Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋನಾಲ್ಡೊ ಯುಗಾಂತ್ಯ? ಅಂದು ಪೋರ್ಚುಗಲ್‌ ತಂಡಕ್ಕೆ ಶಕ್ತಿಯಾಗಿದ್ದ ಆಟಗಾರ ಇಂದು ಸಮಸ್ಯೆಯೇ?

ಫಿಫಾ ವಿಶ್ವಕಪ್‌ ನಡೆಯುತ್ತಿದೆ. ಈ ಮೆಗಾ ಟೂರ್ನಿಯಲ್ಲಿ ಸ್ಟಾರ್ ತಂಡಗಳ ಆಟಗಾರರು ತಮ್ಮ ತಮ್ಮ ದೇಶದ ಪರ ಕಣಕ್ಕೆ ಇಳಿದಿದ್ದಾರೆ. ಈ ವೇಳೆ ಎಲ್ಲರ ಚಿತ್ತ ಕದ್ದ ಆಟಗಾರರ ಪಟ್ಟಿಯಲ್ಲಿ ಪೋರ್ಚುಗಲ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಅಗ್ರಸ್ಥಾನ. ಆದರೆ ಇವರು ಇತ್ತೀಚೆಗೆ ನೀಡುತ್ತಿರುವ ಪ್ರದರ್ಶನ ಪೋರ್ಚುಗಲ್‌ ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಭಾನುವಾರ ನಡೆದ ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್‌, ಕೊಲಂಬಿಯಾ ವಿರುದ್ಧ ಡ್ರಾ ಸಾಧಿಸಿದೆ. ಈ ಪಂದ್ಯದಲ್ಲಿ ಪೋರ್ಚುಗಲ್‌ ನೀಡಿದ ಪ್ರದರ್ಶನ ತಂಡದ ಮೇಲೆ ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ. ಈ ಪಂದ್ಯದಲ್ಲಿ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರಸ್ತುತ ಫಾರ್ಮ್ ಹೊರತುಪಡಿಸಿ ನೀಡಿದ ಪ್ರದರ್ಶನ ಎಲ್ಲರ ಟೀಕೆಗೆ ಪಾತ್ರವಾಗಿದೆ. ರೊನಾಲ್ಡೊ ಮೈದಾನಕ್ಕೆ ಇಳಿದರೆ ಎದುರಾಳಿಗಳಿಗೆ ಕಾಟ ನೀಡುತ್ತಿದ್ದರು. ಆದರೆ ಈಗ ರೊನಾಲ್ಡೊ ತಮ್ಮ ಕಾಲ್ಚಳಕ ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ.

Cristiano

ಕೊಲಂಬಿಯಾ ವಿರುದ್ಧದ ಕ್ರಿಸ್ಟಿಯಾನೊ ಯಾವದೇ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಆದರೂ ಸಹ ಪೋರ್ಚುಗಲ್ ತಂಡದ ಉತ್ಸಾಹಕ್ಕೆ ಕೊರತೆ ಏನು ಇರಲಿಲ್ಲ. ಈ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಕೊಲಂಬಿಯಾ ವಿರುದ್ಧದ ಪಂದ್ಯದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಲಿಲ್ಲ. ಅಲ್ಲದೆ ತಾವು ಸಹ ಗೋಲು ಬಾರಿಸುವಲ್ಲಿ ವಿಫಲರಾಗಿದ್ದು, ಒಂದು ಬಾರಿಯೂ ರೊನಾಲ್ಡೊ ಅಸಿಸ್ಟ್‌ ಮಾಡಲಿಲ್ಲ. ಅಲ್ಲದೆ ಒಮ್ಮೆಯೂ ಗೋಲ್‌ ಬಾರಿಸುವ ಪ್ರಯತ್ನ ಮಾಡಲಿಲ್ಲ. ಅಲ್ಲದೆ ಕೊಲಂಬಿಯಾಷ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಡ್ರಿಬ್ಲಿಂಗ್‌ನ್ನು ಒಮ್ಮೆಯೂ ಮಾಡದಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. 90 ನಿಮಿಷ ರೊನಾಲ್ಡೊ ಮೈದಾನದಲ್ಲಿ ರೊನಾಲ್ಡೊ ಇದ್ದರೂ ಒಮ್ಮೆ ಮಾತ್ರ ಗೋಲು ಬಾರಿಸಲು ಪ್ರಯತ್ನ ಪಟ್ಟರು.

ಗೋಲು ಬಾರಿಸಲು ವಿಫಲ

ಕೊಲಂಬಿಯಾ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊಗೆ 63 ನೇ ನಿಮಿಷದಲ್ಲಿ, ಅದ್ಭುತವಾದ ಕ್ರಾಸ್ ಸಿಕ್ಕಿತು, ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು. ಅವರು ಹೆಡರ್ ಅವಕಾಶವನ್ನು ಕೈ ಚೆಲ್ಲಿದರು. ಈ ಪಂದ್ಯದಲ್ಲಿ ರೊನಾಲ್ಡೊ ಅವರ ಪ್ರಯತ್ನಗಳಿಗೆ ಯಾವುದೇ ಕೊರತೆ ಕಾಣಲಿಲ್ಲ. ಅವರು ಬೈಸಿಕಲ್ ಕಿಕ್‌ಗಳನ್ನು ಪ್ರಯತ್ನಿಸಿದರು, ಎಡಗಾಲಿನ ಹೊಡೆತಗಳನ್ನು ಪ್ರಯತ್ನಿಸಿದರು ಮತ್ತು ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅವರ ಹೆಚ್ಚಿನ ಪ್ರಯತ್ನಗಳನ್ನು ಡಿಫೆಂಡರ್‌ಗಳು ತಡೆದರು.

ಕ್ರಿಸ್ಟಿಯಾನೊ ರೊನಾಲ್ಡೊ 90 ನಿಮಿಷಗಳ ಕಾಲ ಮೈದಾನದಲ್ಲಿ ಇದ್ದರೂ ಸಹ ಒಂದೇ ಒಂದು ದೊಡ್ಡ ಅವಕಾಶವನ್ನು ಸೃಷ್ಟಿಸಲಿಲ್ಲ ಎಂಬುದೇ ಅಭಿಮಾನಿಗಳಲ್ಲಿ ದೊಡ್ಡ ನೋವು ತಂದಿದೆ. ರೊನಾಲ್ಡೊ ಕೊಲಂಬಿಯಾದ ಪೆನಾಲ್ಟಿ ಬಾಕ್ಸ್‌ನಲ್ಲಿ ನಿಂತು ಚೆಂಡಿಗಾಗಿ ತಮ್ಮ ಸಹ ಆಟಗಾರರತ್ತ ಕೈ ಸನ್ನೆ ಮಾಡುತ್ತಾ, ಖಾಲಿ ಜಾಗಗಳನ್ನು ತೋರಿಸುತ್ತಾ ಕಾಯುವುದರಲ್ಲೇ ರೊನಾಲ್ಡೊ ಕಾಲ ಕಳೆದರು ಎಂಬ ಟೀಕೆಗಳು ಕೇಳಿ ಬರುತ್ತಿವೆ.

ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್ ನೀಡುತ್ತಿರುವ ಸಾಧಾರಣ ಪ್ರದರ್ಶನವು ತಂಡದ ಮ್ಯಾನೇಜರ್ ರಾಬರ್ಟೊ ಮಾರ್ಟಿನೆಜ್ ಅವರ ರಣತಂತ್ರದ ಮೇಲೆ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದರೂ ಯಾವುದೇ ಸ್ಪಷ್ಟ ಆಕ್ರಮಣಕಾರಿ ಯೋಜನೆ ಕಾಣಿಸುತ್ತಿಲ್ಲ ಎಂದು ಪಂಡಿತರು ತಿಳಿಸಿದ್ದಾರೆ.

Story first published: Sunday, June 28, 2026, 15:44 [IST]
Other articles published on Jun 28, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+