ಐ-ಲೀಗ್: ಹಾಲಿ ಚಾಂಪಿಯನ್ ಚೆನ್ನೈ ಸಿಟಿಗೆ ಆಘಾತವಿತ್ತ ರಿಯಲ್ ಕಾಶ್ಮೀರ್!

ಶ್ರೀನಗರ್, ಡಿಸೆಂಬರ್ 26: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ್‌ನ ಟಿಆರ್‌ಸಿ ಮೈದಾನದಲ್ಲಿ ಗುರುವಾರ (ಡಿಸೆಂಬರ್ 26) ನಡೆದ ಇಂಡಿಯನ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ರಿಯಲ್ ಕಾಶ್ಮೀರ್ ತಂಡ ಚೊಚ್ಚಲ ಗೆಲುವನ್ನಾಚರಿಸಿದೆ. ಕಾಶ್ಮೀರ್ ತಂಡವು ಹಾಲಿ ಚಾಂಪಿಯನ್ ಚೆನ್ನೈ ಸಿಟಿ ಎಫ್‌ಸಿ ತಂಡವನ್ನು ಸೋಲಿಸಿ ಬೆರಗು ಮೂಡಿಸಿದೆ.
2-1 ಅಂತರದಿಂದ ಹಾಲಿ ಚಾಂಪಿಯನ್ ಚೆನ್ನೈಗೆ ಮುಖಭಂಗ ಅನುಭವಿಸುವಂತೆ ಮಾಡಿದ ಕಾಶ್ಮೀರ ಪರ ದಾನೀಶ್ ಫಾರೂಖ್ ಮೊದಲ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾಗಿ ಬಾಝಿ ಅರ್ಮಂಡ್ ಎರಡನೇ ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.
ಪಂದ್ಯಾರಂಭಗೊಂಡ 22ನೇ ನಿಮಿಷದಲ್ಲಿ ಕಾಲ್ಚಳಕ ತೋರಿಸಿದ ದಾನೀಶ್ ಫಾರೂಖ್ ಭಟ್ ಮೊದಲ ಗೋಲ್ ಬಾರಿಸಿ ರಿಯಲ್ ಕಾಶ್ಮೀರ್‌ಗೆ ಹುಮ್ಮಸ್ಸು ತುಂಬಿದರು. ಅದಾಗಿ ಮತ್ತೆ ಪಂದ್ಯದ ಪ್ರಥಮಾರ್ಧದಲ್ಲೇ ಕಾಶ್ಮೀರದಿಂದ 2ನೇ ಗೋಲ್ ದಾಖಲಾಯಿತು.
27ನೇ ನಿಮಿಷದಲ್ಲಿ ಬಾಝಿ ಅರ್ಮಂಡ್ 2ನೇ ಗೋಲ್ ಬಾರಿಸಿ ಎದುರಾಳಿ ಚೆನ್ನೈ ತಂಡವನ್ನು ಕಂಗೆಡಿಸಿದರು. ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಲಿದ್ದ ಚೆನ್ನೈ ಪರ 48ನೇ ನಿಮಿಷದಲ್ಲಿ ಸೈಯ್ಯದ್ ಸುಹೇಲ್ ಪಾಷಾ ಗೋಲ್ ಬಾರಿಸಿ ಸೋಲಿನ ಅಂತರವನ್ನು ಕಿರಿದುಗೊಳಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications