ರಿಯಲ್ ತೊರೆದು ಯುವೆಂಟಸ್ ಸೇರಿದ್ದಕ್ಕೆ ಕಾರಣ ಬಾಯ್ಬಿಟ್ಟ ರೊನಾಲ್ಡೊ


ಮ್ಯಾಡ್ರಿಡ್, ಜುಲೈ 17: ರಿಯಲ್ ಮ್ಯಾಡ್ರಿಡ್ ತಂಡದಲ್ಲಿ ಮಿಂಚಿದ್ದ ಪೋರ್ಚುಗಲ್ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ ತಾನು ರಿಯಲ್ ಮ್ಯಾಡ್ರಿಡ್ ತೊರೆದು ಯುವೆಂಟಸ್ ಸೇರಿಕೊಂಡಿದ್ದೇಕೆ ಎಂಬುದನ್ನು ತಿಳಿಸಿದ್ದಾರೆ. ಚಾಂಪಿಯನ್ ಲೀಗ್ಸ್ ಪ್ರಶಸ್ತಿ ಗೆಲ್ಲಿಸಿ ಕೊಡುವುದಕ್ಕೋಸ್ಕರ ತಾನು ಯುವೆಂಟಸ್ ಸೇರಿರುವುದಾಗಿ ಅವರು ಹೇಳಿದ್ದಾರೆ.
ಸೋಮವಾರ (ಜುಲೈ 16) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೊನಾಲ್ಡೊ, ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನಗೆ ಚಾಂಪಿಯನ್ಸ್ ಲೀಗ್ ಗೆಲ್ಲುವ ಗೀಳಿಲ್ಲ. ಆದರೆ ಎರಡು ದಶಕಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ಸ್ ಲೀಗ್ ಗೆಲ್ಲಲು ಯುವೆಂಟಸ್ ತಂಡಕ್ಕೆ ನೆರವಾಗಬೇಕು ಎಂಬ ಕಾರಣಕ್ಕೆ ತಾನು ಹೊಸ ತಂಡವನ್ನು ಸೇರಿದ್ದಾಗಿ ಕ್ರಿಸ್ಚಿಯಾನೊ ತಿಳಿಸಿದ್ದಾರೆ.
ರಿಯಲ್ ಮ್ಯಾಡ್ರಿಡ್ ತಂಡವನ್ನು ಪ್ರತಿನಿಧಿಸಿ ರೊನಾಲ್ಡೊ ಕಳೆದ ಮೂರು ಸೀಸನ್ ನಲ್ಲಿ ಚಾಂಪಿಯನ್ಸ್ ಲೀಗ್ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಈವರೆಗೆ ಒಟ್ಟು ಐದು ಚಾಂಪಿಯನ್ಸ್ ಲೀಗ್ ಗೆದ್ದಿರುವ ಹಿರಿಮೆಯೂ ರೊನಾಲ್ಡೊ ಅವರದ್ದು. ಆದರೆ ಯುವೆಂಟಸ್ ಈವರೆಗೆ ಎರಡುಬಾರಿ ಚಾಂಪಿಯನ್ಸ್ ಲೀಗ್ ಗೆದ್ದಿದೆ. ಕಡೆಯಸಾರಿ 1996ರಲ್ಲಿ ಚಾಂಪಿಯನ್ಸ್ ಲೀಗ್ ಗೆದ್ದಿರುವ ಯುವೆಂಟಸ್ ಆನಂತರ 2 ವರ್ಷಗಳ ಅವಧಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು.
ಈ ಬಗ್ಗೆ ಮಾತನಾಡುತ್ತ ರೊನಾಲ್ಡೊ, 'ಚಾಂಪಿಯನ್ಸ್ ಲೀಗ್ ಗೆಲ್ಲೋದೊಂದು ಗೀಳೆಂದು ನಾನು ಭಾವಿಸುವುದಿಲ್ಲ. ಪೋರ್ಚುಗಲ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡೆ ಸೌಸ ಅವರು ಹೇಳುವಂತೆ, ಪ್ರಶಸ್ತಿ ಗೆಲ್ಲೋದು ಒಂದು ಗೀಳಲ್ಲ; ಅದೊಂದು ಕನಸು. ಹಾಗಾಗಿ ಯುವೆಂಟಸ್ ಕನಸು ಸಾಕಾರಗೊಳ್ಳಲು ಬೇಕಾದ ಸಹಾಯ ನೀಡಲು ನಾನಿಲ್ಲಿಗೆ ಬಂದಿದ್ದೇನೆ' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications