ಐಎಸ್ಎಲ್ ಚಿತ್ರಗಳು: ಐಶ್ವರ್ಯಾ, ರಜನಿ, ಸಚಿನ್ ಮಿಂಚು
ಚೆನ್ನೈ, ಅ.04: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ನ ಎರಡನೇ ಆವೃತ್ತಿಗೆ ಚೆನ್ನೈನ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ಅದ್ದೂರಿ ಚಾಲನೆ ಸಿಕ್ಕಿದೆ. ನಟಿ ಐಶ್ವರ್ಯಾ ರೈ ಬಚ್ಚನ್ ನೃತ್ಯ ಹಾಗೂ ಎಆರ್ ರೆಹಮಾನ್ ಸಂಗೀತದ ಅಲೆಯಲ್ಲಿ ತೇಲಿದರು.
ಸುಮಾರು 45 ನಿಮಿಷಗಳ ಕಾಲ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಸೂಪರ್ ಸ್ಟಾರ್ ರಜನಿಕಾಂತ್, ಉದ್ಯಮಿ ಮುಖೇಶ್ ಅಂಬಾನಿ, ನೀತಾ ಅಂಬಾನಿ ಹಾಗೂ ಬಿಗ್ ಬಿ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.[ದಂತಕತೆ ಪೀಲೆ ಬರ್ತಾರೆ: ಗಂಗೂಲಿ]
ತಮಿಳುನಾಡಿನ ಕಲೆ, ಸಂಸ್ಕೃತಿ ಅನಾವರಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ನಟ ಅರ್ಜುನ್ ಕಪೂರ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಟ್ಲೆಟಿಕೊ ಕೋಲ್ಕತಾ ತಂಡ 3-2 ಗೋಲುಗಳಿಂದ ಆತಿಥೇಯ ಚೆನ್ನೈಯಿನ್ ಎಫ್ಸಿ ತಂಡವನ್ನು ಸೋಲಿಸಿತು.[ಸ್ಟಾರ್ ಆಟಗಾರ ಸುನಿಲ್ ಮುಂಬೈ ಕ್ಲಬ್ ಪಾಲು]
ಚೆನ್ನೈ ತಂಡಕ್ಕೆ ಅಭಿಷೇಕ್ ಬಚ್ಚನ್ ಹಾಗೂ ಕೋಲ್ಕತಾ ತಂಡಕ್ಕೆ ಕ್ರಿಕೆಟರ್ ಸೌರವ್ ಗಂಗೂಲಿ ಸಹ ಮಾಲೀಕರಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಕೇರಳ ಬ್ಲಾಸ್ಟರ್ ತಂಡದ ಸಹ ಮಾಲೀಕರಾಗಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಫುಟ್ಬಾಲ್ ಚೆಂಡನ್ನು ಹಿಡಿದುಕೊಂಡು ವೇದಿಕೆಗೆ ಪ್ರವೇಶಿಸುತ್ತಿದ್ದಂತೆ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತು.ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ...

ಮೊದಲ ಪಂದ್ಯದಲ್ಲಿ ಕೋಲ್ಕತ್ತಾಕ್ಕೆ ಭರ್ಜರಿ ಗೆಲುವು
ಪೋರ್ಚುಗಲ್ ತಂಡದ ಪರ ವಿಶ್ವಕಪ್ ಆಡಿದ ಅನುಭವ ಹೊಂದಿರುವ ಹೆಲ್ಡರ್ ಪೋಸ್ಟಿಂಗ ಅವರು ಅಥ್ಲೆಟಿಕೋ ಡಿ ಕೋಲ್ಕತ್ತಾ ಪರ ಎರಡು ಗೋಲು( 13 ಹಾಗೂ 70ನೇ ನಿಮಿಷ) ಹಾಗೂ ಸ್ಪೇನ್ನ ವಾಲ್ಡೋ (76) ಗೋಲು ಗಳಿಸಿ ಕೋಲ್ಕತ್ತಾಗೆ ಜಯ ತಂದಿತ್ತರು. ಚೆನ್ನೈ ಪರ ಜೆಜಿ ಲಾಲ್ಪೆಖುಲಾ (31) ಹಾಗೂ ನಾಯಕ ಎಲಾನೊ ಬ್ಲೂಮೆರ್ (89) ಗೋಲು ಗಳಿಸಿದರು.

ನಟಿ ಐಶ್ವರ್ಯಾ ರೈ ಕುಟುಂಬ
ಚೆನ್ನೈಯಿನ್ ಫುಟ್ಬಾಲ್ ಕ್ಲಬ್ ಸಹ ಒಡೆಯ ಅಭಿಷೇಕ್ ಬಚ್ಚನ್, ನಟಿ ಐಶ್ವರ್ಯಾ ರೈ ಕುಟುಂಬ

ಐಎಸ್ಎಲ್ ಆರಂಭಕ್ಕೆ ಸೂಪರ್ಸ್ಟಾರ್ ಗಳು
ಸಚಿನ್ ತೆಂಡೂಲ್ಕರ್, ರಜನಿಕಾಂತ್, ನೀತೂ ಅಂಬಾನಿ, ಐಶ್ವರ್ಯಾ ರೈ, ಅಲಿಯಾ ಭಟ್ ಜೊತೆ ಅರ್ಜುನ್ ಕಪೂರ್ ಸೆಲ್ಫಿ

ಉದ್ಯಮಿ ಅಂಬಾನಿ ಜೊತೆ ರಜನಿಕಾಂತ್
ಉದ್ಯಮಿ ಮುಖೇಶ್ ಅಂಬಾನಿ ಜೊತೆ ಕುಳಿತು ಪಂದ್ಯ ವೀಕ್ಷಿಸಿದ ಸೂಪರ್ ಸ್ಟಾರ್ ರಜನಿಕಾಂತ್

ಅರ್ಜುನ್ ಕಪೂರ್ ನಿರೂಪಣೆ
ಅರ್ಜುನ್ ಕಪೂರ್ ನಿರೂಪಣೆ, ನಟಿ ಐಶ್ವರ್ಯಾ ರೈ, ಆಲಿಯಾ ಭಟ್ ಹಾಗೂ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಕಾರ್ಯಕ್ರಮ ಜನಮೆಚ್ಚುಗೆ ಗಳಿಸಿತು.

ಐಶ್ವರ್ಯಾರೈ ನೃತ್ಯದ ಝಲಕ್
ನಟಿ ಐಶ್ವರ್ಯಾರೈ ಸಾಂಪ್ರದಾಯಿಕ ನೃತ್ಯದ ಝಲಕ್

ಐಶ್ವರ್ಯಾ ರೈ
ದೇವದಾಸ್ ಚಿತ್ರದ ‘ಡೋಲಾ ರೆ ಡೋಲಾ' ಹಾಗೂ ‘ಧೂಮ್ ಚಿತ್ರದ ‘ಧೂಮ್ ಧೂಮ್ ಹಾಡಿಗೆ ಐಶ್ವರ್ಯಾ ರೈ ಹೆಜ್ಜೆ ಹಾಕಿದರು.

ತಾರೆಗಳ ಗುಂಪಿನ ಸೆಲ್ಫಿ
ಐಎಸ್ಎಲ್ ಪ್ರವರ್ತಕಿ ನೀತಾ ಅಂಬಾನಿ ಜೊತೆ ತಾರೆಗಳ ಗುಂಪಿನ ಸೆಲ್ಫಿ

ಆಲಿಯಾ ಭಟ್ ನೃತ್ಯ ಭಂಗಿ
ಮಹೇಶ್ ಭಟ್ ಪುತ್ರಿ ಆಲಿಯಾ ಭಟ್ ನೃತ್ಯ ಭಂಗಿ

ಶೈಮಕ್ ದವಾರ್
ನೃತ್ಯ ಸಂಯೋಜಕ ಶೈಮಕ್ ದವಾರ್ ಗೆ ಐಶ್ವರ್ಯಾ ರೈ ಧನ್ಯವಾದ ಅರ್ಪಿಸಿದ್ದು ಹೀಗೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications