ್ತೊಮ್ಮೆ ತಮ್ಮ ಕಾಲ್ಚಳಕದ ಪ್ರದರ್ಶನ ಅಭಿಮಾನಿಗಳಿಗೆ ತೋರಿಸಿದರು. ಪರಿಣಾಮ ಈ ಹಂತದಲ್ಲಿ 2-1 ಗೋಲುಗಳ ಮುನ್ನಡೆ ಸಾಧಿಸಿತು. ಪಂದ್ಯದ ಕೊನೆಯ ಕ್ಷಣದ ವರೆಗೂ ಗೋಲು ಬಾರಿಸಿ ಸಮಬಲ ಸಾಧಿಸುವ ಡಿಆರ್ ಕಾಂಗೊ ಆಸೆ ಫಲಿಸಲಿಲ್ಲ. ಈ ಪಂದ್ಯದಲ್ಲಿ ಡಿಆರ್ ಕಾಂಗೊ ಸೋಲು ಅನುಭವಿಸಿದರೂ, ಭರ್ಜರಿ ಪ್ರದರ್ಶನ ನೀಡಿ ಅಪಾರ ಅಭಿಮಾನಿಗಳ ಮನಸ್ಸು ಗೆದ್ದಿತು.

ರೋನಾಲ್ಡೊ ಯುಗಾಂತ್ಯ? ಅಂದು ಪೋರ್ಚುಗಲ್‌ ತಂಡಕ್ಕೆ ಶಕ್ತಿಯಾಗಿದ್ದ ಆಟಗಾರ ಇಂದು ಸಮಸ್ಯೆಯೇ?

ರೋನಾಲ್ಡೊ ಯುಗಾಂತ್ಯ? ಅಂದು ಪೋರ್ಚುಗಲ್‌ ತಂಡಕ್ಕೆ ಶಕ್ತಿಯಾಗಿದ್ದ ಆಟಗಾರ ಇಂದು ಸಮಸ್ಯೆಯೇ?

ಈ ಗೆಲುವಿನ ಮೂಲಕ ಇಂಗ್ಲೆಂಡ್ ರೌಂಡ್‌ 16ಗೆ ಅರ್ಹತೆ ಪಡೆಯಿತು. ಇಂಗ್ಲೆಂಡ್ ಮುಂದಿನ ಹಂತದ ಪಂದ್ಯದಲ್ಲಿ ಮೆಕ್ಸಿಕೊ ತಂಡದ ಸವಾಲನ್ನು ಎದುರಿಸಲಿದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಪಂದ್ಯ ರೋಚಕತೆ ಹುಟ್ಟಿಸಿರಲಿದೆ. ಈ ಪಂದ್ಯ ಜುಲೈ 6 ರಂದು ನಡೆಯಲಿದೆ.

Story first published: Thursday, July 2, 2026, 6:05 [IST]
Other articles published on Jul 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+