ಫುಟ್ಬಾಲ್: ಬಲಿಷ್ಠ ಇರಾಕ್‌ಗೆ ಆಘಾತ ನೀಡಿದ ಭಾರತದ ಕಿರಿಯರು

ಅಮ್ಮಾನ್, ಆಗಸ್ಟ್ 6: ಜೋರ್ಡಾನ್‌ನಲ್ಲಿ ನಡೆಯುತ್ತಿರುವ ಡಬ್ಲ್ಯೂಎಎಫ್ಎಫ್ ಅಂಡರ್ 16 ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬಲಿಷ್ಠ ಇರಾಕ್ ತಂಡವನ್ನು ಭಾರತದ ಕಿರಿಯರು 1-0 ಗೋಲುಗಳಿಂದ ಸೋಲಿಸಿದ್ದಾರೆ.
ಹಾಲಿ ಏಷ್ಯಾ ಕಪ್ ಅಂಡರ್ 16 ಚಾಂಪಿಯನ್ ವಿರುದ್ಧದ ಪಂದ್ಯದ ಕೊನೆಯ ಕ್ಷಣದಲ್ಲಿ ಭುವನೇಶ್ ಗಳಿಸಿದ ಗೋಲು ಭಾರತಕ್ಕೆ ಜಯ ತಂದುಕೊಟ್ಟಿತು. ಇದು ಫುಟ್ಬಾಲ್ ಇತಿಹಾಸದಲ್ಲಿ, ಯಾವುದೇ ವಿಭಾಗದ ಫುಟ್ಬಾಲ್ ಸ್ಪರ್ಧೆ ಹಾಗೂ ಯಾವುದೇ ವಯಸ್ಸಿನ ವಿಭಾಗದಲ್ಲಿ ಇರಾಕ್ ವಿರುದ್ಧ ಭಾರತದ ಮೊದಲ ಗೆಲುವಾಗಿದೆ.
ಈ ಗೆಲುವನ್ನು ಎಐಎಫ್ಎಫ್ ಅಕಾಡೆಮಿ ಹಾಗೂ ರಾಷ್ಟ್ರೀಯ ತಂಡಕ್ಕೆ ಸೇರುವ ಮುನ್ನ ಹುಡುಗರಿಗೆ ತರಬೇತಿ ನೀಡಿದ ಎಲ್ಲ ಕೋಚ್‌ಗಳಿಗೆ ಅರ್ಪಿಸುತ್ತೇನೆ ಎಂದು ಅಂಡರ್ 16 ತಂಡದ ಕೋಚ್ ಬಿಬಿಯಾನೋ ಫರ್ನಾಂಡಿಸ್ ಹೇಳಿದ್ದಾರೆ.
'ನಾವು ಮೊದಲು ನಮ್ಮನ್ನು ನಂಬಲು ಆರಂಭಿಸಬೇಕಿದೆ. ಯಾವಾಗಲೂ ನಮ್ಮ ಪರವಾಗಿ ನಿಲ್ಲುವ ಅಭಿಮಾನಿಗಳಿಗೆ ಮತ್ತು ಭಾರತದ ಫುಟ್ಬಾಲ್‌ನ ಹಿತೈಷಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ' ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಉಭಯ ತಂಡಗಳು ನೇಪಾಳದಲ್ಲಿ ನಡೆದ ಎಎಫ್‌ಸಿ ಅಂಡರ್ 16 ಅರ್ಹತಾ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಅದು ಗೋಲುಗಳಿಲ್ಲದೆ ಡ್ರಾದಲ್ಲಿ ಕೊನೆಗೊಂಡಿತ್ತು.
ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಭಾರತ, ಬಲಿಷ್ಠ ಇರಾಕ್ ತಂಡಕ್ಕೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಕೆಲವೇ ನಿಮಿಷಗಳು ಇರುವಾಗ ಭುವನೇಶ್ ಕಾಲ್ಚಳಕ ಭಾರತಕ್ಕೆ ಒಂದು ಗೋಲು ತಂದುಕೊಟ್ಟಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications