ನನ್ನ ಫುಟ್ಬಾಲ್ ಆಟ ಆನಂದಿಸುತ್ತಿದ್ದೇನೆ, ಸದ್ಯಕ್ಕೆ ದೂರ ಹೋಗಲ್ಲ: ಛೆಟ್ರಿ

ನವದೆಹಲಿ, ಜೂನ್ 12: ನಾನು ನನ್ನ ಫುಟ್ಬಾಲ್ ಆಟವನ್ನು ಆನಂದಿಸುತ್ತಿದ್ದೇನೆ. ಶೀಘ್ರ ಆಟ ನಿಲ್ಲಿಸಿ ದೂರ ಹೋಗುತ್ತಿಲ್ಲ ಎಂದು ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಹೇಳಿದ್ದಾರೆ. ಛೆಟ್ರಿ ನಿವೃತ್ತಿ ಬಗ್ಗೆ ಗಾಳಿ ಸುದ್ದಿಗಳು ಹರಿದಾಡಿದ್ದರಿಂದ ಛೆಟ್ರಿ ಹೀಗೆ ಪ್ರತಿಕ್ರಿಯಿಸಿದ್ದಾರೆ.
35ರ ಹರೆಯದ ಸುನಿಲ್ ಛೆಟ್ರಿ ಅತೀ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಮತ್ತು ಅತೀ ಹೆಚ್ಚು ಅಂತಾರಾಷ್ಟ್ರೀಯ ಗೋಲುಗಳನ್ನು ಬಾರಿಸಿರುವ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. ಇನ್ನೂ 3-4 ವರ್ಷಗಳ ಕಾಲ ತಾನು ಫುಟ್ಬಾಲ್‌ನಲ್ಲಿ ಮುಂದುವರೆಯಲಿದ್ದೇನೆ. ನಿವೃತ್ತಿ ವಿಚಾರ ಸದ್ಯಕ್ಕಂತೂ ತಲೆಯಲ್ಲಿಲ್ಲ ಎಂದವರು ಹೇಳಿದ್ದಾರೆ.
'ಇನ್ನೆಷ್ಟು ವರ್ಷಗಳ ಕಾಲ ನಾನು ಆಟದಲ್ಲಿ ಮುಂದುವರೆಯುತ್ತೇನೆ ಎಂದು ಸಂಖ್ಯೆಯಲ್ಲಿ ತಿಳಿಸಲು ನಾನು ಇಷ್ಟಪಡಲಾರೆ. ನಾನು ನನ್ನ ಫುಟ್ಬಾಲ್ ಆಟವನ್ನು ಆನಂದಿಸುತ್ತಿದ್ದೇನೆ. ಶೀಘ್ರದಲ್ಲಿ ಇದರಿಂದ ದೂರ ಸರಿಯಲಾರೆ,' ಎಂದು ಇಂಡಿಯನ್ ಫುಟ್ಬಾಲ್ ಟೀಮ್‌ನ ಲೈವ್ ಚಾಟ್‌ನಲ್ಲಿ ಮಾತನಾಡುತ್ತ ಛೆಟ್ರಿ ಹೇಳಿಕೊಂಡಿದ್ದಾರೆ.
'ನಾನು ಸಾಕಷ್ಟು ಫಿಟ್ ಆಗಿದ್ದೇನೆ. ನಾನು ಉದಾಂತ ಮತ್ತು ಆಶಿಕ್ ಕುರುಣಿಯನ್‌ಗೆ (ಇಬ್ಬರೂ ಭಾರತ ತಂಡ ಮತ್ತು ಬೆಂಗಳೂರು ಎಫ್‌ಸಿಯಲ್ಲಿ ಛೆಟ್ರಿಯ ಸಹ ಆಟಗಾರರು) ಓಟದಲ್ಲಿ ಚಾಲೆಂಜ್ ಮಾಡಬಲ್ಲೆ ಎಂದು ನನ್ನ ಹೆಂಡತಿ ಜೊತೆ ಹೇಳಿದ್ದೇನೆ,' ಎಂದಿರುವ ಛೆಟ್ರಿ ತಾನು ಈಗಲೂ ಫಿಟ್ ಆಗಿರುವುದಾಗಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications